ಅಂಚೆ ಕಚೇರಿ ಉಳಿತಾಯ ಖಾತೆಗಳು ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಪರಿಹಾರವನ್ನು ಒದಗಿಸುತ್ತವೆ. ಹೆಚ್ಚಿನ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳ ಬಗ್ಗೆ ಚಿಂತಿಸದೆ ತಮ್ಮ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ಬಯಸುವವರಿಗೆ ಅವು ಉತ್ತಮ ಆಯ್ಕೆಯಾಗಿದೆ.
ಆದಾಗ್ಯೂ, ನಿರ್ದಿಷ್ಟ ಸಮಯದವರೆಗೆ ಖಾತೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಅಂಚೆ ಕಚೇರಿಯಲ್ಲಿ ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಹೀಗೆ ಆದಾಗ ಆ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬೇಕಾಗುತ್ತದೆ.

ಅಂಚೆ ಕಚೇರಿಯಲ್ಲಿ ಸೈಲೆಂಟ್ ಖಾತೆ ಎಂದರೇನು?
ನಿರಂತರ ಮೂರು ಹಣಕಾಸು ವರ್ಷಗಳಲ್ಲಿ ಖಾತೆಯಲ್ಲಿ ಯಾವುದೇ ಡೆಪಾಸಿಟ್ ಅಥವಾ ವಿತ್‌ಡ್ರಾ ನಡೆಯದಿದ್ದರೆ, ಖಾತೆಯನ್ನು ಅಂಚೆ ಕಛೇರಿಯು ಸೈಲೆಂಟ್ ಅಥವಾ ನಿಷ್ಕ್ರೀಯ ಖಾತೆ ಎಂದು ಪರಿಗಣಿಸುತ್ತದೆ.
ಅಂಚೆ ಕಚೇರಿಯಲ್ಲಿ ಸೈಲೆಂಟ್ ಖಾತೆ ಸಕ್ರಿಯಗೊಳಿಸುವುದು ಹೇಗೆ?
ಸಂಬಂಧಿತ ಅಂಚೆ ಕಚೇರಿಯಲ್ಲಿ ನೂತನ ಕೆವೈಸಿ ದಾಖಲೆಗಳು ಮತ್ತು ಪಾಸ್‌ಬುಕ್‌ನೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ತನ್ನ ನಿಷ್ಕ್ರೀಯ ಖಾತೆಯನ್ನು ಮತ್ತೆ ಆರಂಭ ಮಾಡಬಹುದಾಗಿದೆ.
ನಿಷ್ಕ್ರೀಯ ಖಾತೆಯ ಬಗ್ಗೆ ಮಾಹಿತಿ
ಖಾತೆ ತೆರೆಯಲು ಕನಿಷ್ಠ ಮೊತ್ತ: 500 ರೂಪಾಯಿ
ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿ: ನವೆಂಬರ್ 30 ರಿಂದ ಬಡ್ಡಿದರ ಶೇಕಡ 4 ಆಗಿದೆ.
ಯಾರು ಉಳಿತಾಯ ಖಾತೆ ತೆರೆಯಬಹುದು?
* ವಯಸ್ಕರು ಉಳಿತಾಯ ಖಾತೆ ತೆರೆಯಬಹುದು.
* ಇಬ್ಬರು ವಯಸ್ಕರು ಮಾತ್ರ (ಜಾಯಿಂಟ್ ಎ ಅಥವಾ ಜಾಯಿಂಟ್ ಬಿ) ಈ ಖಾತೆ ತೆರೆಯಬಹುದು.
* ಅಪ್ರಾಪ್ತರ ಪರವಾಗಿ ಪೋಷಕರು ಈ ಖಾತೆ ತೆರೆಯಬಹುದು.
* ಅಸ್ವಸ್ಥರ ಪರವಾಗಿ ಪೋಷಕರು ಈ ಖಾತೆ ತೆರೆಯಬಹುದು.
* ತನ್ನ ಹೆಸರಿನಲ್ಲಿ 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕಕರು ಖಾತೆ ತೆರೆಯಬಹುದು.
ಡೆಪಾಸಿಟ್ ಮತ್ತು ವಿತ್‌ಡ್ರಾ
* ಕನಿಷ್ಠ ಡೆಪಾಸಿಟ್ ಮೊತ್ತ: 500 ರೂಪಾಯಿ (ನಂತರದ ಡೆಪಾಸಿಟ್ 10 ರೂಪಾಯಿಗಳಿಗಿಂತ ಕಡಿಮೆಯಿಲ್ಲ)
* ಕನಿಷ್ಠ ವಿತ್‌ಡ್ರಾ ಮೊತ್ತ: 50 ರೂಪಾಯಿ
* ಗರಿಷ್ಠ ಡೆಪಾಸಿಟ್: ಡೆಪಾಸಿಟ್ ಮಾಡಲು ಗರಿಷ್ಠ ಮೊತ್ತದ ಮಿತಿಯಿಲ್ಲ.
* ಕನಿಷ್ಠ ಬ್ಯಾಲೆನ್ಸ್ 500 ರೂಪಾಯಿ ಆಗಿದ್ದು. ಯಾವುದೇ ವಿತ್‌ಡ್ರಾಗೆ ಅವಕಾಶವಿಲ್ಲ.
* ಒಂದು ವೇಳೆ ಹಣಕಾಸು ವರ್ಷದ ಅಂತ್ಯದಲ್ಲಿ ಖಾತೆಯ ಬ್ಯಾಲೆನ್ಸ್ 500 ರೂಪಾಯಿಗಿಂತ ಹೆಚ್ಚಿಸದಿದ್ದರೆ ಖಾತೆ ನಿರ್ವಹಣೆ ಶುಲ್ಕವಾಗಿ 50 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ. ಖಾತೆಯ ಬ್ಯಾಲೆನ್ಸ್ ಶೂನ್ಯವಾಗಿದ್ದರೆ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲಾಗುತ್ತದೆ.
ಬಡ್ಡಿದರದ ಬಗ್ಗೆ ತಿಳಿಯಿರಿ
* ಬಡ್ಡಿಯನ್ನು ತಿಂಗಳ 10ನೇ ತಾರೀಖಿನವರೆಗೆ ಮತ್ತು ತಿಂಗಳ ಅಂತ್ಯದ ನಡುವಿನ ಕನಿಷ್ಟ ಬ್ಯಾಲೆನ್ಸ್‌ನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
* ತಿಂಗಳ 10 ಮತ್ತು ಕೊನೆಯ ದಿನದ ನಡುವಿನ ಬ್ಯಾಲೆನ್ಸ್ 500 ರೂಪಾಯಿಗಿಂತ ಕಡಿಮೆಯಾದರೆ ಒಂದು ತಿಂಗಳಲ್ಲಿ ಯಾವುದೇ ಬಡ್ಡಿಯನ್ನು ಅನುಮತಿಸಲಾಗುವುದಿಲ್ಲ.
* ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹಣಕಾಸು ಸಚಿವಾಲಯವು ನಿಗದಿಪಡಿಸಿದ ಬಡ್ಡಿ ದರದಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
* ಖಾತೆಯನ್ನು ಮುಚ್ಚುವಾಗ ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
ತೆರಿಗೆ ನಿಯಮಗಳನ್ನು ತಿಳಿಯಿರಿ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಟಿಟಿಎ ಅಡಿಯಲ್ಲಿ, ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಿಂದ, ಒಂದು ಹಣಕಾಸು ವರ್ಷದಲ್ಲಿ ಗಳಿಸಿದ 10,000 ರೂಪಾಯಿವರೆಗಿನ ಬಡ್ಡಿಯನ್ನು ತೆರಿಗೆಯ ಆದಾಯದಿಂದ ವಿನಾಯಿತಿ ನೀಡಲಾಗುತ್ತದೆ.


Click it and Unblock the Notifications