ದೇಶದ ಎರಡನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಸ್ಥಳೀಯ, ಎನ್‌ಆರ್‌ಒ, ಎಸ್‌ಆರ್‌ಇ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಎರಡು ಕೋಟಿ ರೂಪಾಯಿಗಿಂತಿನ ಮೇಲಿನ ಆದರೆ 5 ಕೋಟಿ ರೂಪಾಯಿಗಿಂತ ಕೆಳಗಿನ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಐಸಿಐಸಿಐ ಬ್ಯಾಂಕ್ ಏರಿಕೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರ ಏರಿಕೆ ಮಾಡಿದೆ. ಈಗ ಮತ್ತೆ ಏಪ್ರಿಲ್ 7, 2023ರಿಂದ ಜಾರಿಗೆ ಬರುವಂತೆ ನೂತನ ಬಡ್ಡಿದರ ಜಾರಿ ಮಾಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಏಪ್ರಿಲ್ 6ರಂದು ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆರ್‌ಬಿಐ ರೆಪೋ ದರವನ್ನು ಸುಮಾರು 25 ಮೂಲಾಂಕ ಏರಿಕೆ ಮಾಡಬಹುದು ಅಂದುಕೊಂಡಿದ್ದ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ. ಅದಕ್ಕೂ ಮುನ್ನ ಕೇಂದ್ರ ಬ್ಯಾಂಕ್ 2022ರ ಮೇ ತಿಂಗಳಿನಿಂದ ಈವರೆಗೆ ಒಟ್ಟು 6 ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಏಪ್ರಿಲ್ ಎಂಪಿಸಿ ಸಭೆಯ ಬಳಿಕ ದರವನ್ನು ಸ್ಥಿರವಾಗಿಸಿದೆ. ಆದರೂ ಕೂಡಾ ಐಸಿಐಸಿಐ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

ಐಸಿಐಸಿಐ ಬ್ಯಾಂಕ್ ಈಗ ಬಡ್ಡಿದರ ಪರಿಷ್ಕರಣೆಯ ಬಳಿಕ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಗರಿಷ್ಠ ಶೇಕಡ 7.25 ಮತ್ತು ಕನಿಷ್ಠ 4.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಸಾಮಾನ್ಯವಾಗಿ ಯಾವುದೇ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡುವ ಬಡ್ಡಿದರಕ್ಕಿಂತ ಕೊಂಚ ಅಧಿಕ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಆದರೆ ಈ ಎಫ್‌ಡಿಯ ಸಮಾನವಾದ ಬಡ್ಡಿದರವಿದೆ. ಈ ಬಡ್ಡಿದರ ಏರಿಕೆಯಿಂದಾಗಿ 2 ಕೋಟಿ ರೂಪಾಯಿಗಿಂತ ಅಧಿಕ ಮತ್ತು 5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಹೂಡಿಕೆಯನ್ನು ಮಾಡುವವರಿಗೆ ಲಾಭವಾಗಲಿದೆ.
ಐಸಿಐಸಿಐ ಬ್ಯಾಂಕ್ ಪ್ರಕಾರ, "ಎನ್‌ಆರ್‌ಇ ಟರ್ಮ್ ಡೆಪಾಸಿಟ್‌ಗೆ ಕನಿಷ್ಠ ಅವಧಿ ಒಂದು ವರ್ಷವಾಗಿದೆ. ಡೆಪಾಸಿಟ್ ಮಾಡಿದ ಅವಧಿಯಿಂದ ಒಂದು ವರ್ಷದ ಒಳಗೆ ಅಂದರೆ ಮೆಚ್ಯೂರಿಟಿ ಅವಧಿಗೂ ಮುನ್ನ ಐಸಿಐಸಿಐ ಬ್ಯಾಂಕ್‌ನ ಎಫ್‌ಡಿಯನ್ನು ವಿತ್‌ಡ್ರಾ ಮಾಡಿದರೆ, ಬಡ್ಡಿದರವನ್ನು ಬ್ಯಾಂಕ್ ನೀಡುವುದಿಲ್ಲ. ಸ್ಥಳೀಯ ಎಫ್‌ಡಿ ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತವು 10 ಸಾವಿರ ರೂಪಾಯಿ ಆಗಿದೆ. ಎನ್‌ಆರ್‌ಒ/ಎನ್‌ಆರ್‌ಇ ಟರ್ಮ್ ಡೆಪಾಸಿಟ್‌ಗೆ ಕನಿಷ್ಠ ಮೊತ್ತ 25 ಸಾವಿರ ರೂಪಾಯಿ ಆಗಿದೆ."
2-5 ಕೋಟಿ ರೂಪಾಯಿ ಎಫ್‌ಡಿ ಮೇಲಿನ ಬಡ್ಡಿದರ ಎಷ್ಟಿದೆ?
7-14 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
15-29 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
30-45 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.50 ಬಡ್ಡಿದರ
46-60 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
61-90 ದಿನ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
91-120 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
121-150 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
151-184 ದಿನ: ಶೇ. 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
185-210 ದಿನ: ಶೇ.6.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.65 ಬಡ್ಡಿದರ
211-270 ದಿನ: ಶೇ. 6.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.65 ಬಡ್ಡಿದರ
271-289 ದಿನ: ಶೇ.6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 7.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 7.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 7.15 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.15 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 7.15 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.15 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.00 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ


Click it and Unblock the Notifications