ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಯಾವ ಹೂಡಿಕೆಯು ಸುರಕ್ಷಿತ ಎಂದು ನೋಡುತ್ತೇವೆ. ಹಾಗಿರುವಾಗ ನಮ್ಮ ಮುಂದಿರುವ ಆಯ್ಕೆಯು ಅಂಚೆ ಕಚೇರಿ ಯೋಜನೆಯಾಗಿದೆ. ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ಹೇಗೆ ಸುರಕ್ಷಿತವೋ ಹಾಗೆಯೇ ಈ ಹೂಡಿಕೆ ಯೋಜನೆ ಉತ್ತಮ ರಿಟರ್ನ್ ನೀಡುವ ಹೂಡಿಕೆಯಾಗಿದೆ.
ಅಂಚೆ ಕಚೇರಿಯು ಎಲ್ಲಾ ವಯಸ್ಸಿನ ಮತ್ತು ವರ್ಗದ ಜನರಿಗೆ ಉಳಿತಾಯ ಯೋಜನೆಗಳನ್ನು ಹೊಂದಿದೆ. ಅಂಚೆ ಕಚೇರಿಯ ಅಂತಹ ಒಂದು ಯೋಜನೆಯಲ್ಲಿ, ಪತಿ ಹಾಗೂ ಪತ್ನಿ ಇಬ್ಬರೂ ಕೂಡಾ ಹೂಡಿಕೆ ಮಾಡಬಹುದಾಗಿದೆ. ಅಂಚೆ ಕಛೇರಿಯ ಈ ಯೋಜನೆಯು ದಂಪತಿಯನ್ನು ಕಡಿಮೆ ಸಮಯದಲ್ಲಿ ಶ್ರೀಮಂತರನ್ನಾಗಿ ಮಾಡಬಹುದು.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಡಿ, ಪತಿ ಮತ್ತು ಪತ್ನಿ ಪ್ರತಿ ತಿಂಗಳು ಗಳಿಸಬಹುದು. ಅಂಚೆ ಕಚೇರಿಯ ಈ ಯೋಜನೆ ಏನು ಮತ್ತು ಅದರ ಪ್ರಯೋಜನಗಳನ್ನು ನಾವಿಲ್ಲಿ ವಿವರಿಸಿದ್ದೇವೆ, ಇಲ್ಲಿದೆ ವಿವರ ಮುಂದೆ ಓದಿ...
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಎಂದರೇನು?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯು ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಅಂಚೆ ಕಚೇರಿಯ ಈ ಯೋಜನೆಯಲ್ಲಿ ಶೇಕಡ 7.4 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಹೂಡಿಕೆದಾರರಲ್ಲಿ ಬಹಳ ಪ್ರಸಿದ್ಧವಾದ ಯೋಜನೆಯಾಗಿದೆ. ಇದು ಕಡಿಮೆ ಅಪಾಯದ ಉಳಿತಾಯ ಯೋಜನೆಯಾಗಿದೆ.
ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ನಿಯಮಿತ ಮಾಸಿಕ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಸ್ಥಿರ ಬಡ್ಡಿ ಲಭ್ಯವಿದೆ. ಅಂಚೆ ಕಛೇರಿಯ ಈ ಯೋಜನೆಯಲ್ಲಿ, ಒಂದು ಖಾತೆ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಈ ಪೈಕಿ, ಜಂಟಿ ಖಾತೆಯಲ್ಲಿ ಗರಿಷ್ಠ 3 ಜನರು ಏಕಕಾಲದಲ್ಲಿ ಖಾತೆಯನ್ನು ತೆರೆಯಬಹುದು. ಅಂದರೆ, ಪತಿ ಮತ್ತು ಪತ್ನಿ ಇಬ್ಬರು ಜೊತೆಯಾಗಿ ಹೂಡಿಕೆ ಮಾಡಬಹುದು.
ಅಂಚೆ ಕಚೇರಿ ಖಾತೆಯ ವಿಶೇಷ ಫೀಚರ್‌ಗಳು
ಅಂಚೆ ಕಚೇರಿಯ ಈ ಮಾಸಿಕ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಗಳ ಮಲ್ಟಿಪಲ್ ಹೂಡಿಕೆ ಮಾಡಬಹುದು. ನೀವು ಒಂದೇ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.
ಮಾಸಿಕ ಆದಾಯ ಎಷ್ಟು ಇರುತ್ತದೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,500 ರೂಪಾಯಿ ಆದಾಯವನ್ನು ಪಡೆಯಬಹುದಾಗಿದೆ. ಜಂಟಿ ಖಾತೆಯಡಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು 9,250 ರೂಪಾಯಿ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಅಪ್ರಾಪ್ತ ವಯಸ್ಕರ ಪರವಾಗಿ ಅಥವಾ ಅಸ್ವಸ್ಥರ ಪರವಾಗಿ ಪಾಲಕರು ಖಾತೆಯನ್ನು ತೆರೆಯಬಹುದು. ಒಂದು ವರ್ಷದ ನಂತರ ಖಾತೆಯನ್ನು ನೀವು ಅಕಾಲಿಕವಾಗಿ ಮುಚ್ಚಬಹುದಾಗಿದೆ. ಆದರೆ ಅದರಿಂದಾಗಿ ಶೇಕಡ 2 ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. 3 ವರ್ಷಗಳ ನಂತರ ನೀವು ಈ ಖಾತೆಯನ್ನು ಮುಚ್ಚಿದ್ದರೆ, ಶೇಕಡ 1 ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಯಾರು ಖಾತೆ ತೆರೆಯಬಹುದು?
* ವಯಸ್ಕರು ಈ ಖಾತೆ ತೆರೆಯಬಹುದು.
* ಜಂಟಿ ಖಾತೆ ಅಡಿಯಲ್ಲಿ ಗರಿಷ್ಠ 3 ವಯಸ್ಕರು ಖಾತೆ ತೆರೆಯಬಹುದು
* ಅಪ್ರಾಪ್ತ/ಅಸ್ವಸ್ಥರ ಪರವಾಗಿ ಪೋಷಕರು ಖಾತೆ ತೆರೆಯಬಹುದು
* ತನ್ನ ಹೆಸರಿನಲ್ಲಿ 10 ವರ್ಷ ಮೇಲ್ಪಟ್ಟ ಅಪ್ರಾಪ್ತರು ತೆರೆಯಬಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Silver Rate Today: ಮತ್ತೆ ಸ್ಥಿರವಾದ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bus Fare Hike: ಯುಗಾದಿ ಹತ್ತಿರದಲ್ಲಿರೋವಾಗ್ಲೇ ಬಸ್ ಟಿಕೆಟ್ ಹೆಚ್ಚಳದ ಸೂಚನೆ! ಎಷ್ಟಾಗಲಿದೆ ಗೊತ್ತಾ ದರ?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Power Cut: ಇಂದು ಇಲ್ಲೆಲ್ಲಾ ಇರಲ್ಲ ಕರೆಂಟ್! ಬೆಸ್ಕಾಂ ಇಲಾಖೆಯಿಂದ ಕ್ರಮ



Click it and Unblock the Notifications