For Quick Alerts
ALLOW NOTIFICATIONS  
For Daily Alerts

ಇಎಂಐ ವಿನಾಯಿತಿ ಪಡೆದವರಿಗೆ ಹೀಗೊಂದು ಶಾಕಿಂಗ್ ನ್ಯೂಸ್

|

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಇಎಂಐ ಪಾವತಿ ವಿನಾಯಿತಿ ಸೌಲಭ್ಯವನ್ನು ಹಲವರು ಬಳಸಿಕೊಂಡಿರುವುದು. ಅಂಥವರು ಬಡ್ಡಿ ಹೆಚ್ಚು ಕಟ್ಟಬೇಕಾಗುತ್ತದೆ. ಜತೆಗೆ ಮರುಪಾವತಿ ಅವಧಿಯೂ ಹೆಚ್ಚಾಗಿರುತ್ತದೆ. ಕ್ರೆಡಿಟ್- ಡೆಬಿಟ್ ಕಾರ್ಡ್ ಮೇಲಿನ ಸಾಲವನ್ನೂ ಸಹ ಆಗಸ್ಟ್ ತನಕ ಮರುಪಾವತಿಯಿಂದ ವಿನಾಯಿತಿ ಪಡೆಯಲು ಅವಕಾಶ ಇದೆ.

EMI ಪಾವತಿಯಿಂದ ಮತ್ತೆ 3 ತಿಂಗಳು ವಿನಾಯಿತಿ ನೀಡಿದ RBIEMI ಪಾವತಿಯಿಂದ ಮತ್ತೆ 3 ತಿಂಗಳು ವಿನಾಯಿತಿ ನೀಡಿದ RBI

ಈ ವಿನಾಯಿತಿ ಸಂದರ್ಭವನ್ನು ಬಳಸಿಕೊಂಡವರಿಗೆ ಹೊಸದಾಗಿ ಸಾಲ ಸಿಗುವುದು ಕಷ್ಟವಾಗಬಹುದು ಅಥವಾ ಈಗಾಗಲೇ ಸಾಲ ಮಂಜೂರಾಗಿದ್ದಲ್ಲಿ ಅದನ್ನು ವಿತರಣೆ ಮಾಡದಿರುವ ಸಾಧ್ಯತೆ ಕೂಡ ಇದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇಎಂಐ ಪಾವತಿಯಿಂದ ವಿನಾಯಿತಿ ಪಡೆದರೆ ಸಾಲ ಪಡೆದವರ ಮೇಲೆ ನಕಾರಾತ್ಮಕ ಪರಿಣಾಮ ಆಗಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು. ಆದರೆ ಅದು ನಿಜವೇ ಎಂಬ ಪ್ರಶ್ನೆ ಉದ್ಭವಿಸಿದೆ.

ವಿನಾಯಿತಿ ಪಡೆದವರಿಗೇಕೆ ಸಾಲ ನಿರಾಕರಿಸಲಾಗುತ್ತದೆ?

ವಿನಾಯಿತಿ ಪಡೆದವರಿಗೇಕೆ ಸಾಲ ನಿರಾಕರಿಸಲಾಗುತ್ತದೆ?

ಯಾವುದೇ ಸಾಲ ನೀಡುವಾಗ ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಇಎಂಐನಿಂದ ವಿನಾಯಿತಿ ಪಡೆದರೆ ಅಂಥವರಿಗೆ ಅಲ್ಪಾವಧಿ ಹಣಕಾಸು ಬಿಕ್ಕಟ್ಟು ಇದೆ ಎಂದಾಗುತ್ತದೆ. ಈಗಾಗಲೇ ಬ್ಯಾಂಕ್ ಗಳು ಅನುತ್ಪಾದಕ ಸಾಲದ (ಎನ್ ಪಿಎ) ಹೊರೆ ಹೊತ್ತುಕೊಂಡಿವೆ. ಆರ್ ಬಿಐನಿಂದ ರಿವರ್ಸ್ ರೆಪೋ ದರದ ಇಳಿಕೆ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಇನ್ನು ಈ ಹಿಂದೆ ಸಾಲ ಮಂಜೂರಾಗಿದ್ದಲ್ಲಿ ಅದನ್ನು ಕೂಡ ವಿನಾಯಿತಿ ಸೌಲಭ್ಯ ಪಡೆದವರಿಗೆ ನೀಡುತ್ತಿಲ್ಲ. ಏಕೆಂದರೆ, ಆ ವೇಳೆ ಕೆಲವು ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡಲಾಗಿರುತ್ತದೆ. ಅದರಲ್ಲಿ ಸಾಲ ಪಡೆಯುವವರ ಆದಾಯ, ಸದ್ಯಕ್ಕೆ ತೆಗೆದುಕೊಂಡಿರುವ ಸಾಲದ ಮರುಪಾವತಿಯ ವಿಧಾನ ಇತ್ಯಾದಿ ಗಮನಿಸಲಾಗಿರುತ್ತದೆ. ಇನ್ನೇನು ಸಾಲ ವಿತರಣೆಯ ಕೊನೆ ಹಂತದಲ್ಲಿ ಇದ್ದಲ್ಲಿ ಸಾಲ ನೀಡುವ ಸಂಸ್ಥೆಗಳು ಅರ್ಜಿದಾರರ ಸದ್ಯದ ಸ್ಥಿತಿಯನ್ನೇ ಪರಿಗಣಿಸುತ್ತವೆ.

ಇಂಥ ಸನ್ನಿವೇಶದಲ್ಲಿ ಅರ್ಜಿದಾರರು ಏನನ್ನು ಗಮನಿಸಬೇಕು?

ಇಂಥ ಸನ್ನಿವೇಶದಲ್ಲಿ ಅರ್ಜಿದಾರರು ಏನನ್ನು ಗಮನಿಸಬೇಕು?

ಅರ್ಜಿ ಹಾಕಿಕೊಂಡ ಸಾಲ ದೊರೆಯಬೇಕಿದ್ದಲ್ಲಿ, ಈಗಾಗಲೇ ಪಡೆದ ಸಾಲಕ್ಕೆ ಇನ್ನು ಮುಂದಾದರೂ ಇಎಂಐ ಪಾವತಿ ಸರಿಯಾಗಿ ಮಾಡಬೇಕು. ಒಂದು ವೇಳೆ ಕೈಯಲ್ಲಿ ನಗದು ಇರಲಿ ಎಂಬ ಕಾರಣಕ್ಕೆ ಇಎಂಐ ವಿನಾಯಿತಿ ಪಡೆದುಕೊಂಡಿದ್ದಲ್ಲಿ ತಮ್ಮ ಆದಾಯ ಮೂಲವಾದ ವೇತನ ಅಥವಾ ಬೇರೆ ಯಾವುದೇ ಬಗೆಯ ಆದಾಯವನ್ನು ದಾಖಲೆ ಸಮೇತ ತೋರಿಸಬೇಕಾಗುತ್ತದೆ. ಆದರೆ ಇಎಂಐ ವಿನಾಯಿತಿ ಅವಧಿ ಮುಗಿದ ಮೇಲೆ ಪಾವತಿ ಮಾಡದಿರುವುದು ನೇರವಾಗಿ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಾಲದಿಂದ ಹೊರಗಿರುವುದು ಉತ್ತಮ.

ಏನಿದು ಇಎಂಐ ಪಾವತಿ ವಿನಾಯಿತಿ?

ಏನಿದು ಇಎಂಐ ಪಾವತಿ ವಿನಾಯಿತಿ?

ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಘೋಷಣೆ ಆದಾಗ ಹಲವರಿಗೆ ಉದ್ಯೋಗ ಸಮಸ್ಯೆಯಾಯಿತು. ಹಲವರಿಗೆ ವೇತನ ಪ್ರಮಾಣ ಕಡಿಮೆ ಆಯಿತು. ಇನ್ನು ವ್ಯಾಪಾರ- ವ್ಯವಹಾರಕ್ಕೂ ಹೊಡೆತ ಬಿತ್ತು. ಇಂಥ ಸನ್ನಿವೇಶದಲ್ಲಿ ಪಡೆದ ಸಾಲಕ್ಕೆ ಇಎಂಐ ಅನ್ನು ಮೂರು ತಿಂಗಳ ನಂತರ ಪಾವತಿಸಲು ಮೊದಲಿಗೆ ಆರ್ ಬಿಐ ಅವಕಾಶ ನೀಡಿತು. ಆ ನಂತರ ಮತ್ತೊಮ್ಮೆ ಮೂರು ತಿಂಗಳ ಅವಕಾಶ ನೀಡಿತು. ಕ್ರೆಡಿಟ್- ಡೆಬಿಟ್ ಕಾರ್ಡ್ ಮೇಲಿನ ಸಾಲದ ಇಎಂಐಗೂ ಇದು ಅನ್ವಯ ಆಗುವಂತಿತ್ತು. ಜತೆಗೆ ಈ ವಿನಾಯಿತಿ ಪಡೆದಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ಮಾತನ್ನೂ ಹೇಳಿತ್ತು. ಆದರೆ ಈಗ ಹೊಸದಾಗಿ ಸಾಲ ಪಡೆಯಲು ಮುಂದಾದರೆ ಅಥವಾ ಇನ್ನೇನು ಸಾಲ ಮಂಜೂರಾಗಿ ಅಂತಿಮ ಹಂತದಲ್ಲಿ ಇದ್ದರೂ ಅದು ವಿತರಣೆ ಆಗದಿರಬಹುದು ಎನ್ನಲಾಗುತ್ತಿದೆ. ಆದ್ದರಿಂದ ಇಎಂಐ ವಿನಾಯಿತಿ ಪಡೆದಿದ್ದರೆ ಅಥವಾ ಪಡೆಯುವವರಿದ್ದರೆ ಈ ಅಂಶಗಳು ಗಮನದಲ್ಲಿ ಇರಲಿ.

English summary

Important Message For Those Opt For Loan Moratorium

Who opt for or intend to opt for loan moratorium must consider these points. Otherwise it will impact on future loans.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X