For Quick Alerts
ALLOW NOTIFICATIONS  
For Daily Alerts

ಸಾಲ ಬೇಕಾ? ಮುದ್ರಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸೋದು ಹೇಗೆ?

|

ಸಣ್ಣ ಉದ್ದಿಮೆಗಳಿಗೆ ಬಲ ನೀಡಲು ಸಾರ್ವಜನಿಕ ಕ್ಷೇತ್ರದ ಆರ್ಥಿಕ ಸಂಸ್ಥೆಯಾಗಿ ಮುದ್ರಾ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ಮುದ್ರಾ ಯೋಜನೆಯಡಿಯಲ್ಲಿ ಶಿಶು, ಕಿಶೋರ, ತರುಣ ಹೀಗೆ ಮೂರು ಹಂತದಲ್ಲಿ ಸಾಲ ನೀಡಲಾಗುತ್ತದೆ. 2 ರಿಂದ 10 ಲಕ್ಷ ರು ತನಕ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲಾಗುತ್ತದೆ. ಸರ್ವರಿಗೂ ಉದ್ಯೋಗ ನೀಡುವ ಭರವಸೆಯೆಂದರೆ ಉದ್ಯೋಗ ಸೃಷ್ಟಿಯಲ್ಲ, ಆದರೆ ಯುವಕರಿಗೆ ಸ್ವಉದ್ಯೋಗ ಆರಂಭಿಸುವ ಅವಕಾಶವನ್ನೂ ಸೃಷ್ಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ಗಳ ವಿದೇಶಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ - ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಬೇಕು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC). ನೆರವು ಸ್ಯಾಂಕ್ಷನ್ ಆಯಾ ಸಾಲ ಸಂಸ್ಥೆಯಲ್ಲಿ ಅರ್ಹತಾ ರೂಢಿಗಳನ್ನು ಪ್ರಕಾರ ಗಳ ವಿವರಣೆ ಯನ್ನು ನೀಡಲಾಗುವದು.

 

ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ PSU ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಅಥವಾ www.udyamimitra.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

ಗುರುತಿನ ಪ್ರಮಾಣ - ಸ್ವಯಂ ದೃಢೀಕರಿಸಿದ ಮತದಾರರ ಐಡಿ ಕಾರ್ಡ್ / ಚಾಲಕ ಪರವಾನಗಿಯ / ಪ್ಯಾನ್ ಕಾರ್ಡ್ / ಆಧಾರ್ r ಕಾರ್ಡ್ / ಪಾಸ್ಪೋರ್ಟ್ / ಫೋಟೋ ID ಗಳು

ನಿವಾಸ ಪುರಾವೆ : ಇತ್ತೀಚಿನ ದೂರವಾಣಿ ಬಿಲ್ / ವಿದ್ಯುತ್ ಬಿಲ್ / ಆಸ್ತಿ ತೆರಿಗೆ ಸ್ವೀಕೃತಿ (ಹಳೆಯ 2 ತಿಂಗಳ) / ಮತದಾರರ ಐಡಿ ಕಾರ್ಡ್ / ಆಧಾರ್ ಕಾರ್ಡ್ / ಬ್ಯಾಂಕ್ ಠೇವಣಿ ಪುಸ್ತಕ ಅಥವಾ ಇತ್ತೀಚಿನ ಖಾತೆ ಹೇಳಿಕೆಯ ಪಾಸ್ಪೋರ್ಟ್ ತಕ್ಕಂತೆ ಬ್ಯಾಂಕ್ ಅಧಿಕಾರಿಗಳು ದೃಢೀಕರಿಸಿದ / ವಸತಿ ಪ್ರಮಾಣಪತ್ರ / ಸರಕಾರ ಪ್ರಾಧಿಕಾರ / ಸ್ಥಳೀಯ ಪಂಚಾಯತ್ / ಪುರಸಭೆ ಬಿಡುಗಡೆಮಾಡಿದ ಪ್ರಮಾಣಪತ್ರ ಇತ್ಯಾದಿ

ಅರ್ಜಿದಾರರ ಇತ್ತೀಚಿನ ಛಾಯಾಚಿತ್ರ (2 ಪ್ರತಿಗಳು) 6 ತಿಂಗಳ ಒಳಗೆ ತೆಗೆಸಿರುವಂತಹದು

ಯಂತ್ರೋಪಕರಣಗಳನ್ನು ಮತ್ತು ಇತರ ವಸ್ತುಗಳನ್ನು ಖರೀದಿಸುವ ಉದ್ಧರಣ (ಕೊಟೇಶನ್)

ಯಂತ್ರೋಪಕರಣಗಳು ಮತ್ತು ವಸ್ತು ಗಳ ಸರಬರಾಜುದಾರ ಹೆಸರು ಮತ್ತು ವಿವರ

ಮಾಲೀಕತ್ವಕ್ಕೆ ಸಂಬಂಧಿಸಿದ ನೋಂದಣಿ ಪ್ರಮಾಣಪತ್ರಗಳು / ಇತರೆ ದಾಖಲೆಗಳ ಪ್ರತಿ, ವ್ಯಾಪಾರದ ಘಟಕ ವಿಳಾಸದ ಗುರುತು, ಉದ್ಯಮ ಗುರುತು / ವಿಳಾಸ ಪುರಾವೆ

ಎಸ್ಸಿ / ಎಸ್ಟಿ / ಒಬಿಸಿ / ಹಿಂದುಳಿದ ವರ್ಗದ ಬಗ್ಗೆ ಪುರಾವೆ

ಗಮನಿಸಿ: ಎಲ್ಲಾ PMMY ಯೋಜನೆಗಳ ಬಗ್ಗೆ ಕೆಳಗಿನ ಮುಖ್ಯ ವಿಷಯಗಳು :

ಯಾವುದೇ ಸಂಸ್ಕರಣಾ ಶುಲ್ಕ (ಪ್ರೊಸೆಸಿಂಗ್ ಫಿ ) ವಿರುವುದಿಲ್ಲ

ಯಾವುದೇ ಮೇಲಾಧಾರ ವಿರುವುದಿಲ್ಲ

ಸಾಲದ ಮರುಪಾವತಿಯ ಕಾಲ 5 ವರ್ಷಗಳ ವರೆಗೆ ವಿಸ್ತರಿಸಲಾಗಿದೆ

ಅರ್ಜಿದಾರರ ಯಾವುದೇ ಬ್ಯಾಂಕ್ / ಆರ್ಥಿಕ ಸಂಸ್ಥೆಗೆ ಲೋಪ ಮಾಡಿರಬಾರದು (ಡಿಫಾಲ್ಟ್ ಟರ್ ಆಗಿರಬಾರದು )

ಈ ಕೆಳಗಿನ ಸಾಲ ಯೋಜನೆಗಳು ಲಭ್ಯ
 

ಈ ಕೆಳಗಿನ ಸಾಲ ಯೋಜನೆಗಳು ಲಭ್ಯ

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ.

ಶಿಶು ಸಾಲ (50,000 ರು ತನಕ), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 42ರಷ್ಟು ಪಾಲು ಹೊಂದಿದೆ.

* ಕಿಶೋರ್ ಸಾಲ(50,000 ರು ನಿಂದ 5 ಲಕ್ಷ ರು), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 34ರಷ್ಟು ಪಾಲು ಹೊಂದಿದೆ.

* ತರುಣ್ ಸಾಲ(5 ಲಕ್ಷ ರು ನಿಂದ 10 ಲಕ್ಷ ರು), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 24ರಷ್ಟು ಪಾಲು ಹೊಂದಿದೆ.

ಶಿಶು, ಕಿಶೋರ್, ಮತ್ತು ತರುಣ್ ಹೆಸರುಗಳು ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.

ಮುದ್ರಾ ಒಳಗೊಂಡಿರುವ ಕ್ಷೇತ್ರಗಳು

ಮುದ್ರಾ ಒಳಗೊಂಡಿರುವ ಕ್ಷೇತ್ರಗಳು

ಮುದ್ರಾ ಒಳಗೊಂಡಿರುವ ಕ್ಷೇತ್ರಗಳು ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ಧಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಸಾರಿಗೆ ವಲಯ: ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ. ಸಮುದಾಯ ಮತ್ತು ವೈಯಕ್ತಿಕ ಸೇವೆ ಚಟುವಟಿಕೆಗಳು: ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ, DTP ಮತ್ತು ಜೆರಾಕ್ಸ್ , ಮೆಡಿಸಿನ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್ ಹೀಗೆ ಹಲವು ಕ್ಷೇತ್ರಗಳನ್ನು ಒಳಗೊಂಡಿದೆ.

ಮುದ್ರಾ ಯೋಜನೆಯಿಂದ ಉದ್ಯೋಗ ಸೃಷ್ಟಿ

ಮುದ್ರಾ ಯೋಜನೆಯಿಂದ ಉದ್ಯೋಗ ಸೃಷ್ಟಿ

ಕೃಷಿ ಸಂಬಂಧಿತ ಉದ್ಯೋಗಗಳು 22.77ರಷ್ಟು ಹೆಚ್ಚಾಗಿ ಸೃಷ್ಟಿಯಾಗಿದ್ದರೆ, ಉತ್ಪಾದನಾ ಕ್ಷೇತ್ರದಲ್ಲಿ 13.10ರಷ್ಟು ಉದ್ಯೋಗ ಅವಕಾಶಗಳು ಲಭ್ಯವಾಗಿವೆ. ಒಟ್ಟಾರೆ ಇಲ್ಲಿ ತನಕ ಮುದ್ರಾ ಯೋಜನೆಯಡಿಯಲ್ಲಿ 3.1 ಸ್ವಯಂ ಉದ್ಯೋಗಿಗಳು, 1.95 ಕೋಟಿ ಬಾಡಿಗೆ ಉದ್ಯೋಗಿಗಳು ಸೇರಿದಂತೆ 5 ಕೋಟಿ ಗೂ ಅಧಿಕ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.

ಒಟ್ಟಾರೆ, 5.1 ಲಕ್ಷದಷ್ಟು ಹೆಚ್ಚುವರಿ ಉದ್ಯೋಗ ಅವಕಾಶಗಳು ಮಾತ್ರ ಸೃಷ್ಟಿಯಾಗಿವೆ, ಹೊಸ ಉದ್ಯೋಗ ಸೃಷ್ಟಿ ಪ್ರಮಾಣ ಏರಿಕೆಯಾಗದ ಕಾರಣ, ಹೊಸ ಉದ್ಯೋಗ ಸ್ಥಾಪನೆ ಪ್ರಮಾಣವೂ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary

How to apply for Mudra loan (PMMY)

How to apply for Mudra loan (PMMY): MUDRA is a refinancing Institution. MUDRA does not lend directly to the micro entrepreneurs / individuals. Mudra loans under Pradhan Mantri Mudra Yojana (PMMY) can be availed of from nearby branch office of a bank, NBFC, MFIs etc. Borrowers can also now file online application for MUDRA loans
Story first published: Thursday, January 9, 2020, 14:22 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more