ಬಹುಬೇಡಿಕೆಯ ಹೂಡಿಕೆಯಾದ ಸವರನ್ ಗೋಲ್ಡ್ ಬಾಂಡ್(ಎಸ್‌ಜಿಬಿ) ಮೇ 17 ರಂದು ಚಂದಾದಾರಿಕೆಗಾಗಿ ತೆರೆಯಲಾಗಿದೆ. ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22 ಸರಣಿ ಮೊದಲ ಕಂತನ್ನು ಪ್ರತಿ ಗ್ರಾಂಗೆ 4,777 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆನ್‌ಲೈನ್‌ನಲ್ಲಿ ಸವರನ್ ಗೋಲ್ಡ್ ಬಾಂಡ್ ಖರೀದಿಯ ಆಯ್ಕೆಯನ್ನು ನೀಡಿದೆ. ಆನ್‌ಲೈನ್‌ನಲ್ಲಿ ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ ಎಂಬುದನ್ನು ಈ ಕೆಳಗೆ ತಿಳಿಯಿರಿ
ಟ್ವೀಟ್ ಮೂಲಕ ಗ್ರಾಹಕರಿಗೆ ತಿಳಿಸಿದ ಎಸ್‌ಬಿಐ
ಟ್ವೀಟ್ ಮಾಡುವ ಮೂಲಕ ಎಸ್‌ಬಿಐ ಗ್ರಾಹಕರಿಗೆ ಮಾಹಿತಿ ಹಂಚಿಕೊಂಡಿದೆ. ''ಇಲ್ಲಿದೆ ಒಂದು ಸುವರ್ಣಾವಕಾಶ! ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು 6 ಸುವರ್ಣ ಕಾರಣಗಳು. ಎಸ್‌ಬಿಐ ಗ್ರಾಹಕರು ನೇರವಾಗಿ ಇ-ಸೇವೆಗಳ ಅಡಿಯಲ್ಲಿ ಐಎನ್‌ಬಿಯಲ್ಲಿ ಹೂಡಿಕೆ ಮಾಡಬಹುದು" ಎಂದು ಹೇಳಿದೆ.
ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ 50 ರೂ. ರಿಯಾಯಿತಿ
ಒಟ್ಟು ಆರು ಕಂತುಗಳಲ್ಲಿ ನೀಡಲಾಗುವ ಚಂದಾದಾರಿಕೆಯಲ್ಲಿ ಮೇ 17 ರಿಂದ ಮೊದಲ ಕಂತು ಪ್ರಾರಂಭವಾಗಿದ್ದು, ಈ ಸಂಚಿಕೆ ಮೇ 21 ರಂದು ಮುಕ್ತಾಯಗೊಳ್ಳಲಿದೆ ಮತ್ತು ಬಾಂಡ್‌ಗಳನ್ನು ಮೇ 25 ರಂದು ನೀಡಲಾಗುವುದು.
ಭಾರತ ಸರ್ಕಾರವು ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ವಿತರಣಾ ಬೆಲೆಯಿಂದ ಪ್ರತಿ ಗ್ರಾಂಗೆ 50 ರಿಯಾಯಿತಿಯನ್ನು ನೀಡಲು ನಿರ್ಧರಿಸಿದೆ. ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ. ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣಾ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 4,727 ರೂಪಾಯಿ ಆಗಿರುತ್ತದೆ.
ಎಸ್‌ಬಿಐ ಆನ್‌ಲೈನ್ ಮೂಲಕ ಖರೀದಿ ಮಾಡುವುದು ಹೇಗೆ?
* ಮೊದಲು ನಿಮ್ಮ ಎಸ್‌ಬಿಐ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಿ
* ನಂತರ ಇ-ಸರ್ವೀಸ್ ಮೇಲೆ ಕ್ಲಿಕ್ ಮಾಡಿ ಸವರನ್ ಗೋಲ್ಡ್ ಬಾಂಡ್‌ಗೆ ಹೋಗಿ
* ನಿಯಮಗಳು ಮತ್ತು ಷರತ್ತುಗಳು ಆಯ್ಕೆಮಾಡಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ
* ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ಒಂದು ಬಾರಿ ನೋಂದಣಿ ಸಲ್ಲಿಸು ಕ್ಲಿಕ್ ಮಾಡಿ ಸಬ್‌ಮಿಟ್ ಕೊಡಿ
* ಖರೀದಿ ಮಾಡುವಾಗ ಚಂದಾದಾರಿಕೆ ಪ್ರಮಾಣ ಮತ್ತು ನಾಮಿನಿ ವಿವರಗಳನ್ನು ನಮೂದಿಸಿ
* ಅಂತಿಮವಾಗಿ ಸಬ್‌ಮಿಟ್ ಕೊಡಿ
ಆನ್‌ಲೈನ್ ಹೊರತುಪಡಿಸಿ ಎಲ್ಲೆಲ್ಲಿ ಗೋಲ್ಡ್ ಬಾಂಡ್ ಖರೀದಿಸಬಹುದು?
ಸವರನ್ ಗೋಲ್ಡ್ ಬಾಂಡ್ ಹೂಡಿಕೆದಾರರು ಆನ್‌ಲೈನ್ ಹೊರತುಪಡಿಸಿ ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಆರ್‌ಬಿಐ ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಿಂದಲೂ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications