ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಇಂದು (ಫೆಬ್ರವರಿ 8) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದೆ. ಇದಕ್ಕೂ ಒಂದು ದಿನ ಮುನ್ನವೇ ಐಸಿಐಸಿಐ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಸಿದೆ.
ಬ್ಯಾಂಕ್ ಪ್ರಸ್ತುತ ಸಾಮಾನ್ಯ ಜನರಿಗೆ ಶೇಕಡ 4.50ರಿಂದ ಶೇಕಡ 7.15ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರು ಕೂಡಾ ಅದೇ ಬಡ್ಡಿದರವನ್ನು ಹೊಂದಿದೆ. 2 ಕೋಟಿ ರೂಪಾಯಿಗಿಂತ ಅಧಿಕ ಆದರೆ 5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಹೊಸ ಬಡ್ಡಿದರವು ಅನ್ವಯವಾಗಲಿದೆ. ಐಸಿಐಸಿಐ ಬ್ಯಾಂಕ್ ವೆಬ್‌ಸೈಟ್ ಮಾಹಿತಿಯ ಪ್ರಕಾರ ಬ್ಯಾಂಕ್ ತನ್ನ 7 ದಿನದಿಂದ 29 ದಿನದ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3ರಿಂದ 4.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 30ರಿಂದ 45 ದಿನಗಳ ಎಫ್‌ಡಿ ಮೇಲೆ ಶೇಕಡ 3.50ರಿಂದ ಶೇಕಡ 5.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
46ರಿಂದ 60 ದಿನಗಳ ಎಫ್‌ಡಿ ಮೇಲೆ ಶೇಕಡ 4ರಿಂದ ಶೇಕಡ 5.50 ಬಡ್ಡಿದರವನ್ನು ನೀಡಲಾಗುತ್ತದೆ. 61ರಿಂದ 90 ದಿನಗಳ ಎಫ್‌ಡಿ ಮೇಲೆ ಶೇಕಡ 4.50ರಿಂದ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 91 ದಿನದಿಂದ 184 ದಿನಗಳ ಎಫ್‌ಡಿ ಮೇಲೆ ಶೇಕಡ 4.75ರಿಂದ ಶೇಕಡ 6.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ನೂತನ ಬಡ್ಡಿದರ ಸಂಪೂರ್ಣ ಪಟ್ಟಿ ಇಲ್ಲಿದೆ ಮುಂದೆ ಓದಿ....
2 ಕೋಟಿಗಿಂತ ಕಡಿಮೆ ಎಫ್‌ಡಿ ಬಡ್ಡಿದರ
7-14 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
15-29 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
30-45 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
46-60 ದಿನ: ಶೇ. 4.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.50 ಬಡ್ಡಿದರ
61-90 ದಿನ: ಶೇ. 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.00 ಬಡ್ಡಿದರ
91-120 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
121-150 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
151-184 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
185-210 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
211-270 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
271-289 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 6.60 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.10 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 6.60 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.10 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
5 ವರ್ಷ (80C FD) : ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
2 ಕೋಟಿಯಿಂದ 5 ಕೋಟಿ ರೂಪಾಯಿ ಎಫ್‌ಡಿ ಬಡ್ಡಿದರ
7-14 ದಿನ: ಶೇ. 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.50 ಬಡ್ಡಿದರ
15-29 ದಿನ: ಶೇ. 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.50 ಬಡ್ಡಿದರ
30-45 ದಿನ: ಶೇ. 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
46-60 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.50 ಬಡ್ಡಿದರ
61-90 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
91-120 ದಿನ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
121-150 ದಿನ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
151-184 ದಿನ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
185-210 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
211-270 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
271-289 ದಿನ: ಶೇ. 6.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.65 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 6.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.65 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.10 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.10 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 7.15 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.15 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 7.15 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.15 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
ರೆಪೋ ದರ ಏರಿಸಿದ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರನೇ ಬಾರಿ ರೆಪೋ ದರವನ್ನು ಏರಿಸಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ. ಪ್ರಸ್ತುತ ರೆಪೋ ದರ ಶೇಕಡ 6.50 ಆಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications