ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಜನಪ್ರಿಯ ಉಳಿತಾಯ ಯೋಜನೆಯಾಗಿದ್ದು, ಇದು ಉದ್ಯೋಗಿಗಳ ನಿವೃತ್ತಿಗಾಗಿ ಹಣ ಉಳಿಸುವುದನ್ನು ಪ್ರೋತ್ಸಾಹಿಸುತ್ತದೆ. ವಿವಿಧ ಕಾರ್ಯಕ್ರಮಗಳ ಮೂಲಕ ನಿವೃತ್ತಿಗಾಗಿ ಹಣ ಉಳಿಸಲು ಉದ್ಯೋಗಿಗಳನ್ನು ಉತ್ತೇಜಿಸುವುದು ಇಪಿಎಫ್ ನ ಗುರಿಯಾಗಿದೆ.
ನೌಕರರ ಆರ್ಥಿಕ ಭದ್ರತೆಯನ್ನು ಸಂರಕ್ಷಿಸಲು ಕಂಪನಿಗಳು ಮತ್ತು ಉದ್ಯೋಗಿಗಳು ಪ್ರತಿ ತಿಂಗಳು ವಿತ್ತೀಯ ಕೊಡುಗೆ ರೂಪದಲ್ಲಿ ಪಾವತಿಸಬಹುದು. ಅಧಿಕೃತ ಪೋರ್ಟಲ್ ಅನ್ನು ಪ್ರವೇಶಿಸುವ ಮೂಲಕ ವ್ಯಕ್ತಿಗಳು ಇಪಿಎಫ್ ಭಾರತದ ವಿವಿಧ ಆನ್ಲೈನ್ ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಅಲ್ಲದೆ, ಸದಸ್ಯರು ಇಪಿಎಫ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಅಥವಾ ಕುಂದುಕೊರತೆಗಳನ್ನು ಹೊಂದಿದ್ದರೆ ಇಪಿಎಫ್‌ಒ ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು.

ಬೇರೆ ಬೇರೆ ವಿಷಯಗಳ ಜೊತೆಗೆ ಕ್ಲೈಮ್‌ಗಳು, ಡೆಪಾಸಿಟ್‌ಗಳು, ಅಕೌಂಟ್ ಬ್ಯಾಲೆನ್ಸ್ ಮತ್ತು ಕ್ರಮಬದ್ಧತೆ ಇಲ್ಲದ ಉದ್ಯೋಗದಾತರ ಬಗ್ಗೆಯೂ ದೂರು ಒಳಗೊಳ್ಳಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರು ತಮ್ಮ ದೂರುಗಳು ಅಥವಾ ಕುಂದುಕೊರತೆಗಳನ್ನು ಸಲ್ಲಿಸಲು ಇಪಿಎಫ್ i-Grievance Management System (EPFiGMS) ಅನ್ನು ಬಳಸಬಹುದಾಗಿದೆ.
ಇಪಿಎಫ್ಓ ಪೋರ್ಟಲ್ ಎಂದರೇನು?
ಇಪಿಎಫ್ಓ ಪೋರ್ಟಲ್ ಎಂದರೆ ಇದು ಇಪಿಎಫ್ಓ ನಿಂದ ರಚಿಸಲ್ಪಟ್ಟ ವಿಶೇಷ ವೇದಿಕೆಯಾಗಿದ್ದು, ಇದು ತಮ್ಮ ಸೇವೆಗಳಲ್ಲಿರುವ ಕುಂದುಕೊರತೆ , ದೂರುಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಪೋರ್ಟಲ್ ಮೂಲಕ ಸಲ್ಲಿಸಲಾದ ಯಾವುದೇ ದೂರುಗಳನ್ನು ಸೂಕ್ತ ಅಧಿಕಾರಿಗಳಿಗೆ ರವಾನಿಸಿ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಉತ್ತರಿಸಲಾಗುತ್ತದೆ. ಇಲ್ಲಿ ಕುಂದುಕೊರತೆ ಮಾತ್ರ ಅಲ್ಲದೇ ಸದಸ್ಯರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು EPFiGMS ಪೋರ್ಟಲ್ ಅನ್ನು ಬಳಸಬಹುದು.
EPFO ಪ್ರಕಾರ, ಸದಸ್ಯರು ಯಾವುದೇ ಸಮಯದಲ್ಲಿ ತಮ್ಮ ಕಳವಳ, ದೂರುಗಳು ಪೋರ್ಟಲ್ ಮೂಲಕ ಸಲ್ಲಿಸಬಹುದು. ಇಂತಹ ದೂರುಗಳನ್ನು ದೂರುಗಳನ್ನು ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಅಥವಾ ದೇಶದ ಫೀಲ್ಡ್ ಆಫೀಸ್ ಗಳಿಗೆ್ ಬಗೆಹರಿಸಲು ನಿರ್ದೇಶನ ಮಾಡಬಹುದು. ಇದಲ್ಲದೆ ಸದಸ್ಯರು ನೀಡಿರುವ ದೂರು ಅಥವ ರಿಕ್ವೆಸ್ಟ್ ಗಳು ಏನಾಗಿದೆ ಎಂಬುವುದನ್ನು ಸ್ಟೇಟಸ್ ಮೂಲಕ ಪರಿಶೀಲಿಸಬಹುದು.
ಹಾಗಾದರೆ ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ಸಂಬಂಧಿಸಿದ ವಿಷಯಗಳ ಕುರಿತು ದೂರು ಸಲ್ಲಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
Step 1: ಮೊದಲನೆಯದಾಗಿ https://epfigms.gov.in/ ನಲ್ಲಿ EPF i-Grievance Management System ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Step 2: ಹೋಂಪೇಜ್ ನಲ್ಲಿರುವ ಬಲಭಾಗದಲ್ಲಿರುವ ಮೆನುವಿನಿಂದ 'Register Grievance' ಆಯ್ಕೆಮಾಡಿ.
Step 3: ಹೊಸ ಪುಟ ತೆರೆದುಕೊಂಡು ಅಲ್ಲಿ ನಿಮ್ಮ ಸ್ಟೇಟಸ್ ಗೆ ತಕ್ಕಂತೆ 4 ಆಯ್ಕೆಗಳನ್ನು ಕಂಡುಬರುತ್ತದೆ.
Step 4: ನಂತರ ನೀವು ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ನಿಮ್ಮ ಸೆಕ್ಯುರಿಟಿ ಕೋಡ್ ತುಂಬಬೇಕಾಗುತ್ತದೆ.
Step 5: 'Get Details' ಮೇಲೆ ಕ್ಲಿಕ್ ಮಾಡಿ. (ನಿಮ್ಮ ವಿವರಗಳು ಅಂದರೆ, ನಿಮ್ಮ ಹೆಸರು, UAN, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಗಳು ಡಿಸ್ಪ್ಲೇ ಆಗಲಿದೆ).
Step 6: 'Get OTP' ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTPಯನ್ನು ತುಂಬಿರಿ
Step 7: ''Personal Details' ವಿಭಾಗ ತೆರೆಯುತ್ತದೆ. ಇಲ್ಲಿ ನಿಮಗೆ ಸಂಬಂಧಿತ PF ಸಂಖ್ಯೆಯನ್ನು ಆಯ್ಕೆಮಾಡಿ.
Step 8: ಇದಾದ ಬಳಿಕ 'Grievance Details' ವಿಭಾಗಕ್ಕೆ ಹೋಗಿ. ಇಲ್ಲಿನೀವು ದೂರು ನೀಡಲು ಬಯಸುವ ಕುಂದುಕೊರತೆಯ ಪ್ರಕಾರವನ್ನು ಆಯ್ಕೆಮಾಡಿ. ತದ ನಂತರ ಸರಿಯಾದ ವಿವರಣೆಯನ್ನು ನೀಡಲು ಮರೆಯದಿರಿ.
Step 9: ಇಲ್ಲಿ ಅಗತ್ಯವೆಂದು ಪರಿಗಣಿಸಲಾದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ನಂತರ' 'Add' ' ಬಟನ್ ಕ್ಲಿಕ್ ಮಾಡಿ.
Step 10: ಈ ವಿಧಾನವನ್ನು ಅನುಸರಿಸುವ ಮೂಲಕ, ನಿಮ್ಮ ದೂರನ್ನು ನೋಂದಾಯಿಸಲಾಗುತ್ತದೆ .ಜೊತೆಗೆ ದೂರು ನೀಡಿದ ನೋಂದಣಿ ಸಂಖ್ಯೆಯನ್ನು ನಿಮಗೆ ನೀಡಲಾಗುತ್ತದೆ. ಈ ಸಂಖ್ಯೆ ಮೂಲಕ ನೀವು ನಿಮ್ಮ ದೂರಿನ ಸ್ಥಿತಿ ಮತ್ತು ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.


Click it and Unblock the Notifications