ಮಾಯದಂಥ ಓಟ ಕಂಡ ಚಿನ್ನ; ಐದೂವರೆ ತಿಂಗಳಲ್ಲಿ 20% ಗೂ ಹೆಚ್ಚು ಏರಿಕೆ

2019ರಲ್ಲಿ ಅದ್ಭುತವಾದ ಗಳಿಕೆ ಕಂಡಿದ್ದ ಚಿನ್ನವು ಈ ವರ್ಷದ ಆರಂಭದಿಂದ ಇಲ್ಲಿಯ ತನಕ ಏರಿಕೆ ಹಾದಿಯಲ್ಲಿ ಮುಂದುವರಿದಿದೆ. ಕಳೆದ ವರ್ಷ 25 ಪರ್ಸೆಂಟ್ ನಷ್ಟು ಗಳಿಕೆ ದಾಖಲಿಸಿದ್ದ ಚಿನ್ನವು, ಈ ವರ್ಷ ಜನವರಿ 1ರಿಂದ ಈಚೆಗೆ 20 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿದೆ. ಕೊರೊನಾ ವೈರಾಣು ಕಾರಣಕ್ಕೆ ಜಾಗತಿಕ ಆರ್ಥಿಕ ಕುಸಿತದ ಭೀತಿ, ಯು.ಎಸ್.- ಚೀನಾ ಮಧ್ಯದ ವಾಣಿಜ್ಯ ಸಮರ ಇವೆಲ್ಲ ಸೇರಿ ಚಿನ್ನದ ಮೇಲೆ ಹೊಳಪು ಹೆಚ್ಚಿಸಿದೆ.

ಮೊನ್ನೆ ಶುಕ್ರವಾರ, ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ ಬೆಲೆ 10 ಗ್ರಾಮ್ ಗೆ 47,355 ರುಪಾಯಿಗೆ ವ್ಯವಹಾರ ಮುಗಿಸಿದೆ. ಇನ್ನು ಬೆಳ್ಳಿ ಕೇಜಿಗೆ 900 ರುಪಾಯಿ ಇಳಿದು, 47,741 ರುಪಾಯಿಗೆ ವಹಿವಾಟು ಮುಗಿಸಿದೆ. ಕಳೆದ ತಿಂಗಳು 10 ಗ್ರಾಮ್ ಚಿನ್ನಕ್ಕೆ 48 ಸಾವಿರ ರುಪಾಯಿ ದಾಖಲಾಗಿತ್ತು.

ಭಾರತದಲ್ಲಿ 12.5% ಆಮದು ಸುಂಕ,  3% ಜಿಎಸ್ ಟಿ

ಭಾರತದಲ್ಲಿ 12.5% ಆಮದು ಸುಂಕ, 3% ಜಿಎಸ್ ಟಿ

ದುಬಾರಿ ಬೆಲೆ, ಲಾಕ್ ಡೌನ್ ನಿರ್ಬಂಧ ಹಾಗೂ ಕೊರೊನಾ ವೈರಸ್ ಬಿಕ್ಕಟ್ಟಿನ ಕಾರಣಕ್ಕೆ ಭಾರತದಲ್ಲಿ ಚಿನ್ನದ ಬೇಡಿಕೆಗೆ ಹೊಡೆತ ಬಿದ್ದಿದೆ. ಆ ಕಾರಣಕ್ಕೆ ಡೀಲರ್ ಗಳು ದೇಶೀಯ ಬೆಲೆಯಲ್ಲಿ ರಿಯಾಯಿತಿ ನೀಡುತ್ತಿದ್ದಾರೆ. ಅಂದ ಹಾಗೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ 12.5% ಆಮದು ಸುಂಕ ಹಾಗೂ 3% ಜಿಎಸ್ ಟಿ ಒಳಗೊಂಡಿರುತ್ತದೆ. ಭಾರತದ ಡೀಲರ್ ಗಳು ಒಂದು ಔನ್ಸ್ ಗೆ $ 20ರ ತನಕ ರಿಯಾಯಿತಿ ನೀಡುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನೂ ಹೆಚ್ಚಿನ ಏರಿಕೆ ಕಾಣುವುದು ಅನುಮಾನ

ಇನ್ನೂ ಹೆಚ್ಚಿನ ಏರಿಕೆ ಕಾಣುವುದು ಅನುಮಾನ

ಗ್ರಾಹಕರಿಂದ ಬೇಡಿಕೆ ಬರುತ್ತಿಲ್ಲವಾದ್ದರಿಂದ ಇದಕ್ಕಿಂತ ಹೆಚ್ಚಿನ ಬೆಲೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಇತ್ತೀಚಿನ ಬೇಡಿಕೆ ಹೆಚ್ಚಳಕ್ಕೆ ಕಾರಣ ತೆರೆದಿಡುವ ತಜ್ಞರು, ಜಾಗತಿಕ ಆರ್ಥಿಕ ಕುಸಿತದ ಆತಂಕದ ಸನ್ನಿವೇಶದಲ್ಲಿ ಚಿನ್ನದ ಮೇಲಿನ ಹೂಡಿಕೆಯನ್ನು ಹೂಡಿಕೆದಾರರು ಸುರಕ್ಷಿತ ಎಂದು ಭಾವಿಸುತ್ತಾರೆ ಎಂಬ ಅಭಿಪ್ರಾಯ ಪಡುತ್ತಾರೆ.

ಡಾಲರ್ ಬಲವಾದಷ್ಟೂ ಬೆಲೆ ಹೆಚ್ಚಾಗುತ್ತದೆ

ಡಾಲರ್ ಬಲವಾದಷ್ಟೂ ಬೆಲೆ ಹೆಚ್ಚಾಗುತ್ತದೆ

ಇನ್ನು ರುಪಾಯಿ ವಿರುದ್ಧ ಅಮೆರಿಕ ಡಾಲರ್ ಬಲವಾದಷ್ಟೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ವಾರದಲ್ಲೇ ಜಾಗತಿಕವಾಗಿ ಸ್ಪಾಟ್ ಗೋಲ್ಡ್ ಬೆಲೆಯಲ್ಲಿ 2 ಪರ್ಸೆಂಟ್ ಏರಿಕೆಯಾಗಿ, ಒಂದು ಔನ್ಸ್ ಗೆ 1730.19 ಅಮೆರಿಕನ್ ಡಾಲರ್ ನಲ್ಲಿ ವ್ಯವಹಾರ ನಡೆಸಿದೆ. ಅಂದ ಹಾಗೆ ಒಂದು ಔನ್ಸ್ ಗೆ 28.34 ಗ್ರಾಮ್ ಗಳಾಗುತ್ತವೆ.

ಮೇ ತಿಂಗಳಲ್ಲಿ 815 ಕೋಟಿ ರುಪಾಯಿ ಒಳಹರಿವು

ಮೇ ತಿಂಗಳಲ್ಲಿ 815 ಕೋಟಿ ರುಪಾಯಿ ಒಳಹರಿವು

ಫಿಸಿಕಲ್ ಚಿನ್ನಕ್ಕೆ ಬೇಡಿಕೆ ಇಳಿಕೆ ಆಗಿದ್ದರೂ ಹೂಡಿಕೆಯ ಬೇಡಿಕೆ ಬಹಳ ಗಟ್ಟಿಯಾಗಿದೆ. ಮೇ ತಿಂಗಳಲ್ಲಿ ಚಿನ್ನದ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್ (ETF) ಒಳಹರಿವು 815 ಕೋಟಿ ರುಪಾಯಿ ಬಂದಿದೆ. ಏಪ್ರಿಲ್ ನಲ್ಲಿ ಈ ಪ್ರಮಾಣ 731 ಕೋಟಿ ಇತ್ತು. ಆಗಸ್ಟ್ 2019ರಿಂದ ಈಚೆಗೆ ಚಿನ್ನದ ಇಟಿಎಫ್ ಒಳಹರಿವು ನಿವ್ವಳವಾಗಿ 3,299 ಕೋಟಿ ರುಪಾಯಿ ಬಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+