ನಕಲಿ ಬಿಲ್‌ಗಳನ್ನು ಬಳಸುವ ಮೂಲಕ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ತೋರಿಸುವ ಸಾಕಷ್ಟು ಜಿಎಸ್‌ಟಿ ಹಗರಣಗಳು ಬೆಳಕಿಗೆ ಬರುತ್ತಿವೆ. ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ಜಾರಿಗೊಳಿಸಿದ ಬಳಿಕ ಬಾಹ್ಯ ಪೂರೈಕೆಯ ಮೇಲೆ ಜಿಎಸ್‌ಟಿ ತಪ್ಪಿಸುವುದಕ್ಕೆ ಈ ರೀತಿಯ ಅಡ್ಡ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.
ರಾಜ್ಯ ಹಾಗೂ ಕೇಂದ್ರದ ಜಿಎಸ್‌ಟಿ ಅಧಿಕಾರಿಗಳು ಇಂತಹ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಹೀಗಿರುವಾಗ, ಈ ರೀತಿಯ ನಕಲಿ ಬಿಲ್‌ಗಳ ಜಿಎಸ್‌ಟಿ ವಂಚನೆಯನ್ನು ಪತ್ತೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ನಕಲಿ ಜಿಎಸ್‌ಟಿ ಸರಕು ಪಟ್ಟಿ ಅಂದರೇನು?
ಸಾಮಾನ್ಯವಾಗಿ ನೈಜ ಸರಕು ಪೂರೈಕೆ ಅಥವಾ ಜಿಎಸ್‌ಟಿ ಹಣವನ್ನು ಪಾವತಿಸದೆಯೇ ಜಿಎಸ್‌ಟಿ ಬಿಲ್‌ಗಳನ್ನು ಸೃಷ್ಟಿಸುವುದನ್ನು ನಕಲಿ ಜಿಎಸ್‌ಟಿ ಬಿಲ್‌ಗಳೆಂದು ಗುರುತಿಸಲಾಗುತ್ತದೆ. ಹಾಗಾದರೆ ನಕಲಿ ಜಿಎಸ್‌ಟಿ ಬಿಲ್‌ಗಳನ್ನು ಪತ್ತೆ ಮಾಡುವ ಹಂತ-ಹಂತದ ಮಾಹಿತಿ ಇಲ್ಲಿದೆ.
ಜಿಎಸ್‌ಟಿಐಎನ್ ಪರಿಶೀಲಿಸಿ:
ಮೊದಲು ಬಿಲ್‌ನಲ್ಲಿರುವ ಜಿಎಸ್‌ಟಿ ನಂಬರ್ ಸರಿಯಿದೆ ಎಂದು ನೋಡಿ. ಅಂದರೆ ಜಿಎಸ್‌ಟಿ ಐಎನ್ ಮೇಲೆ 15 ಅಂಕೆಗಳು ಇರಬೇಕು.
ನಂತರ ಜಿಎಸ್‌ಟಿಐಎನ್ ನ್ನು ಜಿಎಸ್‌ಟಿ https://www.gst.gov.in/ ಪೋರ್ಟಲ್‌ನಲ್ಲಿ ಟ್ಯಾಕ್ಸ್‌ಪೇಯರ್ ಸರ್ಚ್ ವಿಭಾಗದಲ್ಲಿ ನಮೂದಿಸಿ ಆ ವಿವರಗಳು ಸರಿಯಿದೆಯೇ ಎಂದು ಪರಿಶೀಲಿಸಿ.
ಪ್ರತಿಯೊಬ್ಬನ ನೋಂದಾಯಿತ ಸರಕು ಪೂರೈಕೆದಾರರಿಗೆ ಜಿಎಸ್‌ಟಿಐಎನ್ ಅನ್ನು ನೀಡಲಾಗುತ್ತದೆ. ಅದರಲ್ಲಿ ಸ್ಟೇಟ್ ಕೋಡ್, ಪ್ಯಾನ್ ಹಾಗೂ ವಿಶಿಷ್ಟ ನೋಂದಣಿ ಸಂಖ್ಯೆ ಇರುತ್ತದೆ.
ಒಂದುವೇಳೆ ಜಿಎಸ್‌ಟಿಐಎನ್ ಸರಿಯಾಗಿದ್ದರೆ, ಪೂರೈಕೆದಾರರ ಹೆಸರು, ವಿಳಾಸ ವೆಬ್‌ಸೈಟ್‌ನ ಸ್ಕ್ರೀನ್‌ನಲ್ಲಿ ನಮೂದಾಗುತ್ತದೆ.
ಬಿಲ್ ನಂಬರ್ ಮತ್ತು ದಿನಾಂಕ:
ಜಿಎಸ್‌ಟಿ ಬಿಲ್‌ನಲ್ಲಿ ತಾರೀಕು ಹಾಗೂ ಇನ್‌ವಾಯ್ಸ್ ಸಂಖ್ಯೆಯನ್ನು ಪರಿಶೀಲಿಸಿ. ಒಂದುವೇಳೆ ಅದರಲ್ಲಿ ವ್ಯತ್ಯಾಸ ಕಂಡುಬಂದರೆ ಅದನ್ನು ನಕಲಿ ಎಂದು ಪರಿಗಣಿಸಬಹುದು.
ಎಚ್‌ಎಸ್‌ಎನ್ ಮತ್ತು ಎಸ್‌ಎಸಿ ಕೋಡ್‌ಗಳು
ಸರಕುಗಳಿಗೆ ಹಾರ್ಮೊನೈಜ್ಡ್ ಸಿಸ್ಟಮ್ ಕೋಡ್‌ಗಳನ್ನು ನೀಡಲಾಗಿರುತ್ತದೆ. ಅದೇರೀತಿ ಸೇವೆಗಳಿಗೆ ಸರ್ವೀಸ್ ಅಕೌಂಟಿಂಗ್ ಕೋಡ್‌ಗಳನ್ನು ನೀಡಲಾಗಿರುತ್ತದೆ. ಇದನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಪರಿಶೀಲಿಸಲಾಗುತ್ತದೆ.
ತೆರಿಗೆ ಪಾವತಿ ಸ್ಟೇಟಸ್ ಅನ್ನು ಪರಿಶೀಲಿಸಿ:
ಜಿಎಸ್‌ಟಿ ಪೋರ್ಟಲ್‌ಗೆ ತೆರಳಿ ಪೂರೈಕೆದಾರರ ಹಿಂದಿನ ತೆರಿಗೆ ಪಾವತಿಗಳ ಬಗ್ಗೆ ಪರಿಶೀಲಿಸಿ. ಇನ್‌ವಾಯ್ಸ್‌ಗೆ ಸಂಬಂಧಿಸಿದ ತೆರಿಗೆಯನ್ನು ಪೂರೈಕೆದಾರರು ಪಾವತಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನನ್ನ ಬಿಲ್, ನನ್ನ ಅಧಿಕಾರ ಯೋಜನೆ
ಕೇಂದ್ರ ಸರ್ಕಾರವು ಇತ್ತೀಚೆಗೆ ನನ್ನ ಬಿಲ್, ನನ್ನ ಅಧಿಕಾರ ಯೋಜನೆಯನ್ನು ಪ್ರಾರಂಭಿಸಿದ್ದು, ಆ ಮೂಲಕ ತಾವು ಮಾಡುವ ಪ್ರತಿಯೊಂದು ಖರೀದಿಗೂ ಬಿಲ್ ಕೇಳುವ ಜಾಗೃತಿ ಮೂಡಿಸಲಾಗುತ್ತಿದೆ. ಆ ಮೂಲಕ ಗ್ರಾಹಕರಲ್ಲಿ ತಾವು ಪಾವತಿಸುವ ಹಣಕ್ಕೆ ಬಿಲ್ ಕೇಳುವ ಹಾಗೂ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.


Click it and Unblock the Notifications