ರಿಯಲ್ ಎಸ್ಟೇಟ್ ಎಂದಿಗೂ ಕೂಡಾ ಮೌಲ್ಯಯುತ ಆಸ್ತಿಯಾಗಿದೆ. ಇಂದಿನ ಕಾಲದಲ್ಲಿ ರಿಯಲ್ ಎಸ್ಟೇಟ್ ಮೌಲ್ಯವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಜನರು ತಮಗೆ ಎಲ್ಲ ಸೌಕರ್ಯಗಳನ್ನು ನೀಡುವ ಆಸ್ತಿ ಮಾತ್ರವಲ್ಲದೆ ಅತೀ ಕಡಿಮೆ ಮೌಲ್ಯಕ್ಕೆ ಎಲ್ಲಿ ಆಸ್ತಿ ಅಥವಾ ಮನೆ ಲಭ್ಯವಾಗುತ್ತದೆ ಎಂದು ನೋಡುತ್ತಾರೆ. ಆಸ್ತಿಯ ಮೌಲ್ಯದ ಮೇಲೆ ಮನೆಯ ಸ್ಥಳವು ಪ್ರಭಾವ ಬೀರುತ್ತದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯು ಅತೀ ವಿಸ್ತಾರವಾದ ಮಾರುಕಟ್ಟೆಯಾಗಿದ್ದು, ಹಲವಾರು ಅಂಶಗಳ ಆಧಾರದಲ್ಲಿ ಬೆಲೆ ನಿರ್ಧಾರವಾಗುತ್ತದೆ.
ಈ ನಡುವೆ ಒಂದು ಮನೆಯ ಮೌಲ್ಯವು ಆ ಮನೆಯಿರುವ ಸ್ಥಳ ಅಥವಾ ಲೊಕೇಷನ್ ಮೇಲೆ ಆಧಾರಿತವಾಗಿದೆ. ಮನೆ ಇರುವ ಸ್ಥಳವು ಅದರ ಮೌಲ್ಯವನ್ನು ನಿರ್ಧಾರ ಮಾಡುತ್ತದೆ. ಉತ್ತಮ ಲೊಕೇಷನ್ ಆಸ್ತಿಯ ಮೌಲ್ಯವನ್ನು ಹೆಚ್ಚಳ ಮಾಡುತ್ತದೆ. ಆದರೆ ಪ್ರದೇಶ ಅಷ್ಟು ಉತ್ತಮವಾಗಿಲ್ಲದಿದ್ದರೆ, ಆಸ್ತಿಯ ಮೌಲ್ಯವು ಕಡಿಮೆಯಾಗುತ್ತದೆ. ಈ ಲೇಖನದಲ್ಲಿ ಒಂದು ಮನೆಯಿರುವ ಪ್ರದೇಶವು ಆ ಮನೆಯ ಮೌಲ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ಯಾವೆಲ್ಲ ಸೌಲಭ್ಯಗಳಿದ್ದರೆ ಆಸ್ತಿ ಮೌಲ್ಯ ಹೆಚ್ಚಾಗುತ್ತದೆ, ಹೇಗೆ ಮೌಲ್ಯ ಕಡಿಮೆಯಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಶಾಲೆ ಇರುವ ಪ್ರದೇಶ: ಒಂದು ಮನೆಯಿರುವ ಸ್ಥಳದಿಂದ ಎಷ್ಟು ಅಂತರದಲ್ಲಿ ಶಾಲೆಯಿದೆ ಎಂಬುವುದು ಮನೆಯ ಮೌಲ್ಯದ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಯಾವುದೇ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತಾರೆ. ಅತೀ ಉತ್ತಮ ದರ್ಜೆಯ ಶಾಲೆಗಳು ಇರುವಲ್ಲಿ ಮನೆಯಿದ್ದರೆ ಅದರ ಮೌಲ್ಯ ಅಧಿಕವಾಗಲಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆ: ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಷ್ಟು ಅಂತರದಲ್ಲಿದೆ ಎಂಬುವುದು ಕೂಡಾ ಮನೆಯ ಮೌಲ್ಯದ ಮೇಲೆ ಪ್ರಭಾವ ಬೀರುತ್ತದೆ. ಟ್ರಾಫಿಕ್ ಸಮಸ್ಯೆ ಅಧಿಕವಾಗಿರುವ ಸ್ಥಳವಾದ ನಗರ ಪ್ರದೇಶದಲ್ಲಿ ಒಂದು ಮನೆಯನ್ನು ಖರೀದಿ ಮಾಡುವಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಷ್ಟು ಅಂತರದಲ್ಲಿದೆ ಎಂದು ನೋಡುತ್ತಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವಲ್ಲಿಯಲ್ಲಿನ ಮನೆಯ ಮೌಲ್ಯ ಅಧಿಕವಾಗಿರುತ್ತದೆ.
ಸೌಕರ್ಯಗಳು: ಶಾಪಿಂಗ್ ಸೆಂಟರ್‌ಗಳು, ಪಾರ್ಕ್‌ಗಳು, ರೆಸ್ಟೋರೆಂಟ್‌ಗಳು ಮನರಂಜನೆಗೆ ಬೇಕಾದ ಹಲವಾರು ಆಯ್ಕೆಗಳು ಇರುವ ಪ್ರದೇಶದಲ್ಲಿನ ಮನೆಯ ಮೌಲ್ಯವು ಅಧಿಕವಾಗಿರುತ್ತದೆ. ಈ ಸೌಲಭ್ಯಗಳು ಮೌಲ್ಯವನ್ನು ಹೆಚ್ಚಿಸುತ್ತದೆ. ಎಲ್ಲ ವ್ಯವಸ್ಥೆಗಳು ಸ್ಥಳದಲ್ಲಿದ್ದರೆ ಅದರ ಬೇಡಿಕೆ ಹೆಚ್ಚಾಗಿರುತ್ತದೆ. ಹಾಗೆಯೇ ಆ ಸ್ಥಳದಲ್ಲಿ ಆಸ್ಪತ್ರೆ, ಕ್ಲಿನಿಕ್, ಫಾರ್ಮಸಿಗಳು ಇರುವುದು ಮುಖ್ಯವಾಗುತ್ತದೆ. ಯಾವುದೇ ಜನರಾದರೂ ನಮಗೆ ಆರೋಗ್ಯ ಸಮಸ್ಯೆ ಉಂಟಾದಾಗ ತುರ್ತಾಗಿ ಆಸ್ಪತ್ರೆಗೆ ಹೋಗಲು ಯಾವ ರಿಯಲ್ ಎಸ್ಟೇಟ್‌ನಲ್ಲಿ ಸಾಧ್ಯವೋ ಅದಕ್ಕೆ ಅಧಿಕ ಬೇಡಿಕೆ ಇರುತ್ತದೆ.
ಅಪರಾಧ ದರ: ನಾವು ಯಾವೆಲ್ಲ ಸೌಲಭ್ಯಗಳು ಇದೆ ಎಂದು ನೋಡಿಕೊಂಡು ಆಸ್ತಿಯನ್ನು ಖರೀದಿ ಮಾಡುತ್ತೇವೆಯೋ ಹಾಗೆಯೇ, ಆ ಸ್ಥಳದಲ್ಲಿ ಅಪರಾಧ ಪ್ರಮಾಣ ಎಷ್ಟಿದೆ ಎಂದು ನೋಡಿಕೊಳ್ಳಬೇಕಾಗುತ್ತದೆ. ಆಸ್ತಿಯ ಮೌಲ್ಯವು ಆ ಪ್ರದೇಶದಲ್ಲಿ ಅಪರಾಧ ಪ್ರಮಾಣ ಎಷ್ಟಿದೆ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ. ಅಧಿಕ ಅಪರಾಧ ಪ್ರಮಾಣವಿದ್ದರೆ ಆ ಪ್ರದೇಶದ ಮೌಲ್ಯ ಕಡಿಮೆಯಾಗುತ್ತದೆ.
ಇತರೆ ಅಂಶಗಳು: ಪ್ರದೇಶದಲ್ಲಿರುವ ಜನಸಂದಣಿಯು ಕೂಡಾ ಆಸ್ತಿ ಮೌಲ್ಯ ನಿರ್ಧಾರ ಮಾಡುತ್ತದೆ. ಉದಾಹರಣೆಗೆ ಸೌಹಾರ್ದ ಸಮುದಾಯದೊಂದಿಗಿನ ಶಾಂತಿಯುತ ನೆರೆಹೊರೆ ಇರುವ ಆಸ್ತಿಯನ್ನು ಶಾಂತ ಮತ್ತು ಸುರಕ್ಷಿತ ವಾತಾವರಣವನ್ನು ಬಯಸುವ ಕುಟುಂಬ ಖರೀದಿ ಮಾಡುತ್ತದೆ. ಮತ್ತೊಂದೆಡೆ, ಹೆಚ್ಚು ಜನರು ಇರುವ ರಾತ್ರಿಯು ಎಲ್ಲ ಸೌಲಭ್ಯಗಳು ಇರುವ ಪ್ರದೇಶವನ್ನು ಕೆಲವು ಕುಟುಂಬ ಇಷ್ಟಪಡುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications