ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?

ಹಲವಾರು ಮಂದಿ ಒಳ್ಳೆಯ ಉದ್ಯೋಗವನ್ನು ಹೊಂದಿರುತ್ತಾರೆ, ಆದರೆ ತಮ್ಮ ಹಣಕಾಸನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಅವರಲ್ಲಿ ಯಾವುದೇ ರೀತಿಯಾದ ಮಾಹಿತಿ ಇರುವುದಿಲ್ಲ. ಹೀಗಾಗಿ ಅನೇಕ ಮಂದಿ ಕೊನೆಗೆ ಸಾಲದ ಹೊರೆಯಲ್ಲಿ ಕುಸಿಯುವುದು ಕೂಡಾ ಇದೆ. ಈ ನಿಟ್ಟಿನಲ್ಲಿ ಜನರಿಗೆ ಹಣಕಾಸಿನ ಸಾಕ್ಷರತೆಯು ಅತೀ ಮುಖ್ಯವಾಗಿದೆ.

ಹಣಕಾಸಿನ ಸಾಕ್ಷರತೆಯು ದೈನಂದಿನ ಜೀವನದಲ್ಲಿ ಹಣಕಾಸಿನ ಅಂಶಗಳನ್ನು ಹೊಂದಿರುವ ಬಜೆಟ್, ಹೂಡಿಕೆ, ಸಾಲ, ತೆರಿಗೆ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು ಆಗಿದೆ. ಭಾರತದಲ್ಲಿ ಓರ್ವ ವ್ಯಕ್ತಿಯು ವಿಧ್ಯಾಭ್ಯಾಸವನ್ನು ಪಡೆದಿಲ್ಲ ಎಂದಾದರೆ ಆತ ಹಣಕಾಸಿನ ವಿಚಾರದಲ್ಲೂ ಸಾಕ್ಷರತೆಯನ್ನು ಹೊಂದಿರುವುದಿಲ್ಲ ಎಂದು ಭಾವನೆಯು ಹಲವಾರು ಮಂದಿಯಲ್ಲಿ ಇದೆ. ಆದರೆ ಅದು ನಿಜವಲ್ಲ.

ಪದವಿ, ಸ್ನಾತಕೋತ್ತರ ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರೂ ಕೂಡಾ ಹಲವಾರು ಯುವಕರಿಗೆ ಹಣಕಾಸಿನ ಸಾಕ್ಷರತೆ ಇರುವುದಿಲ್ಲ. ಅಂದರೆ ಹಣಕಾಸನ್ನು ಹೇಗೆ ನಿರ್ವಹಣೆ ಮಾಡುವುದು ಎಂದು ತಿಳಿದಿರುವುದಿಲ್ಲ. ಆದರೆ ನಮ್ಮ ಜೀವನವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಹಣಕಾಸಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಲು ನಮಗೆ ಹಣಕಾಸಿನ ಬಗ್ಗೆ ತಿಳಿಯುವಳಿಕೆ ಇರುವುದು ಮುಖ್ಯವಾಗುತ್ತದೆ.

 ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ವೃದ್ದಿಗೆ ಸಹಕಾರಿ ಹಣಕಾಸು ಸಾಕ್ಷರತೆ

ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ವೃದ್ದಿಗೆ ಸಹಕಾರಿ ಹಣಕಾಸು ಸಾಕ್ಷರತೆ

ಹಣಕಾಸು ಸಾಕ್ಷರತೆಯು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ವೃದ್ದಿಗೆ ಸಹಕಾರಿ ಆಗುತ್ತದೆ. ನಾವು ಸಾಲ ಮಾಡಿಕೊಳ್ಳುವುದು ಕೆಟ್ಟದು ಎಂದು ಹೇಳಿದರೂ, ಕೆಲವೊಂದು ಸಂದರ್ಭಗಳಲ್ಲಿ ಈ ಸಾಲ ಮಾಡಿಕೊಳ್ಳುವುದು ಪ್ರಯೋಜನಕಾರಿಯೂ ಹೌದು. ಹೇಗೆ ಅನ್ನುತ್ತೀರಾ?. ಸಾಲವು ಹೆಚ್ಚಿನ ಆದಾಯವನ್ನು ನೀಡುವ ಸ್ವತ್ತನ್ನು ಸೃಷ್ಟಿಸಬಹುದಾದರೆ, ಅದು ಪ್ರಯೋಜನಕಾರಿಯಾಗಿದೆ. ಹಣಕಾಸಿನ ಸಾಕ್ಷರತೆಯು ವೈಯಕ್ತಿಕ ಸಾಲಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದನ್ನು ನಮಗೆ ಕಲಿಸುತ್ತದೆ. ನಾವು ಶಿಕ್ಷಣ ಸಾಲ ಹಾಗೂ ಗೃಹ ಸಾಲದಂತಹ ಕೆಲವು ಸಾಲಗಳನ್ನು ಉತ್ತಮ ಸಾಲ ಎಂದು ಪರಿಗಣಿಸುತ್ತೇವೆ. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸದೇ ಇರುವುದು ಮತ್ತು ಕೈಗೆಟುಕದ ಜೀವನಶೈಲಿಯನ್ನು ನಡೆಸಲು ಸಾಲಗಳನ್ನು ತೆಗೆದುಕೊಳ್ಳುವುದು ಕೆಟ್ಟ ಸಾಲಗಳೆಂದು ನಾವು ಪರಿಗಣಿಸುತ್ತೇವೆ. ಡೆಸಲು ಸಾಲಗಳನ್ನು ತೆಗೆದುಕೊಳ್ಳುವುದು ಕೆಟ್ಟ ಸಾಲಗಳೆಂದು ನಾವು ಪರಿಗಣಿಸುತ್ತೇವೆ.

  ಹಣಕಾಸು ಸಾಕ್ಷರತೆಯಿಂದ ಒತ್ತಡ, ಆತಂಕ ಕಡಿಮೆ

ಹಣಕಾಸು ಸಾಕ್ಷರತೆಯಿಂದ ಒತ್ತಡ, ಆತಂಕ ಕಡಿಮೆ

ನಮ್ಮ ಒತ್ತಡ ಹಾಗೂ ಆತಂಕವು ಕಡಿಮೆ ಮಾಡಲು ಹಣಕಾಸು ಸಾಕ್ಷರತೆಯು ಸಹಕಾರಿಯಾಗಿದೆ. ಇಂದಿನ ಕಾಲದಲ್ಲಿ ಹಣಕಾಸನ್ನು ನಾವು ಬಹಳ ಸೂಕ್ಷ್ಮವಾಗಿ ನಿರ್ವಹಣೆ ಮಾಡುವುದು ಅತೀ ಮುಖ್ಯವಾಗಿದೆ. ಇದು ಒಂದು ಕೌಶಲ್ಯವೂ ಕೂಡಾ ಹೌದು. ನಾವು ಹಣವನ್ನು ಉಳಿತಾಯ ಮಾಡಿಕೊಳ್ಳುವ ಮೂಲಕ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ನಮಗೆ ಅನಿರೀಕ್ಷಿತ ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

 ಯಾವುದಕ್ಕೆ ಎಷ್ಟು ಖರ್ಚು?, ಲೆಕ್ಕ ಹಾಕಿಕೊಳ್ಳಿ

ಯಾವುದಕ್ಕೆ ಎಷ್ಟು ಖರ್ಚು?, ಲೆಕ್ಕ ಹಾಕಿಕೊಳ್ಳಿ

ನಾವು ನಮ್ಮ ಹಣವನ್ನು ಯಾವುದಕ್ಕೆ, ಎಷ್ಟು ಖರ್ಚು ಮಾಡಬೇಕು ಎಂಬುವುದನ್ನು ನಾವು ಮೊದಲೇ ನಿರ್ಧಾರ ಮಾಡಿಕೊಂಡರೆ ನಮಗೆ ಹಣಕಾಸನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಖರ್ಚುಗಳ ಮೇಲೆ ನಿಗಾ ಇಡಲು ಕೂಡಾ ಇದು ಸಹಕಾರಿಯಾಗುತ್ತದೆ. ಹಾಗೆಯೇ ಈ ಅಭ್ಯಾಸವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ನೀವು ನಿಮ್ಮ ಹಣಕಾಸಿನ ಲೆಕ್ಕಾಚಾರದಲ್ಲಿ ಯಾವುದಕ್ಕೆ ಪ್ರಮುಖ ಆದ್ಯತೆಯನ್ನು ನೀಡಬೇಕು ಎಂಬುವುದನ್ನು ನಿಮಗೆ ಸ್ಪಷ್ಟಪಡಿಸುತ್ತದೆ. ನೀವು ಮೊದಲೇ ತಿಂಗಳ ಲೆಕ್ಕಾಚಾರ ಮಾಡಿಕೊಂಡರೆ ನಿಮ್ಮ ಬಜೆಟ್‌ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.

 ಭವಿಷ್ಯದ ಲೆಕ್ಕಾಚಾರವೂ ಈಗಲೇ ಇರಲಿ

ಭವಿಷ್ಯದ ಲೆಕ್ಕಾಚಾರವೂ ಈಗಲೇ ಇರಲಿ

ನೀವು ಸರಿಯಾದ ಹಣಕಾಸು ಯೋಜನೆಯನ್ನು ರೂಪಿಸಿಕೊಂಡರೆ ನಿಮ್ಮ ಭವಿಷ್ಯವೂ ಕೂಡಾ ಸುಂದರವಾಗಿರುತ್ತದೆ. ನೀವು ದುಡಿಯುವ ಸಂದರ್ಭದಲ್ಲೇ ನಿಮ್ಮ ಭವಿಷ್ಯದ ಜೀವನಕ್ಕೆ ಬೇಕಾದ ಉಳಿತಾಯವನ್ನು ಮಾಡಿಕೊಂಡರೆ ನಿಮ್ಮ ನಿವೃತ್ತಿ ಜೀವನವು ಸುಗಮವಾಗುತ್ತದೆ. ನೀವು ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಿದರೆ, ನಿಮ್ಮ ನಿವೃತ್ತಿ ನಿಧಿ, ಮಕ್ಕಳ ಉನ್ನತ ಶಿಕ್ಷಣ, ಮದುವೆ, ಸ್ವಂತ ಮನೆ ಮತ್ತು ಇತರ ಪ್ರಮುಖ ಜೀವನದ ಘಟನೆಗಳನ್ನು ನೀವು ಸಂತಸದಿಂದ ಅನುಭವಿಸಲು ಸಾಧ್ಯವಾಗುತ್ತದೆ. ಇನ್ನು ಹೆಚ್ಚಿನ ಅಪಾಯವನ್ನು ಎದುರಿಸಲು ಸಿದ್ದವಾಗಿರುವವರು ತಮ್ಮ ಸ್ಟಾಕ್‌ ಮೊದಲಾದವುಗಳಲ್ಲಿ ಹೂಡಿಕೆ ಮಾಡಬಹುದು.

 ಆರ್ಥಿಕ ಸಾಕ್ಷರತೆ ಹೊಂದುವುದು ಕಷ್ಟವೇನಲ್ಲ..

ಆರ್ಥಿಕ ಸಾಕ್ಷರತೆ ಹೊಂದುವುದು ಕಷ್ಟವೇನಲ್ಲ..

ಈ ಜ್ಞಾನದ ಕೊರತೆಯು ವ್ಯಕ್ತಿಯನ್ನು "ಆರ್ಥಿಕವಾಗಿ ಅನಕ್ಷರಸ್ಥ" ರನ್ನಾಗಿ ಮಾಡುತ್ತದೆ. ನಾವು ಆರ್ಥಿಕವಾಗಿ ಅನಕ್ಷರಸ್ಥರಾಗಿದ್ದರೆ, ಆರ್ಥಿಕ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಧಿಕವಾಗಬಹುದು. ಈ ಆರ್ಥಿಕ ಅನಕ್ಷರತೆಯಿಂದಾಗಿ ತೆಗೆದುಕೊಂಡ ನಿರ್ಧಾರಗಳು ನಮ್ಮನ್ನು ಸಾಲದ ಬಲೆಗೆ ಬೀಳಿಸಬಹುದು ಅಥವಾ ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ನಾವು ಆರ್ಥಿಕವಾಗಿ ಸಾಕ್ಷರರಾಗುವುದು ಕಷ್ಟವೇನಲ್ಲ. ಹಾಗೆಯೇ ಇದು ನಮ್ಮ ಕೈ ಮೀರಿಲ್ಲ ಎಂದು ಕೂಡಾ ಹೇಳಬಹುದು. ಜನರು ಚಿಕ್ಕ ವಯಸ್ಸಿನಿಂದಲೂ ಆರ್ಥಿಕ ಸಾಕ್ಷರತೆಯನ್ನು ಕಲಿಯಬಹುದು. ದಿನನಿತ್ಯದ ಮನೆಯ ಖರ್ಚುಗಳ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಹಣದ ಮೌಲ್ಯದ ಅರಿವು ಪಡೆಯಬಹುದು. ಹಾಗೆಯೇ ವಾರಕ್ಕೆ ಒಮ್ಮೆ ಅಥವಾ ಮಾಸಿಕವಾಗಿ ನಮಗೆ ದೊರೆಯುವ ಪಾಕೆಟ್‌ ಮನಿ ಮೂಲಕವೂ ನಾವು ಈ ಹಣಕಾಸಿನ ಸಾಕ್ಷರತೆಯನ್ನು ಸಣ್ಣ ವಯಸ್ಸಿನಲ್ಲೇ ಹೊಂದಬಹುದು.

 ವಯಸ್ಕರು ಏನು ಮಾಡಬೇಕು?

ವಯಸ್ಕರು ಏನು ಮಾಡಬೇಕು?

ವಯಸ್ಕರು ತಮ್ಮ ಹಣ ನಿರ್ವಹಣೆ, ಹೂಡಿಕೆ, ಉಳಿತಾಯ ಮೊದಲಾದವುಗಳ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿಯನ್ನು ಪಡೆಯಬಹುದು. ಇನ್ನು ನಾವು ನಮ್ಮ ಕ್ರೆಡಿಟ್‌ ಕಾರ್ಡ್‌ಗಳನ್ನು ಕೂಡಾ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಅತ್ಯಗತ್ಯ. ವಯಸ್ಕರು ಮುಖ್ಯವಾಗಿ ದಿನ ನಿತ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳುವಳಿಕೆ ಹೊಂದಿದರೆ ತಮ್ಮ ಹಣಕಾಸು ನಿರ್ವಹಣೆ ಮಾಡುವುದು ಅವರಿಗೆ ಸುಲಭವಾಗು‌ತ್ತದೆ. ವಿವಿಧ ವೃತ್ತಪತ್ರಿಕೆ ಪ್ರಕಟಣೆಗಳು ವೈಯಕ್ತಿಕ ಹಣಕಾಸು ವಿಭಾಗವನ್ನು ಹೊಂದಿರುತ್ತದೆ. ಇದನ್ನು ಓದುವ ಮೂಲಕ ವಯಸ್ಕರು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಹೊಸ ಹೂಡಿಕೆ ಆಯ್ಕೆಗಳು ಮತ್ತು ಯಾವುದೇ ಅವಕಾಶಗಳ ಬಗ್ಗೆ ನಿಗಾ ಇಡಲು ಇದು ಉತ್ತಮ ಮಾರ್ಗವಾಗಿದೆ. ಇನ್ನು ಹಣಕಾಸು ಯೋಜನೆಯ ವಿಚಾರಕ್ಕೆ ಬಂದಾಗ, ಅನೇಕ ಹಣಕಾಸು ನಿರ್ವಹಣಾ ಅಪ್ಲಿಕೇಶನ್‌ಗಳು ಮತ್ತು ಹಣಕಾಸು ಸಲಹೆಗಾರರು ಹೂಡಿಕೆ ಯೋಜನೆಗಳನ್ನು ನಿರ್ವಹಿಸುತ್ತಾರೆ. ಹಣಕಾಸಿನ ನಿರ್ವಹಣೆಯನ್ನು ಕಲಿಯಲು ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಆದರೆ ಈ ಸಂದರ್ಭದಲ್ಲಿ ಈ ಬಗ್ಗೆ ತಜ್ಞರ ಬಗ್ಗೆ ಮಾಹಿತಿಯನ್ನು ಕೂಡಾ ಪಡೆಯಬೇಕು. ನಿಮ್ಮ ಅಂತಿಮ ಆರ್ಥಿಕ ಉದ್ದೇಶಗಳಿಗೆ ಯಾವ ವಿಧಾನಗಳು ಸೂಕ್ತವಾಗಿರುತ್ತವೆ ಎಂಬುದನ್ನು ಅರಿತುಕೊಳ್ಳಲು ಇದು ಸೂಕ್ತವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+