ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022ರ ಮೇ ತಿಂಗಳಿನಿಂದ ಆರಂಭವಾಗಿ ಸತತವಾಗಿ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಿಸಿದೆ. ಆದರೆ ಆಗಸ್ಟ್ 10 ರಂದು ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆದರೂ ಕೆಲವು ಬ್ಯಾಂಕುಗಳು ಸಾಲದ ಬಡ್ಡಿದರ ಹೆಚ್ಚಿಸಿದೆ.
ಹೌದು, ರೆಪೋ ದರ ಸ್ಥಿರವಾಗಿದ್ದರೂ ಸಹ ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ತನ್ನ ಮಾರ್ಜಿನಲ್ ಕಾಸ್ಟ್-ಆಧಾರಿತ ಸಾಲದ ದರವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಈ ಎರಡು ಬ್ಯಾಂಕ್‌ಗಳಲ್ಲಿ ಸಾಲದ ಇಎಂಐ ಏರಿಕೆಯಾಗಿದೆ. ಯಾರ ಸಾಲಕ್ಕೆ ಎಂಸಿಎಲ್‌ಆರ್ ಆಧಾರಿತ ಬಡ್ಡಿದರವಿದೆಯೋ ಅವರಿಗೆ ಸಾಲ ದುಬಾರಿಯಾಗಿದೆ. ಸಾಮಾನ್ಯವಾಗಿ ಎಂಸಿಎಲ್‌ಆರ್ ಬಡ್ಡಿ ಆಧಾರಿತ ಸಾಲ 1 ವರ್ಷದ ಎಂಸಿಎಲ್‌ಆರ್ ಮೇಲೆ ಅವಲಂಭಿಸಿರುತ್ತದೆ. ಈ ನೂತನ ಬಡ್ಡಿದರ ಸೆಪ್ಟೆಂಬರ್ 1, 2023ರಿಂದ ಜಾರಿಗೆ ಬರುತ್ತದೆ.

ಐಸಿಐಸಿಐ ಬ್ಯಾಂಕ್ ನೂತನ ಎಂಸಿಎಲ್‌ಆರ್
ಐಸಿಐಸಿಐ ಬ್ಯಾಂಕ್ ಎಲ್ಲಾ ಅವಧಿಯ ಎಂಸಿಎಲ್‌ಆರ್ ಅನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಿದೆ. ಈ ಪರಿಷ್ಕರಣೆಯ ನಂತರ, ಐಸಿಐಸಿಐ ಬ್ಯಾಂಕ್‌ನ ಓವರ್‌ನೈಟ್, ಒಂದು ತಿಂಗಳ ಎಂಸಿಎಲ್‌ಆರ್ ಶೇಕಡ 8.45 ಆಗಿದೆ. ಮೂರು ತಿಂಗಳ ಮತ್ತು ಆರು ತಿಂಗಳ ಎಂಸಿಎಲ್‌ಆರ್‌ಗಳು ಕ್ರಮವಾಗಿ ಶೇಕಡ 8.50 ಮತ್ತು ಶೇಕಡ 8.85 ರಷ್ಟಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.95 ಆಗಿದೆ.
ಪಿಎನ್‌ಬಿ ನೂತನ ಎಂಸಿಎಲ್‌ಆರ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎಲ್ಲಾ ಅವಧಿಗಳ ತನ್ನ ಕನಿಷ್ಠ ವೆಚ್ಚದ ಸಾಲದ ದರಗಳನ್ನು (ಎಂಸಿಎಲ್‌ಆರ್) 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಪಿಎನ್‌ಬಿ ವೆಬ್‌ಸೈಟ್‌ನ ಪ್ರಕಾರ, ಬ್ಯಾಂಕ್‌ನ ಓವರ್‌ನೈಟ್ ಬೆಂಚ್‌ಮಾರ್ಕ್ ಶೇಕಡ 8.5 ರಿಂದ 8.15 ಕ್ಕೆ ಹೆಚ್ಚಿಸಲಾಗಿದೆ. ಎಂಸಿಎಲ್‌ಆರ್ ಏರಿಕೆ ಬಳಿಕ ಒಂದು ತಿಂಗಳು, ಮೂರು ತಿಂಗಳು ಮತ್ತು ಆರು ತಿಂಗಳ ದರಗಳು ಕ್ರಮವಾಗಿ ಶೇ.8.25, ಶೇ.8.35 ಮತ್ತು ಶೇ.8.55ಕ್ಕೆ ತಲುಪಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇ.8.65ಕ್ಕೆ ಏರಿಕೆಯಾಗಿದ್ದು, ಮೂರು ವರ್ಷದ ಎಂಸಿಎಲ್‌ಆರ್ ಶೇ.8.90ರಿಂದ ಶೇ.8.95ಕ್ಕೆ ಏರಿಕೆಯಾಗಿದೆ.
ನಿಮ್ಮ ಗೃಹ ಸಾಲ ಪೂರ್ವಪಾವತಿ ಮಾಡಬೇಕೇ?
ನಿಮ್ಮ ಹಣಕಾಸಿನ ಸ್ಥಿತಿಯನ್ನು ಅವಲಂಬಿಸಿ, ನಿಮ್ಮ ಗೃಹ ಸಾಲವನ್ನು ಪೂರ್ವಪಾವತಿ ಮಾಡಲು ನೀವು ಮುಂದಾಗಬಹುದು. ತಜ್ಞರಾದ ಅರ್ಚಿತ್ ಗುಪ್ತಾ, "ನೀವು ದೊಡ್ಡ ಪ್ರಮಾಣದ ಗೃಹ ಸಾಲವನ್ನು ಹೊಂದಿದ್ದರೆ ಅಥವಾ ಬ್ಯಾಂಕ್ ನಿಮಗೆ ಹೆಚ್ಚಿನ ಗೃಹ ಸಾಲದ ದರವನ್ನು ವಿಧಿಸುತ್ತಿದ್ದರೆ, ನಿಮ್ಮ ಗೃಹ ಸಾಲವನ್ನು ಪೂರ್ವಪಾವತಿ ಮಾಡುವುದು ಒಳ್ಳೆಯದು," ಎಂದು ಹೇಳುತ್ತಾರೆ.
"ಅಧಿಕ ಬಡ್ಡಿದರ ಹೊರೆಯಾಗುವ ಕಾರಣದಿಂದಾಗಿ ಹಣವಿದ್ದಾಗ ಪೂರ್ವಪಾವತಿ ಮಾಡಿದರೆ ಉತ್ತಮ. ಆದರೆ ಬ್ಯಾಂಕ್ ನಿಮಗೆ ಗೃಹ ಸಾಲದ ಮೇಲೆ ಕಡಿಮೆ ಬಡ್ಡಿದರವನ್ನು ವಿಧಿಸುವುದಾದರೆ, ನೀವು ಗೃಹ ಸಾಲದ ಅಸಲು ಮತ್ತು ಬಡ್ಡಿಯ ಮೇಲೆ ಗಮನಾರ್ಹ ತೆರಿಗೆ ಪ್ರಯೋಜನಗಳನ್ನು ಪಡೆದರೆ ನೀವು ಗೃಹ ಸಾಲವನ್ನು ಮುಂದುವರಿಸಬಹುದು," ಎಂದು ಅರ್ಚಿತ್ ಗುಪ್ತಾ ತಿಳಿಸಿದರು.


Click it and Unblock the Notifications