ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಯಾವುದೇ ಸಮಸ್ಯೆಯಾಗಬಾರದು ಸುಲಭವಾಗಿ ಇಪಿಎಫ್ ಸೇವೆಗಳನ್ನು ಪಡೆದುಕೊಳ್ಳಲು ಹಲವಾರು ಪ್ರಕ್ರಿಯೆಗಳನ್ನು ಸರಳಗೊಳಿಸಿದೆ. ಶೀಘ್ರದಲ್ಲೇ ತನ್ನ ಹೊಸ ವೇದಿಕೆ EPFO 3.0 ಅನ್ನು ಪ್ರಾರಂಭಿಸಲಿದೆ. ಹಾಗಿದ್ದರೆ ಬಹು ಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ ಎಂಬ ಹೆಚ್ಚಿನ ವಿವರವರನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..
ಹೌದು, ಸಂಬಳ ಪಡೆಯುವಂತಹ ಉದ್ಯೋಗಿಗಳು ಆಗ್ಗಾಗೆ ಕೆಲವನ್ನು ಚೇಂಚ್ ಮಾಡುತ್ತಲ್ಲೇ ಇರುತ್ತಾರೆ. ಅವರು ಆಗ ಬಹುಖಾತೆಯ ಪಿಎಫ್ ಖಾತೆಗಳನ್ನು ಹೂಂದಿರುತ್ತಾರೆ. ಆದರೆ ಪಿಎಫ್ ಹಣವನ್ನು ತಗೆದುಕೊಳ್ಳವಾಗ ಎಲ್ಲಾ ಖಾತೆಗಳನ್ನ ಒಗ್ಗೂಡಿಸಿ ಹಣವನ್ನು ತಗೆದುಕೊಳ್ಳಬೇಕಾಗುತ್ತದೆ ಎಂದು ಹೇಗೆ ಎಂಬುವುದನ್ನು ತಿಳೀಯಲು ಮುಂದೆ ಓದಿ...

UAN ಅನ್ನು ಆಕ್ಟಿವ್ ಮಾಡಿಕೊಳ್ಳಿ
ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯವಾಗಿದೆಯೇ ಎಂದು ಮೊದಲು ತಿಳಿದುಕೊಳ್ಳವುದು ಮುಖ್ಯವಾಗುತ್ತದೆ. ಈ ಯುಎನ್‌ಐ ವಿಶಿಷ್ಟ ಸಂಖ್ಯೆ ಎಲ್ಲಾ ಉದ್ಯೋಗಗಳಲ್ಲಿ ಒಂದೇ ಆಗಿರುತ್ತದೆ ಮತ್ತು ನಿಮ್ಮ ಎಲ್ಲಾ PF ಖಾತೆಗಳನ್ನು ಲಿಂಕ್ ಮಾಡಲು ಬಳಕೆಯನ್ನು ಮಾಡಲಾಗುತ್ತದೆ.
KYC ವಿವರಗಳನ್ನು ಅಪ್ಡೇಟ್ ಮಾಡಿ
ನಿಮ್ಮ ಪ್ರಸ್ತುತ ಚಾಲ್ತಿಯಲ್ಲಿ ಇರುವ ಪಿಎಫ್ ಖಾತೆಯಲ್ಲಿ KYC ವಿವರಗಳನ್ನು ( ಆಧಾರ್ , ಪ್ಯಾನ್ ಮತ್ತು ಬ್ಯಾಂಕ್ ಖಾತೆಯಂತಹವು) ನವೀಕರಿಸಿರಬೇಕು ಮತ್ತು ಜೊತೆಗೆ ಅದನ್ನು ಸರಿಯಾಗಿ ಇದೆಯೇ ಎಂದು ಪರಿಶೀಲನೆಯನ್ನು ಸಹ ಮಾಡುವದು ಮುಖ್ಯವಾಗುತ್ತದೆ.
ಇಪಿಎಫ್‌ಒ ಪೋರ್ಟಲ್‌ನಲ್ಲಿ ವರ್ಗಾವಣೆ
ಇಪಿಎಫ್‌ಒ ಸದಸ್ಯರು ಇಪಿಎಫ್‌ಒ ಪೋರ್ಟಲ್‌ಗೆ ಮೊದಲು ಭೇಟಿ ನೀಡಬೇಕಾಗುತ್ತದೆ. ತದನಂತರ ಯುಎಎನ್ (UAN) ಎಂದರೆ ಯುನಿಫೈಡ್ ಅಕೌಂಟ್ ನಂಬರ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ. 'ಆನ್‌ಲೈನ್ ಸೇವೆಗಳು' ಟ್ಯಾಬ್‌ನ್ನು ಕ್ಲಿಕ್ ಮಾಡಿ. 'ಒಬ್ಬ ಸದಸ್ಯ-ಒಬ್ಬ EPF ಖಾತೆ (ವರ್ಗಾವಣೆ ವಿನಂತಿ)' ಆಯ್ಕೆಮಾಡಿ. ಹಿಂದಿನ PF ಖಾತೆ ವಿವರಗಳನ್ನು ನಮೂದಿಸಿ ಮತ್ತು ವಿನಂತಿಯನ್ನು ಸಲ್ಲಿಸಿ ಮುಂದುವರಿಯಿರಿ.
ನಿಮ್ಮಗೆ ವಿನಂತಿಯ ಆಧಾರ್ ಆಧಾರಿತ ಒಟಿಪಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ. ಒಟಿಪಿಯನ್ನು ದೃಢೀಕರಿಸಿ ಸಲ್ಲಿಸಿದ ನಂತರ, EPFO ವಿಲೀನ ಪ್ರಕ್ರಿಯೆಯನ್ನು ಆರಂಭವಾಗುತ್ತದೆ. ಉದ್ಯೋಗದಾತರ ಪರಿಶೀಲನೆ ಹಿಂದಿನ ಉದ್ಯೋಗದಾತರು ನಿಮ್ಮ ವಿನಂತಿಯನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಬೇಕಾಗಬಹುದು. ಅದನ್ನು ಅನುಮೋದಿಸಿದ ನಂತರ, ನಿಧಿಗಳು ಮತ್ತು ಸೇವಾ ವಿವರಗಳನ್ನು ನಿಮ್ಮ ಸಕ್ರಿಯ ಪಿಎಫ್ ಖಾತೆಗೆ ವರ್ಗಾವಣೆಯಾಗುತ್ತದೆ.
ನೀವು ಈ ನಿಯಮವನ್ನುಕಡ್ಡಾಯವಾಗಿ ಪಾಲಿಸಲೇಬೇಕು.
- ನೀವು ಇಪಿಎಫ್‌ಒ ಬಹು ಪಿಎಫ್ ಖಾತೆಯನ್ನು ವರ್ಗಾವಣೆ ಮಾಡಲು UAN ಗೆ ಲಿಂಕ್ ಮಾಡಲಾಗಿರುವ ಪಿಎಫ್ ಖಾತೆಗಳನ್ನು ಮಾತ್ರ ವಿಲೀನಗೊಳಿಸಬಹುದು.
- ನೀವು ನಿಮ್ಮ ವರ್ಗಾವಣೆ ವಿಳಂಬವನ್ನು ತಪ್ಪಿಸಲು ಹಿಂದಿನ ಉದ್ಯೋಗದಾತರು ಕೆಲಸ ಬಿಟ್ಟ ದಿನಾಂಕಗಳನ್ನು ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುರುತ್ತದೆ.
- ಆಧಾರ್ ಜೊತೆ ನಿಮ್ಮ UAN ಗೆ ಲಿಂಕ್ ಆಗಿರಲೇಬೇಕು.
ಇಪಿಎಫ್ ಅನ್ನು ಆನ್‌ಲೈನ್‌ನಲ್ಲಿ ಹಿಂಪಡೆಯಲು ಹಂತಗಳು
ಹಂತ 1: ಸದಸ್ಯರು ಮೊದಲು ಇಪಿಎಫ್‌ಒ ಅಧೀಕೃತ ವೆಬ್ ಪೋರ್ಟಲ್ ಆದ https://unifiedportal-mem.epfindia.gov.in/memberinterface/ ಭೇಟಿ ನೀಡಬೇಕು.
ಹಂತ 2: ಲಾಗಿನ್ ಮಾಡಿ ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ. ಕ್ಯಾಪ್ಚಾ ನಮೂದಿಸಿ ಮತ್ತು ಸೈನ್ ಇನ್ ಮಾಡಿ ಕ್ಲಿಕ್ ಮಾಡಿ.
ಹಂತ 3: KYC ಸ್ಥಿತಿಯನ್ನು ಪರಿಶೀಲನೆ ಮಾಡಬೇಕಾಗುತ್ತದೆ ನಿಮ್ಮ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು 'ಕೆವೈಸಿ' ಗೆ ಭೇಟಿ ನೀಡಿ
ಹಂತ 4: ಆನ್‌ಲೈನ್ ಸೇವೆಗಳಿಗೆ ಹೋಗಿ 'ಆನ್‌ಲೈನ್ ಸೇವೆಗಳು' > 'ಕ್ಲೈಮ್ (ಫಾರ್ಮ್-31, 19, 10C & 10D)' ಮೇಲೆ ಕ್ಲಿಕ್ ಮಾಡಿ.
ಹಂತ 5: ಬ್ಯಾಂಕ್ ವಿವರಗಳನ್ನು ಪರಿಶೀಲನೆ ಮಾಡಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ಪರಿಶೀಲನೆಗಾಗಿ ಅದನ್ನು ಮತ್ತೊಮ್ಮೆ ನಮೂದಿಸಿ, ನಂತರ 'ಪರಿಶೀಲಿಸಿ' ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ.
ಹಂತ 6: ಕ್ಲೈಮ್ ಪ್ರಕಾರವನ್ನು ಆರಿಸಿ ಪೂರ್ಣ ಹಣದ ಇತ್ಯರ್ಥಕ್ಕಾಗಿ 'ಪಿಎಫ್ ಹಿಂಪಡೆಯುವಿಕೆ ಮಾತ್ರ (ಫಾರ್ಮ್ 19)' ಆಯ್ಕೆಮಾಡಿ. ಅನ್ವಯವಾಗಿದ್ದರೆ 'ಪಿಂಚಣಿ ಹಿಂಪಡೆಯುವಿಕೆ (ಫಾರ್ಮ್ 10C)' ಆಯ್ಕೆಮಾಡಿ. ವೈದ್ಯಕೀಯ, ಶಿಕ್ಷಣ, ಮದುವೆ ಇತ್ಯಾದಿಗಳಿಗೆ 'ಮುಂಗಡ/ಭಾಗಶಃ ಹಿಂಪಡೆಯುವಿಕೆ (ಫಾರ್ಮ್ 31)' ಆಯ್ಕೆಮಾಡಿ.
ಹಂತ 7: ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಹಿಂಪಡೆಯುವಿಕೆಗೆ ಕಾರಣ ಮತ್ತು ಇತರ ಅಗತ್ಯ ಮಾಹಿತಿಯನ್ನು ನಮೂದಿಸಿ. ಕೇಳಿದರೆ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ವೈದ್ಯಕೀಯ ಬಿಲ್‌ಗಳು, ಇತ್ಯಾದಿ).
ಹಂತ 8: ಸಲ್ಲಿಸಿ ಮತ್ತು ಸ್ವೀಕೃತಿ ಪಡೆಯಿರಿ 'ಸಲ್ಲಿಸು' ಕ್ಲಿಕ್ ಮಾಡಿ. ನಿಮಗೆ ಸ್ವೀಕೃತಿ ಸಿಗುತ್ತದೆ. ನಂತರ ನೀವು ಇದನ್ನು ಡೌನ್‌ಲೋಡ್ ಅಥವಾ ಪ್ರಿಂಟ್ ಔಟ್ ಮಾಡಿಕೊಂಡು ನಿಮಮ್ ಬಳಿ ಸುರಂಕ್ಷಿತವಾಗಿ ಇಟ್ಟಿಕೊಳ್ಳಬಹುದು. ಸಾಮಾನ್ಯವಾಗಿ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲು ಸುಮಾರು 5 ರಿಂದ 20 ಕೆಲಸದ ದಿನಗಳು ಬೇಕಾಗುತ್ತದೆ. ನಂತರ ನಿಮ್ಮ ಖಾತೆಗೆ ಹಣ ಬಂದು ತಲುಪುತ್ತಾದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications