ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2022ರ ಮೇ ತಿಂಗಳಿನಿಂದ ಈವರೆಗೆ ಒಟ್ಟಾಗಿ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರವನ್ನು ಪರಿಷ್ಕರಣೆ ಮಾಡಿದೆ. ಆರ್‌ಬಿಐ ಈ ಕ್ರಮವನ್ನು ಕೈಗೊಂಡ ಬಳಿಕ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಏರಿಸುತ್ತಾ ಬಂದಿದೆ. ಇದರಿಂದಾಗಿ ಗ್ರಾಹಕರಿಗೆ ಇಎಂಐ ಪಾವತಿಯ ಹೊರೆ ಅಧಿಕವಾಗಿದೆ. ಆದರೆ ಕೆಲವು ಬ್ಯಾಂಕುಗಳು ಈಗಲೂ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ.
ಸಾರ್ವಜನಿಕ ಬ್ಯಾಂಕ್ ಆದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸಾಲಕ್ಕೆ ಶೇಕಡ 8.55ರಷ್ಟು ಬಡ್ಡಿದರವನ್ನು ನೀಡುತ್ತದೆ. ಸುಮಾರು 75 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ಅದರ ಸಾಲ ಮರುಪಾವತಿ ಅವಧಿ 20 ವರ್ಷ ಅಂದುಕೊಳ್ಳಿ, ಈ ಲೆಕ್ಕಾಚಾರದಲ್ಲಿ ನೀವು 65,324 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಕ್ಕೆ ಶೇಕಡ 8.60ರಷ್ಟು ಬಡ್ಡಿದರವನ್ನು ನೀಡುತ್ತದೆ. 20 ವರ್ಷದ ಅವಧಿಗೆ ನೀವು ಮಾಸಿಕವಾಗಿ 65,662 ರೂಪಾಯಿ ಇಎಂಐ ಪಾವತಿಸಬೇಕಾಗುತ್ತದೆ.

ಇತರೆ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರ ಎಷ್ಟಿದೆ?
ಕೋಟಕ್ ಮಹೀಂದ್ರಾ ಬ್ಯಾಂಕ್ ಗೃಹ ಸಾಲಕ್ಕೆ ಅತೀ ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಅಂದರೆ ಗೃಹ ಸಾಲಕ್ಕೆ ಶೇಕಡ 8.65ರಷ್ಟು ಬಡ್ಡಿದರವನ್ನು ನೀಡುತ್ತದೆ. ಸುಮಾರು 75 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ಅದರ ಸಾಲ ಮರುಪಾವತಿ ಅವಧಿ 20 ವರ್ಷ ಆಗಿದ್ದಾಗ, ಪ್ರತಿ ತಿಂಗಳ ಇಎಂಐ 65,801 ರೂಪಾಯಿ ಆಗಿದೆ. ಇನ್ನು ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಗೃಹ ಸಾಲಕ್ಕೆ ಶೇಕಡ 8.45ರಷ್ಟು ಬಡ್ಡಿದರವನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 75 ಲಕ್ಷ ರೂಪಾಯಿ ಗೃಹ ಸಾಲಕ್ಕೆ, 20 ವರ್ಷದ ಅವಧಿಗೆ ಮಾಸಿಕವಾಗಿ 64,850 ಇಎಂಐ ಪಾವತಿಸಬೇಕಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹೊರತಾಗಿ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್‌ನ ಅತೀ ಅಧಿಕ ಬಡ್ಡಿದರ ಶೇಕಡ 8.75ರಷ್ಟು ಆಗಿದೆ. 75 ಲಕ್ಷ ರೂಪಾಯಿ ಗೃಹ ಸಾಲಕ್ಕೆ, 20 ವರ್ಷದ ಅವಧಿ ಎಂದುಕೊಂಡಾಗ ಗೃಹ ಸಾಲವನ್ನು ಪಡೆದವರು ಮಾಸಿಕವಾಗಿ 66,278 ರೂಪಾಯಿ ಇಎಂಐ ಅನ್ನು ಪಾವತಿಸಬೇಕಾಗುತ್ತದೆ.
ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರ ಬೇರೆ ಬೇರೆ ರೀತಿಯಾಗಿರುತ್ತದೆ. ಆದ್ದರಿಂದಾಗಿ ನಾವು ಗೃಹ ಸಾಲವನ್ನು ಪಡೆಯುವುದಕ್ಕೂ ಮುನ್ನ ಎಲ್ಲ ಬ್ಯಾಂಕುಗಳ ಬಡ್ಡಿದರವನ್ನು ನೋಡುವುದು ಮುಖ್ಯವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ತಿಂಗಳಿನಲ್ಲಿ 40 ಮೂಲಾಂಕ ರೆಪೋ ದರ ಏರಿಸಿದ್ದರೆ, ಅದಾದ ಬಳಿಕ ಆರ್‌ಬಿಐ ಜೂನ್, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಡಿಸೆಂಬರ್ 35 ಬಿಪಿಎಸ್ ಹೆಚ್ಚಿಸಲಾಗಿದೆ. ಫೆಬ್ರವರಿ 25 ಮೂಲಾಂಕ ಏರಿಸಿದ್ದು, ರೆಪೋ ದರ ಶೇಕಡ 6.50 ಆಗಿದೆ.


Click it and Unblock the Notifications