ಸಾಮಾನ್ಯವಾಗಿ ಐಷಾರಾಮಿ ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಗಮನ ಸೆಳೆಯಲು ಅಧಿಕ ಬೆಲೆಗೆ ಮಾರಾಟ ಮಾಡುತ್ತದೆ. ಕಫ್ತಾನ್ ಕುರ್ತಾಗಳನ್ನು ಅಷ್ಟಿಷ್ಟಕ್ಕಲ್ಲ 2.56 ಲಕ್ಷ ರೂಪಾಯಿಗೆ ಮಾರಾಟ ಮಾಡುವ ಗುಸ್ಸಿಯಿಂದ ಹಿಡಿದು, ಬಾಲೆನ್ಸಿಯಾಗ ಕಸದ ಚೀಲವನ್ನು 1.42 ಲಕ್ಷ ರೂಪಾಯಿಗೆ ಮಾರಾಟ ಮಾಡುವುದನ್ನು ನೋಡಿದ್ದೇವೆ. ಈ ಬಾತ್‌ರೂಮ್ ಸ್ಲಿಪರ್ ಕೂಡಾ ಈ ಪಟ್ಟಿಗೆ ಸೇರ್ಪಡೆಯಾಗಿದೆ.
ಇದು ಹ್ಯೂಗೋ ಬಾಸ್‌ನ ಸ್ಲಿಪರ್ ಆಗಿದೆ. ಹ್ಯೂಗೋ ಬಾಸ್ ಬ್ರ್ಯಾಂಡ್ ನೀಲಿ ಬಣ್ಣದ ಫ್ಲಿಪ್-ಫ್ಲಾಪ್ ಬಾತ್‌ರೂಮ್ ಚಪ್ಪಲಿಯನ್ನು ರೂಪಾಯಿ 8,990 ಕ್ಕೆ ಮಾರಾಟ ಮಾಡುತ್ತಿದೆ. ಅದು ಕೂಡಾ ಸುಮಾರು ಶೇಕಡ 54ರಷ್ಟು ರಿಯಾಯಿತಿ ಬೆಲೆಯಲ್ಲಿ ಕಂಪನಿ ಬಾತ್‌ರೂಮ್ ಚಪ್ಪಲಿಯನ್ನು ಮಾರಾಟ ಮಾಡುತ್ತಿದೆ.
ಸಾಮಾನ್ಯವಾಗಿ ನಾವು 100-200 ರೂಪಾಯಿ ಕೊಟ್ಟು ತರುವ ಬಾತ್‌ರೂಮ್ ಚಪ್ಪಲಿಗೂ ಈ ಹ್ಯೂಗೋ ಬಾಸ್ ಮಾರಾಟ ಮಾಡುವ ಬಾತ್‌ರೂಮ್ ಚಪ್ಪಲಿಯಲ್ಲಿ ಸುಲಭವಾಗಿ ಯಾವುದೇ ವ್ಯತ್ಯಾಸವನ್ನು ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಚಪ್ಪಲಿ ಬೆಲೆ ಮಾತ್ರ ಶೇಕಡ 54ರಷ್ಟು ರಿಯಾಯಿತಿ ಬಳಿಕ 8,990 ರೂಪಾಯಿ ಆಗಿದೆ.

ಇಎಂಐ ಆಯ್ಕೆಯೂ ಇದೆ!
ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಕಂಪನಿಯು ತನ್ನ ಈ ಬಾತ್‌ರೂಮ್ ಸ್ಲಿಪರ್ ಅನ್ನು ಇಎಂಐ ಮೂಲಕವೂ ಮಾರಾಟ ಮಾಡುತ್ತದೆ. ನಾವು ಖರೀದಿ ಮಾಡಿದರೆ ಪ್ರತಿ ತಿಂಗಳಿಗೆ 500 ರೂಪಾಯಿಯಿಂದ ಪ್ರಾರಂಭವಾಗುವ ಇಎಂಐ ಮೂಲಕ ಹಣ ಪಾವತಿ ಮಾಡಬಹುದು. ಈ ಸ್ಲಿಪರ್‌ನ ಮೂಲ ಬೆಲೆ ರೂಪಾಯಿ 19,500 ರೂಪಾಯಿ ಆಗಿದೆ.
ನೆಟ್ಟಿಗರೊಬ್ಬರು ಟ್ವಿಟ್ಟರ್‌ನಲ್ಲಿ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ ಬಳಿಕ ಈ ದುಬಾರಿ ಬಾತ್‌ರೂಮ್ ಚಪ್ಪಲಿಯ ಚರ್ಚೆ ಆರಂಭವಾಗಿದೆ. ನಿರೀಕ್ಷೆಯಂತೆ, ನೆಟ್ಟಿಗರು ಚಪ್ಪಲಿಗಳ ದುಬಾರಿ ಬೆಲೆಯ ಬಗ್ಗೆ ಮೀಮ್‌ಗಳು, ಟ್ರೋಲ್‌ಗಳು ಮತ್ತು ಜೋಕ್‌ಗಳನ್ನು ಮಾಡಲು ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ
ನೆಟ್ಟಿಗರೊಬ್ಬರು ಈ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿ ಇದು ಬಾತ್‌ರೂಮ್ ಚಪ್ಪಲಿ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಹಲವಾರು ಮಂದಿ ಟ್ರೋಲ್ ಮಾಡಿದ್ದಾರೆ. ಈ ಚಪ್ಪಲಿಗೆ 150 ರೂಪಾಯಿ ಕೊಡ್ತೇವೆ ಸೇಲ್ ಮಾಡ್ತೀರಾ ಎಂದು ಕೂಡಾ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು 54 ಶೇಕಡ ರಿಯಾಯಿತಿಯ ಚಪ್ಪಲಿಯ ಇದು ಎಂದು ಆಶ್ಚರ್ಯ ಸೂಚಿಸಿದ್ದಾರೆ. ಇನ್ನೊಬ್ಬರು 60 ಸಾವಿರ ರೂಪಾಯಿಯ ಚಪ್ಪಲಿಯೊಂದರ ಸ್ಕ್ರೀನ್‌ಶಾಟ್ ಹಾಕಿ, ಈ ಚಪ್ಪಲಿಗಿಂತ ಈ ಬಾತ್‌ರೂಮ್ ಚಪ್ಪಲಿಯೇ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೋರ್ವ ನೆಟ್ಟಿಗರು "ನಾವು ಈ ಸ್ಲಿಪರ್ ಅನ್ನು 8990 ರೂಪಾಯಿಗೆ ಇಎಂಐ ಮೂಲಕ ಖರೀದಿ ಮಾಡಿದರೆ, ನಮ್ಮ ಇಎಂಐ ಮುಗಿಯುವಷ್ಟರಲ್ಲಿ ಚಪ್ಪಲಿ ಕಿತ್ತೋಗಿರುತ್ತದೆ," ಎಂದು ತಿಳಿಸಿದ್ದಾರೆ.
ಇನ್ನು ಈ ಹಿಂದೆ ಅಮೆಜಾನ್‌ನಲ್ಲಿ ಪ್ಲಾಸ್ಟಿಕ್ ಬಕೆಟ್ ಒಂದು ಭಾರೀ ಟ್ರೋಲ್ ಆಗಿತ್ತು. ಸುಮಾರು ಶೇಕಡ 28ರಷ್ಟು ರಿಯಾಯಿತಿ ಬಳಿಕ ಪ್ಲಾಸ್ಟಿಕ್ ಬಕೆಟ್‌ನ ಬೆಲೆ 25,999 ರೂಪಾಯಿ ಆಗಿತ್ತು. ಇಂತಹ ಬ್ರಾಂಡೆಂಡ್ ವಸ್ತುಗಳನ್ನು ನೀವು ಖರೀದಿ ಮಾಡಲು ಬಯಸುತ್ತೀರಾ?!


Click it and Unblock the Notifications