ಬ್ಯಾಂಕ್ ಗಳು ನಾನಾ ಬಗೆಯ ಸಾಲಗಳನ್ನು ನೀಡುತ್ತವೆ. ಆದರೆ ಹೋಮ್ ಲೋನ್ ನೀಡುವುದಕ್ಕೆ ಅಂತಲೇ ಕೆಲವು ಸಂಸ್ಥೆಗಳು ಇದ್ದು, ಮುಖ್ಯವಾಗಿ ಆ ವ್ಯವಹಾರದ ಮೇಲೆ ಗಮನ ಇರಿಸಿರುತ್ತವೆ. ಇಂಥ ಹೋಮ್ ಫೈನಾನ್ಸ್ ಸಂಸ್ಥೆಗಳು ಸಾಲ ಪಡೆಯುವವರ ಅರ್ಹತೆ ಮತ್ತಿತರ ಅಂಶಗಳನ್ನು ಗಮನಿಸಿ, ಸುಲಭವಾಗಿ- ದಾಖಲಾತಿಗಳ ಸಮಸ್ಯೆ ಇಲ್ಲದಂತೆ ಸಾಲ ನೀಡುತ್ತವೆ.
ಸಾಲ ಪಡೆಯುವವರಿಗೆ ಅತ್ಯಂತ ಕಡಿಮೆ ಬಡ್ಡಿ ದರ ಸಿಗಬೇಕೆಂದರೆ ಆ ಸಂಸ್ಥೆ ನಿರೀಕ್ಷಿಸುವ ಮಾನದಂಡಗಳನ್ನು ಪೂರೈಸಬೇಕು. ಸದ್ಯಕ್ಕೆ ಎಚ್ ಡಿಎಫ್ ಸಿಯಿಂದ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡಲಾಗುತ್ತಿದೆ. ವಾರ್ಷಿಕ ಬಡ್ಡಿ ದರ 6.95% ಇದೆ. ಬ್ಯಾಂಕ್ ಗಳಿಗಿಂತಲೂ ಅತ್ಯಂತ ಕಡಿಮೆ ಬಡ್ಡಿ ದರ ಇದು.
ಭಾರತದಲ್ಲಿ ಹೋಮ್ ಫೈನಾನ್ಸ್ ಕಂಪೆನಿಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸಂಸ್ಥೆಗಳು ಮತ್ತು ಅವಧಿಯ ಮಾಹಿತಿ ಇಲ್ಲಿದೆ. ಇದು ಆ ಸಂಸ್ಥೆಯ ಅರ್ಹತಾ ಮಾನದಂಡಗಳನ್ನು ಪೂರೈಸುವವರಿಗೆ ಅನ್ವಯ ಆಗುತ್ತದೆ.

* ಎಚ್ ಡಿಎಫ್ ಸಿ 6.95% (30 ವರ್ಷದ ತನಕ ಅವಧಿ)
* ಬಜಾಜ್ ಹೌಸಿಂಗ್ ಫೈನಾನ್ಸ್ 7.50% (20 ವರ್ಷದ ತನಕ ಅವಧಿ)
* ಪಿಎನ್ ಬಿ ಹೌಸಿಂಗ್ ಫೈನಾನ್ಸ್ 8.60% (30 ವರ್ಷದ ತನಕ ಅವಧಿ)
* IIFL ಹೋಮ್ ಲೋನ್ 8.70% (20 ವರ್ಷದ ತನಕ ಅವಧಿ)
* ದಿವಾನ್ ಹೌಸಿಂಗ್ 8.75% (30 ವರ್ಷದ ತನಕ ಅವಧಿ)
* ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ 8.99% (30 ವರ್ಷದ ತನಕ ಅವಧಿ)
* ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ 9.00% (30 ವರ್ಷದ ತನಕ ಅವಧಿ)
* GIC ಹೌಸಿಂಗ್ ಫೈನಾನ್ಸ್ 9.10% (30 ವರ್ಷದ ತನಕ ಅವಧಿ)
* ಪಿರಾಮಲ್ ಹೌಸಿಂಗ್ ಫೈನಾನ್ಸ್ 9.65% (30 ವರ್ಷದ ತನಕ ಅವಧಿ)


Click it and Unblock the Notifications