ಪ್ರಯಾಣವು ಈಗ ಜನರ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಹೆಚ್ಚಿನ ಜನರು ಈಗ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಪ್ರವಾಸದ ಪ್ಲ್ಯಾನ್ ಮಾಡುತ್ತಾರೆ, ಪ್ರವಾಸ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿಗಳ (influencer) ಸಂಸ್ಕೃತಿ ಹೆಚ್ಚಳವಾಗುತ್ತಾ ಸಾಗುತ್ತಿದೆ.
ಹಾಗೆಯೇ ಅನೇಕ ಸ್ಥಳಗಳ ಬಗ್ಗೆ ಪ್ರಚಾರವನ್ನು ಈ ಪ್ರಭಾವಿಗಳು ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ, ವಿಯೆಟ್ನಾಂ, ಕಾಂಬೋಡಿಯಾ, ಟರ್ಕಿ ಮತ್ತು ಇತರ ದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಆದರೆ ಪ್ರವಾಸವನ್ನು ಪ್ಲ್ಯಾನ್ ಮಾಡುವಾಗ ಅತ್ಯಂತ ಕಷ್ಟಕರವಾದ ವಿಷಯವೆಂದರೆ ವೆಚ್ಚಗಳನ್ನು ನಿರ್ವಹಣೆ ಮಾಡುವುದು ಆಗಿದೆ.

ಅನೇಕ ಜನರು ತಮ್ಮ ಹಣಕಾಸಿನ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈಗ ವಿವಿಧ ಬ್ಯಾಂಕ್‌ಗಳು ಜನರಿಗೆ ಪ್ರಯಾಣಿಸಲು ಸಾಲ ನೀಡುತ್ತಿರುವುದು ಕಂಡುಬಂದಿದೆ. ಈ ರೀತಿಯ ಸಾಲವನ್ನು ಪ್ರಯಾಣ ಸಾಲ ಎಂದು ಕರೆಯಲಾಗುತ್ತದೆ. ಪ್ರಯಾಣ ಸಾಲಗಳು ಪ್ರಯಾಣಿಕರಿಗೆ ಬ್ಯಾಂಕ್‌ಗಳು ನೀಡುವ ವೈಯಕ್ತಿಕ ಸಾಲವೇ ಆಗಿದೆ. ಈ ಪ್ರಯಾಣ ಸಾಲದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ದೇಶೀಯ ಅಥವಾ ಅಂತರಾಷ್ಟ್ರೀಯ ಪ್ರಯಾಣಕ್ಕೆ ಸಾಲ
ಪ್ರಸ್ತುತ ಬ್ಯಾಂಕುಗಳಲ್ಲಿ ಹೆಚ್ಚಿನವು ದೇಶೀಯ ಅಥವಾ ಅಂತರಾಷ್ಟ್ರೀಯ ಪ್ರಯಾಣಕ್ಕಾಗಿ ಪ್ರಯಾಣ ಸಾಲವನ್ನು ನೀಡಲಾಗುತ್ತದೆ. ಇದು ಪ್ರಯಾಣ, ರಜೆಯ ದಿನಗಳನ್ನು ಕಳೆಯಲೆಂದು ಗ್ರಾಹಕರಿಗೆ ನೀಡುವ ಅಸುರಕ್ಷಿತ ಸಾಲವಾಗಿದೆ. ವಸತಿ, ವಿಮಾನ ದರಗಳು, ಪ್ರಯಾಣ, ಪ್ರಯಾಣದ ಪರಿಕರಗಳಿಗೆ ಸಂಬಂಧಿಸಿದ ವೆಚ್ಚವನ್ನು ಸಾಲದ ಮೊತ್ತದಲ್ಲಿ ಪಡೆಯಬಹುದಾಗಿದೆ.
ಸಾಲಗಳು ಅಸುರಕ್ಷಿತವಾಗಿರುವುದರಿಂದ, ಸಾಲಗಾರನು ಬ್ಯಾಂಕಿಗೆ ಏನನ್ನೂ ಒತ್ತೆ ಇಡಬೇಕಾಗಿಲ್ಲ. ಪ್ರಸ್ತುತ ಅನೇಕ ಜನರು ಪ್ರಪಂಚದಾದ್ಯಂತ ಪ್ರಯಾಣಕ್ಕಾಗಿ ಈ ಸಾಲಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಯಾಣ ಸಾಲವನ್ನು ಪಡೆಯುವ ಪ್ರಕ್ರಿಯೆಯು ವೈಯಕ್ತಿಕ ಸಾಲದಂತೆಯೇ ಇರುತ್ತದೆ.
ಅರ್ಜಿ ಸಲ್ಲಿಕೆ
ವ್ಯಕ್ತಿಯು ಅರ್ಜಿಯನ್ನು ಸಲ್ಲಿಸಬೇಕು, ಅದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದು. ಪ್ರಯಾಣ ಸಾಲಕ್ಕಾಗಿ, ಬ್ಯಾಂಕ್‌ಗಳಿಗೆ ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಪ್ರಯಾಣ ವಿಮೆ, ಬುಕ್ ಮಾಡಿದ ಟಿಕೆಟ್‌ಗಳು, ಪ್ರಯಾಣ ಯೋಜನೆಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ವಿವಿಧ ಬ್ಯಾಂಕ್‌ಗಳು ವಿಭಿನ್ನ ಬಡ್ಡಿದರಗಳನ್ನು ನೀಡುತ್ತವೆ.
ಬಡ್ಡಿದರ ಎಷ್ಟಿದೆ ನೋಡಿ
ಬ್ಯಾಂಕ್ ಬಜಾರ್ ಡಾಟ್ ಕಾಮ್ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತುತ ಪ್ರಯಾಣ ಸಾಲಗಳಿಗೆ ಶೇಕಡ 10.50 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ. ಜನರು ಬ್ಯಾಂಕ್‌ನಿಂದ 40 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು. 60 ತಿಂಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಟಾಟಾ ಕ್ಯಾಪಿಟಲ್‌ನ ಪ್ರಯಾಣ ಸಾಲದ ಮೇಲಿನ ಬಡ್ಡಿ ದರವು ಪ್ರಸ್ತುತ ವರ್ಷಕ್ಕೆ ಶೇಕಡ 10.99 ರಷ್ಟಿದೆ. ಟಾಟಾ ಕ್ಯಾಪಿಟಲ್‌ನಿಂದ 25 ಲಕ್ಷ ರೂಪಾಯಿವರೆಗಿನ ಪ್ರಯಾಣ ಸಾಲವನ್ನು ಜನರು ಪಡೆಯಬಹುದು. 72 ತಿಂಗಳುಗಳಲ್ಲಿ ಈ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಜನರು ಆಕ್ಸಿಸ್ ಬ್ಯಾಂಕ್‌ನಿಂದ 15 ಲಕ್ಷ ರೂಪಾಯಿವರೆಗೆ ಪ್ರಯಾಣ ಸಾಲವನ್ನು ಸಹ ತೆಗೆದುಕೊಳ್ಳಬಹುದು. ಆಕ್ಸಿಸ್ ಬ್ಯಾಂಕ್‌ನಲ್ಲಿ ಬಡ್ಡಿ ದರವು ವರ್ಷಕ್ಕೆ ಶೇಕಡ 10.25 ಆಗಿದೆ. ಸಾಲವನ್ನು ಪಾವತಿಸಲು 60 ತಿಂಗಳುಗಳ ಕಾಲವಕಾಶ ನೀಡಲಾಗುತ್ತದೆ. ಬಡ್ಡಿದರಗಳನ್ನು ಹಲವಾರು ಇತರ ಅಂಶಗಳ ಮೇಲೆ ಅವಲಂಭಿಸಿರುತ್ತದೆ.


Click it and Unblock the Notifications