For Quick Alerts
ALLOW NOTIFICATIONS  
For Daily Alerts

"ಈ ಹೊಸ ಇನ್ಷೂರೆನ್ಸ್ ಖರೀದಿಸಿದರೆ ಕ್ಲೇಮ್ ಮಾಡಲು ಆಸ್ಪತ್ರೆ ಬಿಲ್ ಬೇಕಿಲ್ಲ"

|

ಫೋನ್ ಪೇ ಜತೆ ಕೈ ಜೋಡಿಸಿರುವ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್ ನಿಂದ ಹಾಸ್ಪಿಟಲ್ ಡೈಲಿ ಕ್ಯಾಶ್ ಬೆನಿಫಿಟ್ ಆರಂಭಿಸಲಿದೆ. ಇದು ಕಸ್ಟಮೈಸ್ಡ್ ಪಾಲಿಸಿ ಆಗಿದೆ. ಪಾಲಿಸಿ ಖರೀದಿದಾರರು ಆಸ್ಪತ್ರೆಗೆ ದಾಖಲಾದಲ್ಲಿ ಅವರಿಗೆ ನಿಶ್ಚಿತವಾದ ಮೊತ್ತ ಖಚಿತವಾಗಿ ದೊರೆಯುತ್ತದೆ. ಈ ಪಾಲಿಸಿದಾರರು ಇನ್ಷೂರೆನ್ಸ್ ಕಂಪೆನಿಯಿಂದ ಹಣ ಪಡೆಯುವುದಕ್ಕೆ ಆಸ್ಪತ್ರೆಯ ಬಿಲ್ ಗಳನ್ನು ನೀಡಬೇಕು ಅಂತೇನಿಲ್ಲ.

ಎಷ್ಟು ಕಿ.ಮೀ. ಕಾರು ಓಡಿಸುತ್ತೀರೋ ಅಷ್ಟಕ್ಕೆ ಮಾತ್ರ ಕಟ್ಟಿ ಇನ್ಷೂರೆನ್ಸ್ ಪ್ರೀಮಿಯಂ !ಎಷ್ಟು ಕಿ.ಮೀ. ಕಾರು ಓಡಿಸುತ್ತೀರೋ ಅಷ್ಟಕ್ಕೆ ಮಾತ್ರ ಕಟ್ಟಿ ಇನ್ಷೂರೆನ್ಸ್ ಪ್ರೀಮಿಯಂ !

ಈಗಾಗಲೇ ಇನ್ಷೂರೆನ್ಸ್ ಖರೀದಿ ಮಾಡಿರುವವರು ಅಥವಾ ಇಲ್ಲದವರು ಸಹ ಈ ಹೊಸ ಪಾಲಿಸಿಯನ್ನು ಖರೀದಿ ಮಾಡಬಹುದು. ಅಂದ ಹಾಗೆ, ಈ ಗ್ರೂಪ್ ಇನ್ಷೂರೆನ್ಸ್ ಪ್ರಾಡಕ್ಟ್ ಅಡಿಯಲ್ಲಿ ಕೋವಿಡ್ -19 ರೋಗಿಗಳಿಗೂ ಚಿಕಿತ್ಸೆ ಅನ್ವಯ ಆಗುತ್ತದೆ. ಆದ್ದರಿಂದ ಕಷ್ಟದ ಸನ್ನಿವೇಶದಲ್ಲಿ ನೆರವಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಇನ್ಷೂರೆನ್ಸ್ ಬಳಕೆದಾರರು ಆಸ್ಪತ್ರೆಗೆ ದಾಖಲಾದಲ್ಲಿ ಎಷ್ಟು ಮೊತ್ತಕ್ಕೆ ಕವರ್ ಆಗಬೇಕು ಎಂಬುದನ್ನು ಈ ಹೊಸ ಇನ್ಷೂರೆನ್ಸ್ ಪಾಲಿಸಿ ಅಡಿಯಲ್ಲಿ ದಿನಕ್ಕೆ 500ರಿಂದ 5000 ರುಪಾಯಿ ತನಕ ಎಷ್ಟು ಕವರ್ ಆಗಬೇಕು ಎಂದು ನಿರ್ಧರಿಸಬಹುದು. ಕ್ಲೇಮ್ ಮಾಡುವುದಕ್ಕೆ ಕನಿಷ್ಠ 48 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗಿರಬೇಕು. ಜತೆಗೆ ಪ್ರತಿ ಕ್ಲೇಮ್ ಗೆ ಒಂದು ದಿನ ಕಳೆಯಲಾಗುತ್ತದೆ. ಈ ನಗದು ಅನುಕೂಲಕವು ದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಅನ್ವಯ ಆಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಕ್ಲೇಮ್ ಮಾಡುವುದಕ್ಕೆ ಆಸ್ಪತ್ರೆಯ ಡಿಸ್ ಚಾರ್ಜ್ ಪ್ರಮಾಣ ಪತ್ರವೇ ಸಾಕಾಗುತ್ತದೆ ಎಂದು ಇನ್ಷೂರೆನ್ಸ್ ಕಂಪೆನಿ ಹೇಳಿದೆ. ಒಂದು ವೇಳೆ ಐಸಿಯುನಲ್ಲಿ ಅಡ್ಮಿಟ್ ಆಗಿದ್ದಲ್ಲಿ ಇನ್ಷೂರೆನ್ಸ್ ಕವರ್ ಮೊತ್ತದ ಎರಡರಷ್ಟು ದೊರೆಯುತ್ತದೆ.

ಯಾರು ಖರೀದಿ ಮಾಡಬಹುದು?

ಯಾರು ಖರೀದಿ ಮಾಡಬಹುದು?

18ರಿಂದ 65ರ ವಯಸ್ಸಿನ ಮಧ್ಯದ ಫೋನ್ ಪೇ ಬಳಕೆದಾರರು ಈ ಪಾಲಿಸಿ ಖರೀದಿಸಬಹುದು. ಆಸ್ಪತ್ರೆಗೆ ದಾಖಲಾದ ಪಕ್ಷದಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಇನ್ಷೂರೆನ್ಸ್ ಪಾಲಿಸಿ ಇದು ಎಂದು ಐಸಿಐಸಿಐ ಲೊಂಬಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಮೆಡಿಕ್ಲೇಮ್ ಪಾಲಿಸಿ ಇರುವವರು, ಉದ್ಯೋಗದಾತರಿಂದ ಹೆಲ್ತ್ ಇನ್ಷೂರೆನ್ಸ್ ಇರುವವರು, ತಾವೇ ಆಸ್ಪತ್ರೆ ಬಿಲ್ ಪಾವತಿಸುವಂಥವರು ಈ ಅನುಕೂಲ ಪಡೆಯಬಹುದು.

ಪಾಲಿಸಿ ಖರೀದಿಗೆ ಎಷ್ಟು?

ಪಾಲಿಸಿ ಖರೀದಿಗೆ ಎಷ್ಟು?

ಹಾಸ್ಪಿಟಲ್ ಡೈಲಿ ಕ್ಯಾಶ್ ಬೆನಿಫಿಟ್ ವಾರ್ಷಿಕ ಪ್ರೀಮಿಯಂ ತೆರಿಗೆಯೂ ಸೇರಿ 130 ರುಪಾಯಿಯಿಂದ ಶುರುವಾಗುತ್ತದೆ. ಫೋನ್ ಪೇ ಬಳಕೆದಾರರು ಎರಡು ನಿಮಿಷಕ್ಕಿಂತ ಕಡಿಮೆ ಅವಧಿಯ ಪ್ರಕ್ರಿಯೆಯಲ್ಲಿ ಇದನ್ನು ಪಡೆಯಬಹುದು. ಫೋನ್ ಪೇ ಅಪ್ಲಿಕೇಷನ್ ನಲ್ಲ್ಲಿ ತಕ್ಷಣವೇ ಪಾಲಿಸಿಯ ದಾಖಲೆಗಳನ್ನು ಸಹ ನೋಡಬಹುದು.

ಈಗಿನ ಸವಾಲಿನ ಸಮಯದಲ್ಲಿ, ಆಸ್ಪತ್ರೆಗೆ ದಾಖಲಾದಾಗ ಬಿಲ್ ಕೂಡ ಅಗತ್ಯ ಇಲ್ಲದೆ ಖಾತ್ರಿ ನಗದು ಅನುಕೂಲ ನೀಡುವುದರಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ ಎಂದು ಐಸಿಐಸಿ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಮಂತ್ರಿ ಹೇಳಿದ್ದಾರೆ.

English summary

Hospital Bills Not Required For Claim To This New Health Insurance Scheme

ICICI Lombard General Insurance with PhonePe to launch Hospital Daily cash benefit — a policy that allows buyers to get an assured amount if they are hospitalised. No longer need to produce hospital bills to claim the amount.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X