IDBI Bank: ಎಫ್‌ಡಿ ಬಡ್ಡಿದರ ಏರಿಸಿದ ಐಡಿಬಿಐ ಬ್ಯಾಂಕ್, ಇಲ್ಲಿದೆ ದರ

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಐಡಿಬಿಐ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಈ ಬ್ಯಾಂಕ್ ಹೆಚ್ಚಳ ಮಾಡಿದೆ. ಏಪ್ರಿಲ್ 12, 2023ರಿಂದ ಈ ಬಡ್ಡಿದರವು ಅನ್ವಯವಾಗಲಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಈ ಬಡ್ಡಿದರ ಬದಲಾವಣೆಯ ಬಳಿಕ 7 ದಿನದಿಂದ 10 ವರ್ಷದಲ್ಲಿ ಮೆಚ್ಯೂರಿಟಿ ಹೊಂದುವ ಡೆಪಾಸಿಟ್ ಮೇಲೆ ಬ್ಯಾಂಕ್ ಶೇಕಡ 3ರಿಂದ ಶೇಕಡ 6.75ರವರೆಗೆ ಬಡ್ಡಿದರವನ್ನು ನೀಡಲಾಗುತ್ತದೆ. ಇದು ಸಾಮಾನ್ಯ ನಾಗರಿಕರಿಗೆ ನೀಡಲಾಗುವ ಬಡ್ಡಿದರವಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಶೇಕಡ 3.50ಯಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

 ಎಫ್‌ಡಿ ಬಡ್ಡಿದರ ಏರಿಸಿದ ಐಡಿಬಿಐ ಬ್ಯಾಂಕ್, ಇಲ್ಲಿದೆ ದರ

ಇನ್ನು ಬ್ಯಾಂಕ್ ಸುವಿದ ತೆರಿಗೆ ಉಳಿತಾಯ ಫಿಕ್ಸಿಡ್ ಡೆಪಾಸಿಟ್ (5 ವರ್ಷ) ಮೇಲಿನ ಬಡ್ಡಿದರವನ್ನು ಕೂಡಾ ಪರಿಷ್ಕರಣೆ ಮಾಡಲಾಗಿದೆ. ಇನ್ನು ಸಿಸ್ಟಮ್ಯಾಟಿಕ್ ಸೇವಿಂಗ್ಸ್ ಪ್ಲ್ಯಾನ್ (ಎಸ್‌ಎಸ್‌ಪಿ/ ಎಸ್‌ಎಸ್‌ಪಿ ಪ್ಲಸ್) ಬಡ್ಡಿದರವನ್ನು ಕೂಡಾ ಬ್ಯಾಂಕ್ ಪರಿಷ್ಕರಣೆ ಮಾಡಿದೆ. ಬ್ಯಾಂಕ್‌ನ ಈ ಪರಿಷ್ಕೃತ ಬಡ್ಡಿದರವು ಏಪ್ರಿಲ್ 12ರಿಂದ ಜಾರಿಗೆ ಬರುತ್ತದೆ.

ಈ ಡೆಪಾಸಿಟ್ ಯೋಜನೆ ಅಡಿಯಲ್ಲಿ ಬ್ಯಾಂಕ್ 1 ವರ್ಷದಿಂದ 10 ವರ್ಷದ ಅವಧಿಯ ಡೆಪಾಸಿಟ್‌ಗೆ ಶೇಕಡ 6.25ರಿಂದ ಶೇಕಡ 6.75ರಷ್ಟು ಬಡ್ಡಿದರ ನೀಡುತ್ತದೆ. ಇದು ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರವಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಗೆ ಶೇಕಡ 6.75ರಿಂದ ಶೇಕಡ 7.25ರಷ್ಟು ಬಡ್ಡಿದರ ನೀಡಲಾಗುತ್ತದೆ.

444 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಮೇಲೆ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸಾಮಾನ್ಯ ನಾಗರಿಕರಿಗೆ ಗರಿಷ್ಠ ಶೇಕಡ 7.15, ಹಿರಿಯ ನಾಗರಿಕರಿಗೆ ಶೇಕಡ 7.65ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಐಡಿಬಿಐ ಬ್ಯಾಂಕ್ ಇತ್ತೀಚೆಗೆ ಈ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯನ್ನು ಜಾರಿ ಮಾಡಿದೆ.

2-5 ಕೋಟಿ ರೂಪಾಯಿಗಿಂತ ಕಡಿಮೆ ಎಫ್‌ಡಿ ಮೇಲಿನ ಬಡ್ಡಿದರ ಎಷ್ಟಿದೆ?

7-14 ದಿನ: ಶೇ. 3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.5 ಬಡ್ಡಿದರ
15-30 ದಿನ: ಶೇ. 3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.5 ಬಡ್ಡಿದರ
31-45 ದಿನ: ಶೇ. 3.35 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.85 ಬಡ್ಡಿದರ
46-60 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
61-90 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
91-6 ತಿಂಗಳು: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
6 ತಿಂಗಳು 1 ದಿನ- 270 ದಿನ: ಶೇ. 5.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6 ಬಡ್ಡಿದರ
271 ದಿನ: ಶೇ. 5.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6 ಬಡ್ಡಿದರ
1 ವರ್ಷ: ಶೇ.6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
1 ವರ್ಷದಿಂದ 2 ವರ್ಷ (444 ದಿನ): ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
2 ವರ್ಷ: ಶೇ.6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
3 ವರ್ಷ: ಶೇ. 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
5 ವರ್ಷ: ಶೇ. 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
5 ವರ್ಷದಿಂದ 7 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
7 ವರ್ಷದಿಂದ 10 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
10 ವರ್ಷದಿಂದ 20 ವರ್ಷ: ಶೇ. 4.8 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.3 ಬಡ್ಡಿದರ

ಸುವಿದ ತೆರಿಗೆ ಉಳಿತಾಯ ಯೋಜನೆ: ಸಾಮಾನ್ಯ ರಿಟೇಲ್ ದರ ಶೇಕಡ 6.5, ಹಿರಿಯ ನಾಗರಿಕರಿಗೆ ಶೇಕಡ 7ರಷ್ಟು ಬಡ್ಡಿದರ.

ಸಿಸ್ಟಮ್ಯಾಟಿಕ್ ಸೇವಿಂಗ್ಸ್ ಪ್ಲ್ಯಾನ್

1 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
1 ವರ್ಷದಿಂದ 2 ವರ್ಷ: ಶೇ. 6.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿದರ
2 ವರ್ಷ: ಶೇ. 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
3 ವರ್ಷ: ಶೇ. 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
5 ವರ್ಷ: ಶೇ. 6.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿದರ
5 ವರ್ಷದಿಂದ 7 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ
7 ವರ್ಷದಿಂದ 10 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.75 ಬಡ್ಡಿದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+