ಮನೆ ಖರೀದಿ ಎನ್ನುವುದು ಸಾಮಾನ್ಯ ಜನರ ಜೀವನದ ಮಹತ್ವದ ನಿರ್ಧಾರವಾಗಿರುವುದು ಮಾತ್ರವಲ್ಲದೇ ತಮ್ಮ ಉಳಿತಾಯದ ಹೂಡಿಕೆಯೂ ಆಗಿರುತ್ತದೆ. ಇಂಡಿಪೆಂಡೆಂಟ್ ಮನೆ ಅಥವಾ ಸೊಸೈಟಿಯಲ್ಲಿ ಫ್ಲಾಟ್ ಖರೀದಿಯ ಮೂಲಕ ತಮ್ಮ ಕನಸು ನನಸು ಮಾಡುತ್ತಾರೆ.
ಆದರೂ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈ ಖರೀದಿ ಪ್ರಕ್ರಿಯೆ ಸಂಕೀರ್ಣ ಅನ್ನಿಸಬಹುದು. ಹೀಗಾಗಿ ವಂಚನೆಗೊಳಗಾಗದೇ , ಸುರಕ್ಷಿತವಾಗಿ ಮನೆ-ಖರೀದಿಯ ಅನುಭವ ನಿಮ್ಮದಾಗಿಸಿಕೊಳ್ಳಬೇಕಾದರೆ ಕೆಲವು ಮಹತ್ವದ ಸಲಹೆಗಳು ಇಲ್ಲಿದೆ.

1. ಭಾವನಾತ್ಮಕ ನಿರ್ಧಾರ:
ಮನೆ ಖರೀದಿ ಪ್ರಮುಖವಾಗಿ ಭಾವನಾತ್ಮಕ ನಿರ್ಧಾರವಾಗಿರುತ್ತದೆ. ಇದು ಜನಸಾಮಾನ್ಯರಿಗೆ ಸ್ವಂತ ಮನೆ ಎಂಬುವುದು ಭದ್ರತೆ ಮತ್ತು ಏನೋ ಸಾಧನೆ ಮಾಡಿದ ತೃಪ್ತಿಯನ್ನು ನೀಡುತ್ತದೆ. ಆದರೂ ಭಾವನಾತ್ಮಕ ಅಂಶಗಳಿಂದ ನಾವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಅತ್ಯಗತ್ಯವಾಗುತ್ತದೆ. ಹೀಗಾಗಿ ಭಾವನೆಗಳಿಗಿಂತ ಪ್ರಾಕ್ಟಿಕಲ್ ಮತ್ತು ಆರ್ಥಿಕ ವಿವೇಚನೆಯ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಬಹುಮುಖ್ಯವಾಗುತ್ತದೆ.
2. ಆರ್ಥಿಕ ಪರಿಸ್ಥಿತಿ:
ಮನೆ ಖರೀದಿಯು ಆರ್ಥಿಕ ವಿಚಾರವಾಗಿ ಮಹತ್ವದ ನಿರ್ಧಾರವಾಗಿದ್ದು, ಇದು ಬದ್ಧತೆಗೂ ಸಂಬಂಧಪಟ್ಟಿರುತ್ತದೆ. ಹೀಗಾಗಿ ಒತ್ತಡಕ್ಕೆ ಒಳಗಾಗಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಬಹಳಷ್ಟು ಯೋಚಿಸಿ ನಿಮ್ಮ ಪ್ರಸ್ತುತ ಮತ್ತು ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ ಮುಂದಕ್ಕೆ ಹೆಜ್ಜೆ ಇರಿಸಿ. ಮನೆ ಖರೀದಿ ಮಾಡುವಾಗಿ ಖರೀದಿ ಮಾತ್ರವಲ್ಲದೇ ಇದಕ್ಕೆ ಸಂಬಂಧಿತ ವೆಚ್ಚಗಳು ಮತ್ತು ಅಡಮಾನವನ್ನು ನಿರ್ವಹಿಸುವ ಕುರಿತು ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವನ್ನು ಹೊಂದಿದ್ದರೆ ಮಾತ್ರ ಮುಂದುವರಿಯಿರಿ.
3. ಸರಿಯಾದ ಸ್ಥಳ:
ಕನಸಿನ ಮತ್ತು ಭವಿಷ್ಯದ ಮನೆಯ ಸ್ಥಳವು ಉತ್ತಮದ ಪ್ರದೇಶದಲ್ಲಿ ಇರಬೇಕು. ಒಂದು ವೇಳೇ ಈ ಅಂಶವನ್ನು ನೀವು ನಿರ್ಲಕ್ಷಿಸಿದರೆ ಮುಂದೆ ನಿಮ್ಮ ಆಯ್ಕೆ ಬಗ್ಗೆ ನೀವೇ ವಿಷಾದ ವ್ಯಕ್ತಪಡಿಸಬೇಕಾಗಬಹುದು. ಹೀಗಾಗಿ ಜನವಸತಿ ಇರುವ, ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜೊತೆಗೆ ಶಾಲೆ ಮತ್ತು ಆಸ್ಪತ್ರೆಗಳಂತಹ ಅಗತ್ಯ ಸೌಕರ್ಯಗಳು ನಿಮ್ಮ ಮನೆ ಖರೀದಿ ಪ್ರದೇಶದ ಬಳಿ ಇದೆಯೇ ಎನ್ನುವುದು ಖಚಿತಪಡಿಸಿಕೊಳ್ಳಿ. ಕೈಗೆಟುಕುವ ಬೆಲೆಯಿದೆ ಎಂದು ಸ್ಥಳದ ವಿಚಾರದಲ್ಲಿ ರಾಜಿ ಮಾಡಿಕೊಂಡರೆ, ಇದು ದೀರ್ಘಾವಧಿಯಲ್ಲಿ ಸಾರಿಗೆ ವೆಚ್ಚಗಳನ್ನು ಹೆಚ್ಚಿಸಬಹುದು.
4. ಸಾಲಕ್ಕಾಗಿ ತಯಾರಿ ಅಗತ್ಯ :
ಮನೆ ಖರೀದಿ ವೇಳೆ ವೆಚ್ಚದ 10-20% ನಷ್ಟು ಡೌನ್ ಪೇಮೆಂಟ್ ಅಗತ್ಯವಿರುತ್ತದೆ. ಉಳಿದ ಹಣಕಾಸು ಸಹಾಯವನ್ನು ಬ್ಯಾಂಕ್ ಲೋನ್ ಮೂಲಕ ನೀಡುತ್ತದೆ. ಖರೀದಿದಾರರ ಮರುಪಾವತಿ ಸಾಮರ್ಥ್ಯವನ್ನು ಬ್ಯಾಂಕ್ ಗೃಹ ಸಾಲಕ್ಕೆ ಸುರಕ್ಷಿತ ಪೂರ್ವ-ಅನುಮೋದನೆ ನೀಡುತ್ತದೆ.
5. ಇಎಂಐ ನಿರ್ವಹಣೆ:
ಬ್ಯಾಂಕ್‌ಗಳು ನಿಮ್ಮ ಸಾಲದ ಅರ್ಹತೆಯನ್ನು ಮೌಲ್ಯಮಾಪನ ಮಾಡುವಾಗ, ಸಮಾನ ಮಾಸಿಕ ಕಂತು (Equated Monthly Installment EMI) ಮೊತ್ತವನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಅತ್ಯಗತ್ಯ. ಮರುಪಾವತಿ ಮಾಸಿಕ ಕಂತು ನಿಮ್ಮ ಹಣಕಾಸಿನ ಸಾಮರ್ಥ್ಯಗಳೊಂದಿಗೆ ಹೊಂದಿಕೆಯಾಗಬೇಕು. ಯಾಕೆಂದರೆ ಮುಂದೆ ಮರುಪಾವತಿ ಹೊರೆಯಂತೆ ಆಗದೆ ಆರಾಮವಾಗಿ ಪಾವತಿ ಮಾಡುವಂತಿರಬೇಕು.
6. ವೆಚ್ಚ ನಿರ್ವಹಣೆ:
ಡೌನ್ ಪೇಮೆಂಟ್ ಮತ್ತು ಗೃಹಸಾಲದ ಹೊರತಾಗಿಯೂ ಮನೆ ಖರೀದಿ ವೇಳೆ ಇತರ ವೆಚ್ಚಗಳಿರುತ್ತದೆ. ಇದಕ್ಕೆ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳುವುದು ತಪ್ಪಿಸಿ. ಇದು ನಿಮ್ಮನ್ನು ಸಾಲದ ಚಕ್ರದಲ್ಲಿ ಸಿಲುಕಿಸಬಹುದು. ಮೊದಲು ಅಗತ್ಯ ಹಣವನ್ನು ಸಂಗ್ರಹಿಸಲು ಆದ್ಯತೆ ನೀಡಿ ನಂತರ ಖರೀದಿಗಾಗಿ ಮುಂದುವರಿಯಿರಿ.
7.ಎಚ್ಚರಿಕೆಯಿಂದ ವ್ಯವಹರಿಸಿ:
ಬಿಲ್ಡರ್‌ಗಳು ಮತ್ತು ಪ್ರಾಪರ್ಟಿ ಡೀಲರ್‌ಗಳೊಂದಿಗೆ ಎಂದಿಗೂ ಎಚ್ಚರಿಕೆಯಿಂದ ತೊಡಗಿಸಿಕೊಳ್ಳುವುದು ಉತ್ತಮ. ಅವರ ದಾಖಲೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ. ಏಕೆಂದರೆ ಕೆಲ ವರ್ಷಗಳ ಹಿಂದೆ ಮನೆಗಳನ್ನು ಬುಕ್ ಮಾಡಿದರೂ ಜನರು ಸ್ವಾಧೀನಪಡಿಸಿಕೊಳ್ಳಲು ಆಗದ ಹಲವು ನಿದರ್ಶನಗಳಿವೆ.


Click it and Unblock the Notifications