ಪ್ರತಿ ವರ್ಷ ಆಗಸ್ಟ್ 15 ರಂದು, ಭಾರತದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅಂದರೆ ನಾಳೆಯೇ ಸ್ವಾತಂತ್ರ್ಯ ದಿನದ ಸಂಭ್ರಮವಾಗಿದೆ. ಆದರೆ ನಮಗೆ ಈ ಸಂದರ್ಭದಲ್ಲೇ ಹಣಕಾಸು ಸ್ವಾತಂತ್ರ್ಯವು ಕೂಡಾ ಅತೀ ಮುಖ್ಯವಾಗುತ್ತದೆ. ಪ್ರತಿಯೋರ್ವ ವ್ಯಕ್ತಿಗೂ ಕೂಡಾ ಹಣಕಾಸಿನ ಸ್ವಾತಂತ್ರ್ಯವು ಬಹಳ ಮುಖ್ಯ. ಆದರೆ ಹೂಡಿಕೆಯ ವಿಚಾರಕ್ಕೆ ಬಂದಾಗ ಮಹಿಳೆ ಮತ್ತು ಪುರುಷರ ನಡುವೆ ಅತೀ ಹೆಚ್ಚು ಅಂತರ ಕಂಡು ಬರುತ್ತದೆ.
ನಾವು ಹೂಡಿಕೆ ಆರಂಭ ಮಾಡಲು ಆರ್ಥಿಕ ತಜ್ಞರಾಗಿರಬೇಕಾಗಿಲ್ಲ. ಆದರೆ ಮೂಲಭೂತ ಹಣಕಾಸು ಶಿಕ್ಷಣವು ಮಹಿಳೆಯರಿಗೆ ತಮ್ಮ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಸಹಾಯಕವಾಗುತ್ತದೆ. ಹಣಕಾಸು ಶಿಕ್ಷಣವನ್ನು ಮ್ಯೂಚುವಲ್ ಫಂಡ್‌ಗಳು ವಿಸ್ತರಿಸಲು ಸಹಕಾರಿಯಾಗಿದೆ. ಈ ಬಗ್ಗೆ ತಜ್ಞರು ಅಧಿತಿ ಕೊಥಾರಿ ಏನು ಹೇಳುತ್ತಾರೆ ಎಂಬ ವಿವರ ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...

ಆರ್ಥಿಕ ಶಿಕ್ಷಣವು ಮಹಿಳೆಯರಿಗೆ ತಮ್ಮ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಹೇಗೆ ಅವಕಾಶ ನೀಡುತ್ತದೆ?
ಹೂಡಿಕೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಾಮಾನ್ಯ ಹೂಡಿಕೆದಾರರಿಗೆ ಆರ್ಥಿಕ ಶಿಕ್ಷಣವು ಕಡ್ಡಾಯವಾಗಿದೆ. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳು ಹಣಕಾಸಿನ ಅರಿವು ಮತ್ತು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದೆ. ಹೂಡಿಕೆದಾರರ ಶಿಕ್ಷಣದ ವಿಷಯದಲ್ಲಿ ಮ್ಯೂಚುವಲ್ ಫಂಡ್‌ಗಳು ಸಹ ಬಹಳಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಮಹಿಳೆಯರು ಹೆಚ್ಚು ವಿದ್ಯಾಭ್ಯಾಸ ಪಡೆದಷ್ಟು, ಅವರ ಆತ್ಮವಿಶ್ವಾಸವು ಕೂಡಾ ಅಷ್ಟೇ ಹೆಚ್ಚಳವಾಗುತ್ತದೆ. ಇನ್ನೊಂದೆಡೆ ನಾವು ಒಬ್ಬರು ಹಣಕಾಸು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಬಹುದು. ಇದರಿಂದಾಗಿ ಪ್ರಶ್ನೆಗಳನ್ನು ಕೇಳಿ ಉತ್ತಮ ಹೂಡಿಕೆಯ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಹಣಕಾಸು ಸಲಹೆಗಾರರು ಏನು ಮಾಡುತ್ತಿದ್ದಾರೆ ಎಂಬುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಇದು ನೀವು ಹೂಡಿಕೆ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಹಾಯಕವಾಗಲಿದೆ.
ಹೂಡಿಕೆದಾರರ ಆರ್ಥಿಕ ಶಿಕ್ಷಣ ಹೆಚ್ಚಿಸಲು ಮ್ಯೂಚುಯಲ್ ಫಂಡ್‌ಗಳು ಹೇಗೆ ಸಹಾಯಕ?
ತಮ್ಮ ಆದಾಯದ ಶೇಕಡ 1ರಷ್ಟು ಮೊತ್ತವನ್ನು ಹಣಕಾಸು ಮತ್ತು ಹೂಡಿಕೆ ಶಿಕ್ಷಣಕ್ಕಾಗಿ ಖರ್ಚು ಮಾಡಲು ಮ್ಯೂಚುಯಲ್ ಫಂಡ್ ಹೌಸ್‌ಗಳಿಗೆ ಸೆಬಿಯು ಹೇಳಿದೆ. ಇದು ಈಗ ಹೂಡಿಕೆದಾರರ ಆರ್ಥಿಕ ಶಿಕ್ಷಣ ಹೆಚ್ಚಿಸಲು ಸಹಾಯಕವಾಗಿದೆ. ಪರಿಣಾಮವಾಗಿ, ಭಾರತವು ಈಗ ಆರ್ಥಿಕ ಮತ್ತು ಹೂಡಿಕೆದಾರರ ಶಿಕ್ಷಣದ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳಿಗಿಂತ ಉತ್ತಮವಾಗಿದೆ. ಇಂದು ಪ್ರತಿ ಎಂಎಫ್‌ಎಚ್ ತನ್ನ ಹಣಕಾಸಿನ ಶಿಕ್ಷಣದ ಕ್ರಮವನ್ನು ನಿರ್ವಹಿಸಲು ಒಂದು ತಂಡವನ್ನು ಹೊಂದಿದೆ.
ಮಹಿಳೆಯರು ಪರಿಗಣಿಸಬೇಕಾದ ಹೂಡಿಕೆ ತಂತ್ರಗಳು ಅಥವಾ ಆಯ್ಕೆಗಳಿವೆಯೇ?
ಮಹಿಳೆಯರಿಗಾಗಿ ಯಾವುದೇ ನಿರ್ದಿಷ್ಟ ಹೂಡಿಕೆ ತಂತ್ರವಿದೆ ಎಂದು ನಾನು ಭಾವಿಸುವುದಿಲ್ಲ, ಅದು ಪುರುಷರಿಗಿಂತ ಭಿನ್ನವಾಗಿದೆ. ನೀವು ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆ ಮಾಡಲು ಆರಂಭ ಮಾಡಿ. ಇದರಿಂದಾಗಿ ವಿವಾಹದ ಬಳಿಕ ಅಥವಾ ಮುಂದಿನ ಜೀವನದಲ್ಲಿ ಉತ್ತಮ ಜೀವನ ನಡೆಸಲು ಸಹಾಯಕವಾಗಲಿದೆ. ನೀವು ಹೂಡಿಕೆ ಮಾಡಿದ ಮೊತ್ತವೇ ನಿಮಗೆ ಭವಿಷ್ಯದಲ್ಲಿ ಆದಾಯವಾಗಬಹುದು.
ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಸ್ಥಿರವಾದ ಆದಾಯವನ್ನು ರಚನೆ ಮಾಡಲು ಸಾಧ್ಯವಾಗಲಿದೆ. ಶಿಸ್ತಿನಿಂದ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಸಾಧ್ಯ. ಎಸ್‌ಐಪಿಯಲ್ಲಿ ನಿಮ್ಮ ಮೊತ್ತವನ್ನು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ನಿಮ್ಮ ಹೂಡಿಕೆ ದುಪ್ಪಟ್ಟುಗೊಳಿಸಲು ಅಪಾಯ-ಮುಕ್ತ ಮಾರ್ಗವಾಗಿದೆ.
ಮಹಿಳೆಯರು ತಮ್ಮ ಆರ್ಥಿಕ ಭವಿಷ್ಯವನ್ನು ಕಾಪಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
ಮೊದಲನೆಯದಾಗಿ, ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳು ಮತ್ತು ಹಣದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು. ಕೆಲವು ಮಹಿಳೆಯರು ತಾವು ದುಡಿದ ಸಂಪೂರ್ಣ ಮೊತ್ತವನ್ನು ತಮ್ಮ ಪತಿ ಅಥವಾ ಮನೆಯ ಪುರುಷರಿಗೆ ನೀಡುತ್ತಾರೆ. ಆದರೆ ಹಾಗೆ ಸಂಪೂರ್ಣ ಮೊತ್ತ ನೀಡುವುದು ಸರಿಯಲ್ಲ. ಮಹಿಳೆಯರು ತಮ್ಮ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ನಿಜವಾದ ಆರ್ಥಿಕ ಸಲಹೆಯನ್ನು ಪಡೆಯಬೇಕು.
ವಿಮೆಯನ್ನು ಪಡೆಯುವುದು ಮಹಿಳೆಯ ಮೊದಲ ಆಯ್ಕೆಯಾಗಬೇಕು. ಮಹಿಳೆ ಯಾವುದೇ ಅವಲಂಬಿತರನ್ನು ಹೊಂದಿಲ್ಲದಿದ್ದರೂ ಸಹ, ಅವಳು ಟರ್ಮ್ ಇನ್ಶೂರೆನ್ಸ್ ಪಡೆಯಬೇಕು ಎಂಬ ತಪ್ಪು ಕಲ್ಪನೆ ಇದೆ. ಮೂಲಭೂತವಾಗಿ, ಮಹಿಳೆಯು ತನ್ನ ನಿವೃತ್ತಿಯ ಸಂದರ್ಭದಲ್ಲಿ ಅಥವಾ ಯಾವುದೇ ಅಹಿತಕರ ಸಂದರ್ಭಗಳಲ್ಲಿ, ಅವಳು ಮತ್ತು ಅವಳ ಅವಲಂಬಿತರನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಸಾಧ್ಯವಾಗಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಿದ ಬಳಿಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಂಪತ್ತನ್ನು ಗರಿಷ್ಠಗೊಳಿಸಲು ಮುಂದಾಗಬಹುದು.
ಇಲ್ಲಿ ಗಮನಿಸಿ: ಮೇಲೆ ಉಲ್ಲೇಖಿಸಲಾದ ಮಾಹಿತಿಯು ವಿಶ್ಲೇಷಕರ ಅಭಿಪ್ರಾಯವಾಗಿದೆ, ಬದಲಾಗಿ ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಆಗಲಿ ಅಥವಾ ಲೇಖಕರದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರ ಸಲಹೆಯನ್ನು ಪಡೆಯುವುದು ಮುಖ್ಯವಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications