ಸಾಮಾನ್ಯವಾಗಿ ಹೂಡಿಕೆ ಎಂದಾಗ ಹೆಚ್ಚಿನ ಜನರ ಆಯ್ಕೆ ಫಿಕ್ಸಿಡ್ ಡೆಪಾಸಿಟ್ ಆಗಿರುತ್ತದೆ. ಒಂದೇ ಬಾರಿಗೆ ಅಷ್ಟು ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದಾದರೆ ಆರ್‌ಡಿಯನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಫಿಕ್ಸಿಡ್ ಡೆಪಾಸಿಟ್ ಸಾಮಾನ್ಯ ನಾಗರಿಕರಿಗೆ ನೀಡುವುದಕ್ಕಿಂತ ಕೊಂಚ ಅಧಿಕ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡುತ್ತದೆ. ಈ ನಡುವೆ ಐಡಿಬಿಐ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಯನ್ನು ಆರಂಭ ಮಾಡಿದೆ.
375 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ವಿಶೇಷ ಎಫ್‌ಡಿ ಯೋಜನೆಗೆ ಹಿರಿಯ ನಾಗರಿಕರು ಮಾತ್ರವಲ್ಲ ಸಾಮಾನ್ಯ ನಾಗರಿಕರು ಕೂಡಾ ಅರ್ಹರಾಗಿರುತ್ತಾರೆ. ಅದರೆ ಹಿರಿಯ ನಾಗರಿಕರಿಗೆ ಶೇಕಡ 0.5ರಷ್ಟು ಕಡಿಮೆ ಬಡ್ಡಿದರ ಸಾಮಾನ್ಯ ನಾಗರಿಕರಿಗೆ ಲಭ್ಯವಾಗುತ್ತದೆ. ಆದರೆ ಸಾಮಾನ್ಯ ನಾಗರಿಕರಿಗೂ ಇತರೆ ಎಫ್‌ಡಿ ಬಡ್ಡಿದರಕ್ಕಿಂತ ಕೊಂಚ ಅಧಿಕ ಬಡ್ಡಿದರ ಲಭ್ಯವಾಗುತ್ತದೆ. ಸಾಮಾನ್ಯ ನಾಗರಿಕರಿಗೆ ಶೇಕಡ 7.10, ಹಿರಿಯ ನಾಗರಿಕರಿಗೆ ಶೇಕಡ 7.60 ಬಡ್ಡಿದರ ನೀಡಲಾಗುತ್ತದೆ. ಆಗಸ್ಟ್ 15, 2023ರವರೆಗೆ ಮಾತ್ರ ಅವಕಾಶವಿದೆ ಎಂಬುವುದನ್ನು ನೀವು ಗಮನಿಸಿಬೇಕು.

"ಐಡಿಬಿಐ ಬ್ಯಾಂಕ್ 375 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯನ್ನು ಆರಂಭಿಸಿದೆ, ಗರಿಷ್ಠವಾಗಿ ಶೇಕಡ 7.60ರಷ್ಟು ಬಡ್ಡಿದರವನ್ನು ಇದರಲ್ಲಿ ನೀಡಲಾಗುತ್ತದೆ. ಆಗಸ್ಟ್ 15, 2023ರವರೆಗೆ ಈ ವಿಶೇಷ ಎಫ್‌ಡಿ ಜಾರಿಯಲ್ಲಿರಲಿದೆ. ಇದು ಮಾತ್ರವಲ್ಲದೆ ಪ್ರಸ್ತುತ ಜಾಲ್ತಿಯಲ್ಲಿರುವ 444 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಕಾಲೇಬಲ್ ಆಯ್ಕೆಯಡಿ ಶೇಕಡ 7.65, ನಾನ್ ಕಾಲೇಬಲ್ ಆಯ್ಕೆಯಡಿ ಶೇಕಡ 7.75ರಷ್ಟು ಬಡ್ಡಿದರ ನೀಡುತ್ತದೆ," ಎಂದು ಐಡಿಬಿಐ ಬ್ಯಾಂಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅಮೃತ ಮಹೋತ್ಸವ ಎಫ್‌ಡಿ ಯೋಜನೆ
ಐಡಿಬಿಐ ಬ್ಯಾಂಕ್ ಈಗಾಗಲೇ ಕೆಲವು ವಿಭಿನ್ನ, ವಿಶಿಷ್ಟವಾದ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯನ್ನು ಆರಂಭ ಮಾಡಿದೆ. 375 ದಿನಗಳು ಮತ್ತು 444 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳನ್ನು ಆರಂಭ ಮಾಡಲಾಗಿದೆ. 375 ದಿನಗಳ ಎಫ್‌ಡಿಯಲ್ಲಿ ಹಿರಿಯ ನಾಗರಿಕರು ಶೇಕಡ 7.6ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಈ ನಡುವೆ ಸಾಮಾನ್ಯ ನಾಗರಿಕರು ಶೇಕಡ 7ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಜುಲೈ 14ರಿಂದ ಆಗಸ್ಟ್ 15ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಏನಿದು ಕಾಲೇಬಲ್ ಮತ್ತು ನಾನ್- ಕಾಲೇಬಲ್ ಆಯ್ಕೆ
ಐಡಿಬಿಐ ಬ್ಯಾಂಕ್‌ನ 444 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯಲ್ಲಿ ಎರಡು ಆಯ್ಕೆಗಳು ನಮಗೆ ಲಭ್ಯವಿರುತ್ತದೆ. ಅದುವೆ ಕಾಲೇಬಲ್ ಮತ್ತು ನಾನ್- ಕಾಲೇಬಲ್ ಆಯ್ಕೆಗಳಾಗಿದೆ. ಆದರೆ ಏನಿದು?. ಮೆಚ್ಯೂರಿಟಿಗೂ ಮುನ್ನ ನಾವು ಮಾಡಿದ ಎಫ್‌ಡಿ ಹೂಡಿಕೆಯನ್ನು ವಿತ್‌ಡ್ರಾ ಮಾಡಿಕೊಳ್ಳುವ ಆಯ್ಕೆ ಇರುವ ಎಫ್‌ಡಿಯು ಕಾಲೇಬಲ್ ಆಗಿರುತ್ತದೆ, ಇನ್ನೊಂದೆಡೆ ಮೆಚ್ಯೂರಿಟಿವರೆಗೂ ವಿತ್‌ಡ್ರಾ ಮಾಡಲು ಯಾವುದೇ ಆಯ್ಕೆಯಿಲ್ಲದ ಎಫ್‌ಡಿ ನಾನ್ ಕಾಲೇಬಲ್ ಆಗಿರುತ್ತದೆ.
ನಾನ್ ಕಾಲೇಬಲ್ ಆಯ್ಕೆಯು ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರ ನೀಡಿದರೆ ಕಾಲೇಬಲ್ ಆಯ್ಕೆಯಲ್ಲಿ ಶೇಕಡ 7.65ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಇನ್ನು ಸಾಮಾನ್ಯ ನಾಗರಿಕರು ನಾನ್ ಕಾಲೇಬಲ್ ಆಯ್ಕೆಗೆ ಶೇಕಡ 7.15ರಷ್ಟು, ಕಾಲೇಬಲ್ ಆಯ್ಕೆಗೆ ಶೇಕಡ 7.25ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ.
ನಾನ್ ಕಾಲೇಬಲ್ ಎಫ್‌ಡಿಯ ಷರತ್ತು ಮತ್ತು ನಿಯಮಗಳು
ನಾನ್- ಕಾಲೇಬಲ್ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಅನ್ನು ನಾವು ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡುವ ಅಥವಾ ಮುಚ್ಚುವ ಆಯ್ಕೆಯನ್ನು ಹೊಂದಿರುವುದಿಲ್ಲ. ಆದರೆ ಕೆಲವು ವಿನಾಯಿತಿಗಳು ಈ ನಾನ್- ಕಾಲೇಬಲ್ ಆಯ್ಕೆಯಲ್ಲಿಯೂ ಇದೆ. ನ್ಯಾಯಾಂಗ, ಶಾಸನಬದ್ಧ, ಅಥವಾ ನಿಯಂತ್ರಕ ಅಧಿಕಾರಿಗಳು ನೀಡಿದ ಆದೇಶದಂತೆ ಮೃತಪಟ್ಟ ಎಫ್‌ಡಿದಾರರ ಮೊತ್ತವನ್ನು ಕ್ಲೈಮ್ ಮಾಡುವ ಅವಕಾಶ ಇರುತ್ತದೆ.


Click it and Unblock the Notifications