ದೇಶದಲ್ಲಿ ಪ್ರಸ್ತುತ ಎರಡು ಕಾರ್ಡ್‌ಗಳು ಅತೀ ಮುಖ್ಯವಾಗಿದೆ, ಅದುವೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಆಗಿದೆ. ಆಧಾರ್ ಹಾಗೂ ಪ್ಯಾನ್ ಕಾರ್ಡ್ ಎರಡನ್ನು ಕೂಡಾ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಇನ್ನು ಕೆಲವೇ ದಿನಗಳಿದೆ. ನೀವು ಆಧಾರ್ ಪ್ಯಾನ್ ಲಿಂಕ್ ಮಾಡಿದಿದ್ದರೆ ಪ್ಯಾನ್ ನಿಷ್ಕ್ರೀಯವಾಗಲಿದೆ. ಆದರೆ ಹಲವಾರು ಮಂದಿಗೆ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ.
ನಾವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾದರೆ, ಮತ್ತು ಹಲವಾರು ಹಣಕಾಸು ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಇತರೆ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮುಖ್ಯವಾಗಿರುವಂತೆಯೇ ಪ್ಯಾನ್ ಕಾರ್ಡ್‌ಗೂ ಕೂಡಾ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಹಲವಾರು ಮಂದಿಗೆ ಈಗ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ, ಯಾಕೆ ಹೀಗೆ ಆಗುತ್ತಿದೆ, ಕಾರಣವೇನು ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆಯು ಸ್ಪಷ್ಟಣೆಯನ್ನು ನೀಡಿದೆ. ಇಲ್ಲಿದೆ ವಿವರ

ಪ್ಯಾನ್ ಆಧಾರ್ ಲಿಂಕ್ ಮಾಡಲು ಕಾರಣವೇನು?
ಕೆಳಗಿನ ಕಾರಣಗಳಿಗಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವಾಗ ತೊಂದರೆಗಳು ಉಂಟಾಗುತ್ತದೆ.
* ಹೆಸರು ಹೊಂದಾಣಿಕೆ ಆಗದಿರುವುದು
* ಜನ್ಮ ದಿನಾಂಕ ಹೊಂದಾಣಿಕೆ ಆಗದಿರುವುದು
* ಲಿಂಗ ಹೊಂದಾಣಿಕೆ ಆಗದಿರುವುದು
ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿನ ವೈಯಕ್ತಿಕ ಮಾಹಿತಿಯು ಹೊಂದಿಕೆಯಾಗದಿದ್ದಾಗ ಪ್ಯಾನ್ ಮತ್ತು ಆಧಾರ್ ನಡುವೆ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ. ತಪ್ಪಾದ ಹೆಸರು, ತಪ್ಪಾದ ಜನ್ಮದಿನಾಂಕ ಅಥವಾ ಲಿಂಗ ಬದಲಾವಣೆಯಂತಹ ಹಲವಾರು ಸಂದರ್ಭಗಳಲ್ಲಿ ಈ ಸಮಸ್ಯೆ ಉಂಟಾಗುತ್ತದೆ.
ಈ ರೀತಿ ಆಧಾರ್‌ನಲ್ಲಿ ಒಂದು ಮಾಹಿತಿ ಪ್ಯಾನ್ ಕಾರ್ಡ್‌ನಲ್ಲಿ ಒಂದು ಮಾಹಿತಿ ಇದ್ದಾಗ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ಬಂದಾಗ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಯಾವುದಾದರೂ ಒಂದರಲ್ಲಿ ಮಾಹಿತಿಯನ್ನು ಬದಲಾವಣೆ ಮಾಡಬೇಕು.
ಆಧಾರ್ - ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಎಸ್‌ಎಂಎಸ್ ಮೂಲಕ ಲಿಂಕ್ ಮಾಡಿ
ಹಂತ 1: ಎಸ್‌ಎಂಎಸ್ ಅನ್ನು ಪಡೆಯಲು 567678 ಅಥವಾ 56161ಗೆ ಡಯಲ್ ಮಾಡಿ. ಫಾರ್ಮೆಟ್ ಯುಐಡಿಪಿಎಎನ್ (10-ಅಂಕಿಯ PAN ಕಾರ್ಡ್ ಸಂಖ್ಯೆ), 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಸ್ಪೇಸ್ ಆಗಿರಬೇಕು.
ಹಂತ 2: ಪ್ಯಾನ್ ಆಧಾರ್ ಲಿಂಕೀಂಗ್ ಸ್ಟೇಟಸ್ ಬಗ್ಗೆ ನಿಮಗೆ ಎಸ್ಎಂಎಸ್ ಲಭ್ಯವಾಗಲಿದೆ. ಎರಡು ದಾಖಲೆಗಳಲ್ಲಿ ತೆರಿಗೆದಾರರ ಜನನ ದಿನಾಂಕವು ಒಂದೇ ಆಗಿದ್ದರೆ ಮಾತ್ರ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ.


Click it and Unblock the Notifications