ಐಸಿಐಸಿಐ ಬ್ಯಾಂಕ್ ನಿಂದ ಬುಧವಾರ (ಸೆಪ್ಟೆಂಬರ್ 30, 2020) ಹಬ್ಬದ ಸೀಸನ್ ಗಾಗಿ ರೀಟೇಲ್ ಹಾಗೂ ಬಿಜಿನೆಸ್ ಗ್ರಾಹಕರಿಗಾಗಿ ವಿವಿಧ ಬ್ಯಾಂಕಿಂಗ್ ಪ್ರಾಡಕ್ಟ್ ಮತ್ತು ಸೇವೆಗಳ ಮೇಲೆ ಅತ್ಯಾಕರ್ಷಕ ಆಫರ್ ಗಳನ್ನು ಘೋಷಣೆ ಮಾಡಲಾಗಿದೆ. ಕೆಲವು ಆಫರ್ ಗಳು ಅಕ್ಟೋಬರ್ 1, 2020ರಿಂದ ದೊರೆಯಲಿದೆ. ಇತರ ಆಫರ್ ಗಳು
ಗೃಹ ಸಾಲ ಹಾಗೂ ಇತರ ಬ್ಯಾಂಕ್ ಗಳಿಂದ ಬಾಕಿ ವರ್ಗಾವಣೆ
ರೆಪೋ ದರಕ್ಕೆ ಜೋಡಣೆಯಾದ ಆಕರ್ಷಕ ಬಡ್ಡಿ ದರ 6.90%ನಿಂದ ಆರಂಭ ಮತ್ತು ಪ್ರೊಸೆಸಿಂಗ್ ಶುಲ್ಕ 3000 ರುಪಾಯಿಯಿಂದ ಆರಂಭ
ವಾಹನ ಸಾಲ
ಕಾರಿನ ಸಾಲ 84 ತಿಂಗಳಿಗೆ ಪ್ರತಿ 1 ಲಕ್ಷ ರುಪಾಯಿಗೆ 1,554 ರುಪಾಯಿ ಇಎಂಐ. ಮಹಿಳೆಯರಿಗೆ ಪ್ರೊಸೆಸಿಂಗ್ ಶುಲ್ಕ 1999 ರುಪಾಯಿ.
ಟೂ ವ್ಹೀಲರ್- ದ್ವಿಚಕ್ರ ವಾಹನ ಸಾಲ
36 ತಿಂಗಳ ಅವಧಿಗೆ ಪ್ರತಿ 1000 ರುಪಾಯಿಗೆ 36 ರುಪಾಯಿ ಇಎಂಐ ಆಗುತ್ತದೆ. ವಿಶೇಷ ಪ್ರೊಸೆಸಿಂಗ್ ಶುಲ್ಕ 999 ರುಪಾಯಿ ಆಗುತ್ತದೆ.
ಇನ್ ಸ್ಟಂಟ್ ಪರ್ಸನಲ್ ಲೋನ್
ಪರ್ಸನಲ್ ಲೋನ್ ಗೆ ಬಡ್ಡಿ ದರ 10.50%ನಿಂದ ಆರಂಭ ಹಾಗೂ ಪ್ರೊಸೆಸಿಂಗ್ ಫೀ 3999 ರುಪಾಯಿ ಆಗುತ್ತದೆ.
ಗ್ರಾಹಕರ ಹಣಕಾಸು ಸಾಲ
ಪ್ರಮುಖ ಗೃಹೋಪಯೋಗಿ ವಸ್ತುಗಳು ಹಾಗೂ ಡಿಜಿಟಲ್ ವಸ್ತುಗಳ ಮೇಲೆ ನೋ ಕಾಸ್ಟ್ ಇಎಂಐ ದೊರೆಯುತ್ತದೆ. ಕನಿಷ್ಠ ದಾಖಲೆಯೊಂದಿಗೆ ಶೀಘ್ರ ಹಾಗೂ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಲ್ಲಿ ಸಾಲ ವಿತರಿಸಲಾಗುತ್ತದೆ.

ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ಸ್, ಬಟ್ಟೆಗಳು ಮತ್ತು ಆಭರಣಗಳು, ಆರೋಗ್ಯ ಮತ್ತು ಸುರಕ್ಷತೆ, ದಿನಸಿ ಮತ್ತು ಆಹಾರ ಆರ್ಡರ್, ಆಟೋಮೊಬೈಲ್ ಮತ್ತು ಪೀಠೋಪಕರ, ಮನರಂಜನೆ ಮತ್ತು ಇ ಲರ್ನಿಂಗ್ ಮೇಲೆ ನಾನಾ ಆಫರ್ ಗಳಿವೆ.
ಇನ್ನು ಇ ಕಾಮರ್ಸ್ ವೆಬ್ ಸೈಟ್ ಗಳಲ್ಲೂ ಆಕರ್ಷಕ ಬಡ್ಡಿ ದರದಲ್ಲಿ ಉತ್ಪನ್ನಗಳು ಖರೀದಿಗೆ ದೊರೆಯುತ್ತವೆ. ಈ ಆಫರ್ ಗಳನ್ನು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳು, ನೆಟ್ ಬ್ಯಾಂಕಿಂಗ್ ಮತ್ತು ಐಮೊಬೈಲ್ ಅಪ್ಲಿಕೇಷನ್ ಮೂಲಕ ಪಡೆಯಬಹುದು.


Click it and Unblock the Notifications