ಐಸಿಐಸಿಐ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಪರಿಷ್ಕರಣೆ: ಇಲ್ಲಿ ಪರಿಶೀಲಿಸಿ

ಐಸಿಐಸಿಐ ಬ್ಯಾಂಕ್ 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿ ಹೆಚ್ಚಿನ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಬಡ್ಡಿದರಗಳು ಇಂದಿನಿಂದ ಏಪ್ರಿಲ್ 22, 2022 ರಿಂದ ಜಾರಿಗೆ ಬರಲಿದೆ.

ಬ್ಯಾಂಕ್ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗಿನ ಏಳರಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳಿಗೆ ಅದೇ ಬಡ್ಡಿದರವನ್ನು ವಿಧಿಸಲಾಗುವುದು ಎಂದು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

7 ರಿಂದ 14 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಈಗ 2.50 ಶೇಕಡಾ ಬಡ್ಡಿ ದರ ದೊರೆಯಲಿದೆ. ಆದರೆ 15 ರಿಂದ 29 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಬಡ್ಡಿದರವು ಏರಿಕೆ ಆಗುವುದಿಲ್ಲ. ಅದಕ್ಕೂ ಕೂಡಾ 2.50 ಶೇಕಡಾ ಬಡ್ಡಿಯನ್ನು ನೀಡಲಾಗುತ್ತದೆ.

ಐಸಿಐಸಿಐ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಪರಿಷ್ಕರಣೆ: ಪರಿಶೀಲಿಸಿ

30 ದಿನಗಳಿಂದ 45 ದಿನಗಳು ಮತ್ತು 46 ದಿನಗಳಿಂದ 60 ದಿನಗಳವರೆಗೆ ಮುಕ್ತಾಯಗೊಳ್ಳುವ ಫಿಕ್ಸಿಡ್ ಡೆಪಾಸಿಟ್‌ಗಳಿಗೆ 2.75 ಪ್ರತಿಶತ ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ. ಐಸಿಐಸಿಐ ಬ್ಯಾಂಕ್ ಪ್ರಸ್ತುತ 61 ರಿಂದ 90 ದಿನಗಳವರೆಗೆ ಅವಧಿಯ ಠೇವಣಿಗಳ ಮೇಲೆ ಶೇಕಡ 3 ಬಡ್ಡಿದರವನ್ನು ಒದಗಿಸುತ್ತದೆ. . ಬ್ಯಾಂಕ್ 91 ದಿನಗಳಿಂದ 120 ದಿನಗಳವರೆಗೆ, 121 ದಿನಗಳಿಂದ 150 ದಿನಗಳವರೆಗೆ ಮತ್ತು 151 ದಿನಗಳಿಂದ 184 ದಿನಗಳವರೆಗೆ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಶೇಕಡಾ 3.35 ರ ಬಡ್ಡಿದರವನ್ನು ಒದಗಿಸುತ್ತದೆ.

185 ದಿನಗಳಿಂದ 210 ದಿನಗಳು ಮತ್ತು 211 ದಿನಗಳಿಂದ 270 ದಿನಗಳವರೆಗೆ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗೆ ಶೇಕಡ 3.60 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ 271 ದಿನಗಳಿಂದ 289 ದಿನಗಳು ಮತ್ತು 290 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಶೇಕಡ 3.80 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.

ಐಸಿಐಸಿಐ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಪರಿಷ್ಕರಣೆ: ಪರಿಶೀಲಿಸಿ

ಬ್ಯಾಂಕ್ ಪ್ರಸ್ತುತ 1 ವರ್ಷದಿಂದ 389 ದಿನಗಳವರೆಗೆ ಮತ್ತು 390 ದಿನಗಳಿಂದ 15 ತಿಂಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಶೇಕಡಾ 4.30 ಬಡ್ಡಿಯನ್ನು ಮತ್ತು 15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ 4.40 ಶೇಕಡಾ ಬಡ್ಡಿಯನ್ನು ಪಾವತಿಸುತ್ತದೆ.

ಐಸಿಐಸಿಐ ಬ್ಯಾಂಕ್ ಈಗ ಕ್ರಮವಾಗಿ 18 ತಿಂಗಳಿಂದ 2 ವರ್ಷಗಳವರೆಗೆ ಮತ್ತು 2 ವರ್ಷ 1 ದಿನದಿಂದ 3 ವರ್ಷಗಳವರೆಗೆ ಅವಧಿಯ ಠೇವಣಿಗಳ ಮೇಲೆ 4.50 ಶೇಕಡಾ ಮತ್ತು 4.60 ಶೇಕಡಾ ಬಡ್ಡಿದರಗಳನ್ನು ನೀಡುತ್ತದೆ. ಆದರೆ ಬ್ಯಾಂಕ್ 3 ವರ್ಷಗಳು 1 ದಿನದಿಂದ 5 ವರ್ಷಗಳು ಮತ್ತು 5 ವರ್ಷಗಳು 1 ದಿನದಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳ ಮೇಲೆ ಶೇಕಡಾ 4.70 ರ ಬಡ್ಡಿದರದ ಭರವಸೆಯನ್ನು ನೀಡುತ್ತದೆ.

ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ತಿಳಿಯಿರಿ

7 ದಿನಗಳಿಂದ 14 ದಿನಗಳು: ಸಾಮಾನ್ಯರಿಗೆ 2.50, ಹಿರಿಯ ನಾಗರಿಕರಿಗೆ 2.50 ಬಡ್ಡಿದರ
15 ದಿನಗಳಿಂದ 29 ದಿನಗಳು: ಸಾಮಾನ್ಯರಿಗೆ 2.50, ಹಿರಿಯ ನಾಗರಿಕರಿಗೆ 2.50 ಬಡ್ಡಿದರ
30 ದಿನಗಳಿಂದ 45 ದಿನಗಳು: ಸಾಮಾನ್ಯರಿಗೆ 2.75, ಹಿರಿಯ ನಾಗರಿಕರಿಗೆ 2.75 ಬಡ್ಡಿದರ
46 ದಿನಗಳಿಂದ 60 ದಿನಗಳು: ಸಾಮಾನ್ಯರಿಗೆ 2.75, ಹಿರಿಯ ನಾಗರಿಕರಿಗೆ 2.75 ಬಡ್ಡಿದರ
61 ದಿನಗಳಿಂದ 90 ದಿನಗಳು: ಸಾಮಾನ್ಯರಿಗೆ 3.00, ಹಿರಿಯ ನಾಗರಿಕರಿಗೆ 3.00 ಬಡ್ಡಿದರ
91 ದಿನಗಳಿಂದ 120 ದಿನಗಳು: ಸಾಮಾನ್ಯರಿಗೆ 3.35, ಹಿರಿಯ ನಾಗರಿಕರಿಗೆ 3.35 ಬಡ್ಡಿದರ
121 ದಿನಗಳಿಂದ 150 ದಿನಗಳು: ಸಾಮಾನ್ಯರಿಗೆ 3.35, ಹಿರಿಯ ನಾಗರಿಕರಿಗೆ 3.35 ಬಡ್ಡಿದರ
151 ದಿನಗಳಿಂದ 184 ದಿನಗಳು: ಸಾಮಾನ್ಯರಿಗೆ 3.35, ಹಿರಿಯ ನಾಗರಿಕರಿಗೆ 3.35 ಬಡ್ಡಿದರ
185 ದಿನಗಳಿಂದ 210 ದಿನಗಳು: ಸಾಮಾನ್ಯರಿಗೆ 3.60, ಹಿರಿಯ ನಾಗರಿಕರಿಗೆ 3.60 ಬಡ್ಡಿದರ
211 ದಿನಗಳಿಂದ 270 ದಿನಗಳು: ಸಾಮಾನ್ಯರಿಗೆ 3.60, ಹಿರಿಯ ನಾಗರಿಕರಿಗೆ 3.60 ಬಡ್ಡಿದರ
271 ದಿನಗಳಿಂದ 289 ದಿನಗಳು: ಸಾಮಾನ್ಯರಿಗೆ 3.80, ಹಿರಿಯ ನಾಗರಿಕರಿಗೆ 3.80 ಬಡ್ಡಿದರ
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಸಾಮಾನ್ಯರಿಗೆ 3.80, ಹಿರಿಯ ನಾಗರಿಕರಿಗೆ 3.80 ಬಡ್ಡಿದರ
1 ವರ್ಷದಿಂದ 389 ದಿನಗಳು: ಸಾಮಾನ್ಯರಿಗೆ 4.30, ಹಿರಿಯ ನಾಗರಿಕರಿಗೆ 4.30 ಬಡ್ಡಿದರ
390 ದಿನಗಳಿಂದ 15 ತಿಂಗಳಿಗಿಂತ ಕಡಿಮೆ: ಸಾಮಾನ್ಯರಿಗೆ 4.30, ಹಿರಿಯ ನಾಗರಿಕರಿಗೆ 4.30 ಬಡ್ಡಿದರ
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ: ಸಾಮಾನ್ಯರಿಗೆ 4.40, ಹಿರಿಯ ನಾಗರಿಕರಿಗೆ 4.40 ಬಡ್ಡಿದರ
18 ತಿಂಗಳಿಂದ 2 ವರ್ಷ: ಸಾಮಾನ್ಯರಿಗೆ 4.50, ಹಿರಿಯ ನಾಗರಿಕರಿಗೆ 4.50 ಬಡ್ಡಿದರ
2 ವರ್ಷಗಳು 1 ದಿನದಿಂದ 3 ವರ್ಷ: ಸಾಮಾನ್ಯರಿಗೆ 4.60, ಹಿರಿಯ ನಾಗರಿಕರಿಗೆ 4.60 ಬಡ್ಡಿದರ
3 ವರ್ಷಗಳು 1 ದಿನದಿಂದ 5 ವರ್ಷ: ಸಾಮಾನ್ಯರಿಗೆ 4.70, ಹಿರಿಯ ನಾಗರಿಕರಿಗೆ 4.70 ಬಡ್ಡಿದರ
5 ವರ್ಷಗಳು 1 ದಿನದಿಂದ 10 ವರ್ಷ: ಸಾಮಾನ್ಯರಿಗೆ 4.70, ಹಿರಿಯ ನಾಗರಿಕರಿಗೆ 4.70 ಬಡ್ಡಿದರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+