ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ತನ್ನ 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗಿನ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಏರಿಕೆ ಮಾಡಿದೆ. ಈ ನೂತನ ಪರಿಷ್ಕರಣೆಯ ಬಳಿಕ ಗ್ರಾಹಕರು 7 ದಿನದಿಂದ 10 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 4.75ರಿಂದ ಶೇಕಡ 6.75ರವರೆಗೆ ಬಡ್ಡಿದರವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಒಂದು ವರ್ಷದಿಂದ 15 ತಿಂಗಳ ಅವಧಿಯ ಎಫ್‌ಡಿ ಮೇಲೆ ಈಗ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ.
ಐಸಿಐಸಿಐ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಪ್ರಕಾರ, ನೂತನ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಮಾರ್ಚ್ 22, 2023ರಿಂದ ಜಾರಿಗೆ ಬರಲಿದೆ. 7ರಿಂದ 29 ದಿನಗಳ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 4.75ರಷ್ಟು ಬಡ್ಡಿದರವನ್ನು ನೀಡುತ್ತದೆ. 30ರಿಂದ 45 ದಿನಗಳ ಫಿಕ್ಸಿಡ್ ಡೆಪಾಸಿಟ್ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 5.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಐಸಿಐಸಿಐ ಬ್ಯಾಂಕ್ 46ರಿಂದ 60 ದಿನಗಳ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 61ರಿಂದ 90 ದಿನಗಳ ಎಫ್‌ಡಿ ಮೇಲೆ ಶೇಕಡ 6.00ರಷ್ಟು ಬಡ್ಡಿದರ ನೀಡುತ್ತದೆ.

ನೂತನ ಬಡ್ಡಿದರದ ವಿವರ ಇಲ್ಲಿದೆ
91 ದಿನದಿಂದ 184 ದಿನಗಳ ಫಿಕ್ಸಿಡ್ ಡೆಪಾಸಿಟ್ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ. 185 ದಿನದಿಂದ 270 ದಿನಗಳವರೆಗಿನ ಫಿಕ್ಸಿಡ್ ಡೆಪಾಸಿಟ್ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 6.65ರಷಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 271 ದಿನದಿಂದ ಒಂದು ವರ್ಷದ ಅವಧಿಯ ಎಫ್‌ಡಿ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 6.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಒಂದು ವರ್ಷದಿಂದ 15 ತಿಂಗಳುಗಳ ಅವಧಿಯ ಎಫ್‌ಡಿ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 7.25ರಷ್ಟು ಬಡ್ಡಿದರ ನೀಡುತ್ತದೆ.
2 ವರ್ಷ 1 ದಿನದಿಂದ 2 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್ ಮೇಲೆ ಐಸಿಐಸಿಐ ಬ್ಯಾಂಕ್ ಶೇಕಡ 7.00ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 15 ತಿಂಗಳಿನಿಂದ 2 ವರ್ಷದ ಅವಧಿಯ ಎಫ್‌ಡಿ ಮೇಲೆ ಶೇಕಡ 7.15ರಷ್ಟು ಬಡ್ಡಿದರವನ್ನು ನೀಡುತ್ತದೆ. 3 ವರ್ಷದಿಂದ 10 ವರ್ಷದ ಅವಧಿಯ ಎಫ್‌ಡಿ ಮೇಲೆ ಈಗ ಐಸಿಐಸಿಐ ಬ್ಯಾಂಕ್ ಶೇಕಡ 6.75ರಷ್ಟು ಬಡ್ಡಿದರವನ್ನು ನೀಡುತ್ತದೆ.
ಹೂಡಿಕೆ ಮಾಡಿದ 7 ದಿನದಲ್ಲಿ ಹೂಡಿಕೆದಾರರು ಸಂಪೂರ್ಣ ಮೊತ್ತವನ್ನು ವಿತ್‌ಡ್ರಾ ಮಾಡಿದರೆ, ಯಾವುದೇ ಬಡ್ಡಿದರವನ್ನು ನಿಮಗೆ ಪಾವತಿ ಮಾಡಲಾಗುವುದಿಲ್ಲ. ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಟಿಡಿಎಸ್‌ಗೆ ಒಳಪಟ್ಟಿರುತ್ತದೆ. ನೂತನ ಐಸಿಐಸಿಐ ಬ್ಯಾಂಕ್ ಎಫ್‌ಡಿ ಠೇವಣಿಗಳು ಮತ್ತು ಅಸ್ತಿತ್ವದಲ್ಲಿರುವ ಎಫ್‌ಡಿ ಠೇವಣಿ ನವೀಕರಣ ಅಥವಾ ರಿನೀವಲ್‌ಗೆ ಬಡ್ಡಿದರವು ಲಭ್ಯವಾಗುತ್ತದೆ.
ಫೆಬ್ರವರಿ 24, 2023ರಂದು ಐಸಿಐಸಿಐ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. 15 ತಿಂಗಳಿನಿಂದ 2 ವರ್ಷದ ಅವಧಿಗೆ ಮೆಚ್ಯೂರ್ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡ 7.10ರಷ್ಟು ಬಡ್ಡಿದರ ನೀಡಿದರೆ, ಹಿರಿಯ ನಾಗರಿಕರಿಗೆ ಅದೇ ಅವಧಿಯ ಎಫ್‌ಡಿ ಮೇಲೆ ಶೇಕಡ 7.60ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಐಸಿಐಸಿಐ ಬ್ಯಾಂಕ್ ನಿಗದಿತ ರಿಟರ್ನ್ ಅನ್ನು ನೀಡುತ್ತದೆ. ಹಾಗೆಯೇ ಐಸಿಐಸಿಐ ಬ್ಯಾಂಕ್ ಎಫ್‌ಡಿ ಅತೀ ಸುರಕ್ಷಿತ ಎಫ್‌ಡಿಯಾಗಿದೆ. "AAA" ರೇಟೆಡ್ ಎಫ್‌ಡಿ ಇದಾಗಿದೆ.


Click it and Unblock the Notifications