Special FD: 3 ದಿನದಲ್ಲಿ ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ ಅಂತ್ಯ, ಮಿಸ್‌ ಮಾಡ್ಕೋಬೇಡಿ

ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯನ್ನು ಎರಡು ವರ್ಷಗಳ ಹಿಂದೆ ಜಾರಿ ಮಾಡಿದೆ. ಈ ಯೋಜನೆಯು ಇನ್ನು ಮೂರು ದಿನದಲ್ಲೇ ಕೊನೆಯಾಗಲಿದೆ. ಹೌದು, ಈಗಾಗಲೇ ಹಲವಾರು ಬ್ಯಾಂಕ್‌ಗಳ ವಿಶೇಷ ಎಫ್‌ಡಿ ಯೋಜನೆ ಗಡುವುದು ಮುಗಿದಿದೆ. ಆಫರ್ ಕೇವಲ ಕಳೆದ ಹಣಕಾಸು ವರ್ಷದ ಅಂತ್ಯವರೆಗೆ ಮಾತ್ರ ನೀಡಲಾಗಿತ್ತು. ಆದರೆ ಐಸಿಐಸಿಐ ಬ್ಯಾಂಕ್‌ನ ಎಫ್‌ಡಿ ಆಫರ್ ಈ ಹಣಕಾಸು ವರ್ಷದಲ್ಲಿಯೂ ಒಟ್ಟು 7 ದಿನಗಳವರೆಗೆ ಲಭ್ಯವಿದೆ.

ಐಸಿಐಸಿಐ ಬ್ಯಾಂಕ್ ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆ "ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ" ಅನ್ನು 2020ರ ಮೇ 20ರಂದು ಜಾರಿಗೆ ತಂದಿದೆ. ಇದು ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ಜಾರಿಗೆ ತರಲಾದ ಯೋಜನೆಯಾಗಿದೆ. ಯೋಜನೆಯ ಪ್ರಕಾರ, ಭಾರತದಲ್ಲಿ ನೆಲೆಸಿರುವ ಭಾರತೀಯ ಹಿರಿಯ ನಾಗರಿಕರು ಶೇಕಡ 0.10ರಷ್ಟು ಹೆಚ್ಚುವರಿ ಬಡ್ಡಿದರವನ್ನು ಎಫ್‌ಡಿಯಲ್ಲಿ ಪಡೆಯಬಹುದಾಗಿದೆ. ಆದರೆ ಅದು ಸೀಮಿತ ಅವಧಿಗೆ ಆಗಿದೆ. ಈಗಾಗಲೇ ಸಾಮಾನ್ಯ ಜನರಿಗಿಂತ ಶೇಕಡ 0.50ರಷ್ಟು ಹೆಚ್ಚುವರಿ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ.

3 ದಿನದಲ್ಲಿ ಐಸಿಐಸಿಐಯ ವಿಶೇಷ ಎಫ್‌ಡಿ ಅಂತ್ಯ, ಮಿಸ್‌ ಮಾಡ್ಬೇಡಿ

ಏಪ್ರಿಲ್ 7, 2023ರವರೆಗೆ ಈ ಯೋಜನೆಯು ಜಾರಿಯಲ್ಲಿರುತ್ತದೆ. ಐಸಿಐಸಿಐ ಬ್ಯಾಂಕ್‌ನಲ್ಲಿ ತೆರೆಯಲಾದ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸಿಂಗಲ್ ಎಫ್‌ಡಿ ಖಾತೆಗೆ ಈ ಆಫರ್ ಅನ್ವಯವಾಗಲಿದೆ. ಈ ವಿಶೇಷ ಎಫ್‌ಡಿ ಯೋಜನೆ ಅವಧಿಯಲ್ಲಿ ಯಾರು ಹೊಸದಾಗಿ ಎಫ್‌ಡಿ ಹೂಡಿಕೆಯನ್ನು ಮಾಡುತ್ತಾರೋ ಅಥವಾ ಯಾರು ತಮ್ಮ ಎಫ್‌ಡಿ ಯೋಜನೆಯನ್ನು ನವೀಕರಿಸುತ್ತಾರೋ ಅವರಿಗೆ ಈ ವಿಶೇಷ ಎಫ್‌ಡಿ ಅನ್ವಯವಾಗಲಿದೆ ಎಂದು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. 5 ವರ್ಷ 1 ದಿನದಿಂದ 10 ವರ್ಷದವರೆಗಿನ ಅವಧಿಯ ಎಫ್‌ಡಿಗೆ ವಿಶೇಷ ಬಡ್ಡಿದರ ಅನ್ವಯವಾಗುತ್ತದೆ.

2 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ ಮಾಹಿತಿ

7-14 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
15-29 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
30-45 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
46-60 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
61-90 ದಿನ: ಶೇ. 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.00 ಬಡ್ಡಿದರ
91-120 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
121-150 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
151-184 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
185-210 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
211-270 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
271-289 ದಿನ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.50 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 6.70 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.20 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 7.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. #7.50 ಬಡ್ಡಿದರ
5 ವರ್ಷ (80C FD) : ಶೇ. 7.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.50 ಬಡ್ಡಿದರ

ಈ ಮೇಲೆ ನೀವು ನೋಡಿದಂತೆ ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಮೇಲೆ ನೀಡುವ ಬಡ್ಡಿದರಕ್ಕಿಂತ ಹೆಚ್ಚುವರಿ 50 ಬಿಪಿಎಸ್ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಆದರೆ 5 ವರ್ಷ 1 ದಿನದಿಂದ 10 ವರ್ಷದ ಎಫ್‌ಡಿ ಅವಧಿಗೆ ಬ್ಯಾಂಕ್ ಈ ವಿಶೇಷ ಎಫ್‌ಡಿ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 10 ಬಿಪಿಎಸ್ ಬಡ್ಡಿದರ ನೀಡುತ್ತದೆ. ಇನ್ನು ಮಾರ್ಚ್ 14, 2023ರಿಂದ ಅನ್ವಯವಾಗುವಂತೆ ನೀವು ಎಫ್‌ಡಿ ಮೊತ್ತ ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡಿದರೆ ಶೇಕಡ 1ರಷ್ಟು ದಂಡ ಪಾವತಿಸಬೇಕಾಗುತ್ತದೆ. ಆದರೆ ಶೇಕಡ 90ರಷ್ಟು ಮೊತ್ತಕ್ಕೆ ಸಾಲ ಪಡೆಯುವ ಅವಕಾಶ ಈ ಎಫ್‌ಡಿಯಲ್ಲಿದೆ. ಹಾಗೆಯೇ ಈ ಯೋಜನೆಯಡಿಯಲ್ಲಿ ಕ್ರೆಡಿಟ್ ಕಾರ್ಡ್ ಕೂಡಾ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+