ಗೃಹ ಸಾಲದಂಥ ದೀರ್ಘಾವಧಿ ಸಾಲಗಳು 15ರಿಂದ 25 ವರ್ಷಗಳ ತನಕ ಮರುಪಾವತಿ ಮಾಡಬೇಕಾಗಿರುತ್ತದೆ. ಹಲವರು ಇಂಥ ಸಾಲಗಳನ್ನು ಶೀಘ್ರವಾಗಿ ಮರುಪಾವತಿ ಮಾಡಬೇಕು ಅಂದುಕೊಳ್ಳುತ್ತಾರಾದರೂ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಒಂದೋ ಶೀಘ್ರವಾಗಿ ಸಾಲ ಮರುಪಾವತಿ ಮಾಡುವುದರ ಫಾಯಿದೆ ಏನು ಎಂಬುದು ಗೊತ್ತಿರುವುದಿಲ್ಲ ಅಥವಾ ಅಗತ್ಯ ಪ್ರಮಾಣದಲ್ಲಿ ಹಣ ಇರುವುದಿಲ್ಲ.
ಸಣ್ಣ ಪ್ರಮಾಣದಲ್ಲಿ ಇಎಂಐ ಹೆಚ್ಚಿಗೆ ಪಾವತಿ ಮಾಡಿದರೂ ಅದು ಹೇಗೆ ಸಾಲ ಮರುಪಾವತಿ ವೇಗವನ್ನು ಹೆಚ್ಚು ಮಾಡುತ್ತದೆ ಎಂಬ ಅಂದಾಜು ಕೂಡ ಬಹಳ ಮಂದಿ ಮಾಡಿರಲಿಕ್ಕಿಲ್ಲ. ಅದರಲ್ಲೂ ದಿನದಿಂದ ದಿನಕ್ಕೆ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಕಾಣುತ್ತಿರುವ ಸಮಯದಲ್ಲಿ ಇದು ಬಹಳ ಪ್ರಯೋಜನಕಾರಿ.
ನೀವೇಕೆ ಇಎಂಐ ಹೆಚ್ಚಿಸಬೇಕು?
ಇಎಂಐ (ಈಕ್ವಲ್ ಮಂತ್ಲಿ ಇನ್ ಸ್ಟಾಲ್ ಮೆಂಟ್) ಹೆಚ್ಚು ಮಾಡುವುದರಿಂದ ಸಾಲದಿಂದ ವೇಗವಾಗಿ ಹೊರಬರುವುದಕ್ಕಷ್ಟೇ ಅಲ್ಲ, ಹೆಚ್ಚಿನ ಬಡ್ಡಿ ಕಟ್ಟುವುದರಿಂದಲೂ ತಪ್ಪಿಸಿಕೊಳ್ಳಬಹುದು. ನೀವೇಷ್ಟು ದೀರ್ಘಾವಧಿಯ ಸಾಲವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅಷ್ಟು ಹೆಚ್ಚು ಬಡ್ಡಿಯನ್ನು ಕಟ್ಟುತ್ತೀರಿ. ಮನೆ ಸಾಲದ ಮೊತ್ತ ಹೆಚ್ಚೇ ಇರುತ್ತದಾದ್ದರಿಂದ ಮಾಲೀಕರು ಸಹ ತಮ್ಮ ಬಜೆಟ್ ಹಿಗ್ಗಿಸುತ್ತಾರೆ. ಆ ಕಾರಣಕ್ಕೆ ಸಾಲ ಮರುಪಾವತಿಯ ಆರಂಭದ ವರ್ಷಗಳಲ್ಲಿ ಹೆಚ್ಚಿನ ಮೊತ್ತ ಕಟ್ಟುವುದು ಕಷ್ಟವಾಗುತ್ತದೆ. ತಜ್ಞರು ಹೇಳುವ ಪ್ರಕಾರ, ಸಾಲ ಪಡೆದವರು ಖರ್ಚಿನಲ್ಲಿ ಒಂದಿಷ್ಟು ಹಿಡಿತ ಸಾಧಿಸಿದರೆ ಮೊದಲ ಮೂರರಿಂದ ಐದು ವರ್ಷದಲ್ಲೇ ಆರ್ಥಿಕ ಸ್ಥಿತಿಯಲ್ಲೇ ಚೇತರಿಕೆ ಕಾಣಬಹುದು. ಆಗ ಮರುಪಾವತಿ ಸಾಮರ್ಥ್ಯವನ್ನು ಮತ್ತೊಮ್ಮೆ ಅಳೆದುಕೊಂಡು, ಇಎಂಐ ಮೊತ್ತವನ್ನು ಸ್ವಲ್ಪವಾದರೂ ಹೆಚ್ಚಿಸಬೇಕು. ಅದು 2 ಸಾವಿರ ರುಪಾಯಿಯಷ್ಟು ಸಣ್ಣ ಮೊತ್ತವಾದರೂ ಸರಿ, ಇದರಿಂದ ಬಾಕಿ ಉಳಿದ ಸಾಲದ ಅವಧಿಯಲ್ಲಿ ಮಹತ್ತರವಾದ ಇಳಿಕೆ ಆಗುವಂತೆ ಮಾಡುತ್ತದೆ.
ಬಡ್ಡಿ ದರ ಇಳಿಯುವಾಗ ಏನು ಮಾಡಬಹುದು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಕಡಿತ ಮಾಡುವಾಗ ಅದರ ಪರಿಣಾಮ ಸಾಲದ ದರದ ಮೇಲೆ ಆಗುತ್ತದೆ. ಸಾಲದ ದರ ಇಳಿಕೆಯಾದರೆ ಬಡ್ಡಿ ದರ ಕೂಡ ಕಡಿಮೆ ಆಗುತ್ತದೆ. ತಜ್ಞರು ಅಭಿಪ್ರಾಯ ಪಡುವಂತೆ, ತಮ್ಮ ಬಾಕಿ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಳಿಯುತ್ತಿರುವ ಬಡ್ಡಿ ದರದ ಸಮಯವೇ ಸೂಕ್ತವಾದದ್ದು. ಬಡ್ಡಿ ದರ ಇಳಿಯುತ್ತಿರುವ ಸನ್ನಿವೇಶದಲ್ಲಿ ಸಾಲ ನೀಡಿರುವ ಸಂಸ್ಥೆಗಳು ಎರಡು ಆಯ್ಕೆ ನೀಡುತ್ತವೆ. ಒಂದೋ, ಇಎಂಐ ಕಡಿಮೆ ಮಾಡಬಹುದು ಅಥವಾ ಅದೇ ಮೊತ್ತದ ಇಎಂಐ ಪಾವತಿಸಿ, ಸಾಲ ಮರುಪಾವತಿ ಅವಧಿಯನ್ನು ಕಡಿಮೆ ಮಾಡಬಹುದು. ಅಂಥ ಸನ್ನಿವೇಶದಲ್ಲಿ ಇಎಂಐ ಕಡಿಮೆ ಮಾಡಿಸದೆ ಮರುಪಾವತಿ ಅವಧಿಯನ್ನು ಇಳಿಸುವುದು ಜಾಣತನ ಆಗುತ್ತದೆ. ಉದಾಹರಣೆಗೆ: ಬಡ್ಡಿ ದರ ಇಳಿಕೆಯಾಗುವಾಗ ಅದೇ ಮೊತ್ತದ ಇಎಂಐ ಪಾವತಿಸುತ್ತಿದ್ದಲ್ಲಿ, 0.5 ಪರ್ಸೆಂಟ್ ಬಡ್ಡಿ ದರ ಇಳಿಕೆಯಾದಾಗ ಇಎಂಐ ಮರುಪಾವತಿ ಅವಧಿಯು ಅಂದಾಜು 4 ಪರ್ಸೆಂಟ್ ಕಡಿಮೆ ಆಗುತ್ತದೆ.
ಭಾಗಶಃ ಮರುಪಾವತಿ ಮಾಡಿ
ಒಂದು ವೇಳೆ ನಿಮ್ಮ ಬಳಿ ಹೆಚ್ಚುವರಿಯಾಗಿ ಹಣವಿದ್ದರೆ ಭಾಗಶಃ ಹಣವನ್ನು ಮುಂಚಿತವಾಗಿ ಪಾವತಿಸಿ. ಫ್ಲೋಟಿಂಗ್ ಬಡ್ಡಿ ದರದಲ್ಲಿ ಸಾಲವನ್ನು ಪಡೆದಿದ್ದರೆ ಭಾಗಶಃ ಪೂರ್ವ ಪಾವತಿಗೆ ಯಾವ ದಂಡ ಹಾಕುವುದಿಲ್ಲ. ಜತೆಗೆ ಭಾಗಶಃ ಮೊತ್ತದ ಸಾಲ ಮರು ಪಾವತಿಯಿಂದ ಆ ತಕ್ಷಣವೇ ಒಟ್ಟು ಸಾಲ ಮೊತ್ತದಲ್ಲಿ ಅಲ್ಪ ಪ್ರಮಾಣ ಕಡಿಮೆ ಆಗುತ್ತದೆ. ಕೆಲವು ಹಣಕಾಸು ಸಂಸ್ಥೆಗಳು ಮುಂಚಿತವಾಗಿ ಸಾಲ ಮರುಪಾವತಿ ಮಾಡುವುದಕ್ಕೆ ಷರತ್ತುಗಳನ್ನು ವಿಧಿಸುತ್ತವೆ. ಆದರೆ ಕೆಲವು ಸಂಸ್ಥೆಗಳಂತೂ ಎಷ್ಟು ಸಲ ಬೇಕಾದರೂ ಭಾಗಶಃ ಹಣ ಮರುಪಾವತಿಗೆ ಅವಕಾಶ ನೀಡುತ್ತದೆ. ಆದ್ದರಿಂದ ಸಾಲ ಪಡೆಯುವಾಗಲೇ ಈ ಬಗ್ಗೆ ಕೇಳಿ ತಿಳಿದುಕೊಂಡಿರಬೇಕು. ಬೋನಸ್, ಇನ್ಸೆಂಟಿವ್, ಬರಬೇಕಾದ ಯಾವುದೇ ಬಾಕಿ ಹಣ ಬಂದಾಗಲೂ ಭಾಗಶಃ ಹಣ ಮರುಪಾವತಿ ಮಾಡಬಹುದು.
ತೆರಿಗೆ ಅನುಕೂಲದ ಬಗ್ಗೆ ತಿಳಿದುಕೊಂಡಿರಿ
ಒಂದು ಆರ್ಥಿಕ ವರ್ಷದಲ್ಲಿ ಗೃಹ ಸಾಲದ ಮೇಲೆ ಪಾವತಿಸುವ 2 ಲಕ್ಷ ತನಕದ ಬಡ್ಡಿ ಪಾವತಿಗೆ ಆದಾಯ ತೆರಿಗೆ ಅನುಕೂಲ ಇರುತ್ತದೆ. ತಜ್ಞರ ಪ್ರಕಾರ, ಹೆಚ್ಚಿನ ತೆರಿಗೆ ಪಾವತಿಸುವವರು ಸಾಲದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. 20 ಪರ್ಸೆಂಟ್ ತೆರಿಗೆ ಬ್ರಾಕೆಟ್ ನಲ್ಲಿ ಬರುವವರು ಒಂದು ವರ್ಷದಲ್ಲಿ 40 ಸಾವಿರ ರುಪಾಯಿ ತನಕ ಉಳಿತಾಯ ಮಾಡಬಹುದು. ಇನ್ನು 30 ಪರ್ಸೆಂಟ್ ಬ್ರಾಕೆಟ್ ನಲ್ಲಿ ಬರುವವರು ಗೃಹ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ 60 ಸಾವಿರ ರುಪಾಯಿ ತನಕ ಉಳಿತಾಯ ಮಾಡುವುದಕ್ಕೆ ಅವಕಾಶ ಇರುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications