For Quick Alerts
ALLOW NOTIFICATIONS  
For Daily Alerts

ಐಟಿಆರ್ ಫೈಲ್ ಮಾಡಿಲ್ಲವೆ? ಹೆಚ್ಚಿನ ಟಿಡಿಎಸ್ ಅಥವಾ ಟಿಸಿಎಸ್ ಕಡಿತಕ್ಕೆ ಸಿದ್ಧರಾಗಿ

|

ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಬಜೆಟ್ 2021ರಲ್ಲಿ ಹೆಚ್ಚಿನ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಹಾಕಲು ಹಣಕಾಸು ಸಚಿವರು ಪ್ರಸ್ತಾವ ಮಾಡಿದ್ದಾರೆ. ಟಿಡಿಎಸ್ ಮತ್ತು ಟಿಸಿಎಸ್ ದರ ಹೆಚ್ಚಳಕ್ಕಾಗಿ ಕ್ರಮವಾಗಿ ಸೆಕ್ಷನ್ 206AB ಹಾಗೂ 206CCA ಸೇರ್ಪಡೆ ಮಾಡಲಾಗಿದೆ.

ಆದ್ದರಿಂದ ಟಿಡಿಎಸ್ ಅಥವಾ ಟಿಸಿಎಸ್ ದುಪ್ಪಟ್ಟು ಕಡಿತ ಆಗಲಿದ್ದು, ಕಾಯ್ದೆ ಪ್ರಕಾರ ಅನ್ವಯ ಆಗುವ ದರ ಅಥವಾ 5% ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟನ್ನು ಕಡಿತ ಮಾಡಲಾಗುತ್ತದೆ. ಇದಕ್ಕೆ ಎರಡು ಷರತ್ತು ಸೇರಿಸಲಾಗಿದೆ. ಆ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಐಟಿಆರ್ ಫೈಲ್ ಮಾಡಿರಬಾರದು ಮತ್ತು ಆ ವ್ಯಕ್ತಿಯಿಂದ ಕಳೆದ ಎರಡು ವರ್ಷದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಎಂದು 50 ಸಾವಿರ ರುಪಾಯಿಗಿಂತ ಹೆಚ್ಚು ಮೊತ್ತವನ್ನು ಪ್ರತಿ ವರ್ಷ ಕಡಿತ ಮಾಡಿರಬೇಕು.

ಬಜೆಟ್ 2021: ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ರಿಲೀಫ್ಬಜೆಟ್ 2021: ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ರಿಲೀಫ್

ಸದ್ಯಕ್ಕೆ ಇರುವ ನಿಯಮದ ಪ್ರಕಾರ, PAN ಕಾರ್ಡ್ ಒದಗಿಸದಿದ್ದಲ್ಲಿ ಹೆಚ್ಚಿನ ದರದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಹೆಚ್ಚಿನ ದರದಲ್ಲಿ ಹಾಕಲಾಗುತ್ತದೆ. ಈಗ ಹೊಸ ನಿಯಮದ ಪ್ರಕಾರ, ಯಾರು PAN ಕಾರ್ಡ್ ಇದ್ದರೂ ಐಟಿಆರ್ ಫೈಲ್ ಮಾಡುತ್ತಿಲ್ಲವೋ ಅಂಥವರನ್ನು ಗುರಿ ಮಾಡಿಕೊಂಡಿದೆ.

ಐಟಿಆರ್ ಫೈಲ್ ಮಾಡಿಲ್ಲವೆ? ಹೆಚ್ಚಿನ TDS- TCS ಕಡಿತಕ್ಕೆ ಸಿದ್ಧರಾಗಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206AA ಮತ್ತು 206CC ಪ್ರಕಾರ, ಯಾವ ವ್ಯಕ್ತಿಯು PAN ಒದಗಿಸುವುದಿಲ್ಲವೋ ಅಂಥವರಿಗೆ ಹೆಚ್ಚಿನ ದರದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಕಡಿತ ಮಾಡಬಹುದು. ಬ್ಯಾಂಕ್ ಗೆ PAN ಮಾಹಿತಿ ನೀಡದಿದ್ದಲ್ಲಿ ಆಗ ಬಡ್ಡಿಯ ಗಳಿಕೆ ಮೇಲೆ ಹೆಚ್ಚಿನ ಟಿಡಿಎಸ್ (10% ಬದಲಿಗೆ 20%) ವಿಧಿಸಲಾಗುತ್ತದೆ.

ಹೆಚ್ಚು ಜನಕ್ಕೆ PAN ಕಾರ್ಡ್ ವಿತರಿಸಬೇಕು. ಅದರ ಬೆನ್ನಿಗೇ ಹೆಚ್ಚು ಜನ ಐಟಿಆರ್ ಫೈಲಿಂಗ್ ಮಾಡಬೇಕು ಎಂಬುದು ಉದ್ದೇಶವಾಗಿತ್ತು. ಈಗಿನ ನಿಯಮವು ಪೂರ್ತಿಯಾಗಿ ತೆರಿಗೆ ಕಡಿತ ಆಗುವ ಅಗತ್ಯ ಇರುವ ವಹಿವಾಟುಗಳಿಗೆ ಅನ್ವಯ ಆಗಲ್ಲ. ಉದಾಹರಣೆಗೆ ವೇತನ ಆದಾಯ, ಅನಿವಾಸಿಗಳಿಗೆ ಪಾವತಿ ಮುಂತಾದವು.

English summary

If You Are Not Filed ITR, Ready To Pay More TDS Or TCS

Budget 2021: According to new proposal, who don't file ITR, have to pay more TDS or TCS.
Story first published: Wednesday, February 3, 2021, 10:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X