ಐಸಿಐಸಿಐ ಬ್ಯಾಂಕ್ 2 ಕೋಟಿ ರೂಪಾಯಿಯ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. 15 ತಿಂಗಳಿಂದ ಎರಡು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ ಗರಿಷ್ಠ ಶೇಕಡ 7.10 ರಷ್ಟು ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 7.65 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಕುತೂಹಲಕಾರಿಯಾಗಿ, ಐಸಿಐಸಿಐ ಬ್ಯಾಂಕ್ ಹೆಚ್ಚುವರಿಯಾಗಿ ಹಿರಿಯ ನಾಗರಿಕರ ವಿಶೇಷ ಅವಧಿಯ ಡೆಪಾಸಿಟ್ ಯೋಜನೆಯಾದ ಗೋಲ್ಡನ್ ಇಯರ್ಸ್ ಎಫ್‌ಡಿ ಅವಧಿಯನ್ನು ವಿಸ್ತರಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ
ಮುಂದಿನ 7 ರಿಂದ 29 ದಿನಗಳಲ್ಲಿ ಮೆಚ್ಯೂರ್ ಆಗುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಈಗ ಶೇಕಡ 3.00 ರಷ್ಟು ಬಡ್ಡಿದರವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಮುಂದಿನ 30 ರಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 3.50 ಬಡ್ಡಿಯನ್ನು ನೀಡುತ್ತಿದೆ.
ಐಸಿಐಸಿಐ ಬ್ಯಾಂಕ್ 46 ಮತ್ತು 60 ದಿನಗಳ ನಡುವಿನಲ್ಲಿ ಮೆಚ್ಯೂರಿಟಿ ಆಗುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 4.25 ಬಡ್ಡಿದರ, 61 ಮತ್ತು 90 ದಿನಗಳ ನಡುವಿನ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 4.50 ಬಡ್ಡಿದರವನ್ನು ನೀಡುತ್ತದೆ.
ಇಂದಿನಿಂದ 91 ಮತ್ತು 184 ದಿನಗಳ ನಡುವೆ ಮೆಚ್ಯೂರ್ ಆಗುವ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರ ಶೇಕಡ 4.75 ಆಗಿದೆ. ಆದರೆ ಇಂದಿನಿಂದ 185 ಮತ್ತು 270 ದಿನಗಳ ನಡುವೆ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 5.75 ಬಡ್ಡಿಯನ್ನು ನೀಡಲಾಗುತ್ತದೆ.
ಐಸಿಐಸಿಐ ಬ್ಯಾಂಕ್ ಈಗ 1 ವರ್ಷದಿಂದ 15 ತಿಂಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿಗಳ ಮೇಲೆ ಶೇಕಡ 6.70 ಬಡ್ಡಿದರವನ್ನು ನೀಡಲಾಗುತ್ತದೆ. 271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
15 ತಿಂಗಳಿಂದ ಎರಡು ವರ್ಷಗಳ ಎಫ್‌ಡಿ ಮೇಲೆ ಶೇಕಡ 7 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಎರಡು ವರ್ಷ ಮತ್ತು ಒಂದು ದಿನದಿಂದ ಐದು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.10 ರಷ್ಟು ಬಡ್ಡಿದರ ನೀಡಲಾಗುತ್ತದೆ.
ಗ್ರಾಹಕರು ಈಗ 5 ವರ್ಷಗಳಲ್ಲಿ ಮೆಚ್ಯೂರ್ ಆಗು ಎಫ್‌ಡಿ ಮೇಲೆ ಶೇಕಡ 7 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. 5 ವರ್ಷ 1 ದಿನದಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 6.90 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.
ಹಿರಿಯ ನಾಗರಿಕರು 7 ದಿನಗಳಿಂದ 5 ವರ್ಷಗಳ ಅವಧಿಯ ಸ್ಟ್ಯಾಂಡರ್ಡ್ ದರಗಳಿಗಿಂತ 50 ಬಿಪಿಎಸ್ ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುತ್ತದೆ. ಐಸಿಐಸಿಐ ಬ್ಯಾಂಕ್‌ನ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯಡಿಯಲ್ಲಿ 5 ವರ್ಷ 1 ದಿನ, 10 ವರ್ಷಗಳವರೆಗೆ ಎಫ್‌ಡಿ ಅವಧಿಗೆ ಹಿರಿಯ ನಾಗರಿಕರು ಸಾಮಾನ್ಯ ಬಡ್ಡಿದರಕ್ಕಿಂತ 60 ಬಿಪಿಎಸ್ ಅಧಿಕ ಪಡೆಯುತ್ತಾರೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯನ್ನು 30ನೇ ಏಪ್ರಿಲ್ 2024 ರವರೆಗೆ ವಿಸ್ತರಿಸಲಾಗಿದೆ. ಯೋಜನೆಯ ಅವಧಿಯಲ್ಲಿ, ಹೊಸದಾಗಿ ತೆರೆಯಲಾದ ಖಾತೆಗಳು ಮತ್ತು ಅಪ್‌ಡೇಟ್ ಮಾಡಿದ ಡೆಪಾಸಿಟ್‌ಗಳು ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ದರಗಳಿಗೆ ಅರ್ಹವಾಗಿರುತ್ತವೆ.


Click it and Unblock the Notifications