ಆದಾಯ ತೆರಿಗೆ ಇಲಾಖೆಯಿಂದ ಇ ಕ್ಯಾಲ್ಕುಲೇಟರ್ ಆರಂಭಿಸಲಾಗಿದೆ. ಕೇಂದ್ರ ಬಜೆಟ್ ನ ಹೊಸ ಘೋಷಣೆ ಪ್ರಕಾರ, ಯಾವುದೇ ತೆರಿಗೆ ವಿನಾಯ್ತಿ ಅಥವಾ ಕಡಿತಕ್ಕೆ ಕ್ಲೇಮ್ ಮಾಡದೆ, ಹೊಸ ತೆರಿಗೆ ಸ್ಲ್ಯಾಬ್ ಅನ್ವಯ ಐಟಿಆರ್ ಫೈಲ್ ಮಾಡುತ್ತೇವೆ ಅನ್ನೋದಾದರೆ ಅಂದಾಜು ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಯಬಹುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಹಳೆ ಹಾಗೂ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಹೋಲಿಕೆ ಮಾಡುವಂಥ ಅವಕಾಶ ಕೂಡ ಇದೆ. 2020- 21ನೇ ಸಾಲಿಗೆ (ಅಸೆಸ್ ಮೆಂಟ್ ವರ್ಷ 2021-21) ಭಾರತೀಯ ನಾಗರಿಕರು ಎಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂಬ ಬಗ್ಗೆ ಇಲಾಖೆಯ ಅಧಿಕೃತವಾದ ಇ ಫೈಲಿಂಗ್ ವೆಬ್ ಸೈಟ್ ನಲ್ಲಿ ಪರಿಶೀಲನೆ ಮಾಡಬಹುದು.
ತೆರಿಗೆ ಪಾವತಿದಾರರು ಮೂರು ವಯೋ ವಿಭಾಗದಲ್ಲಿ ಬರುತ್ತಾರೆ. 60 ವರ್ಷದೊಳಗಿನವರು, 60ರಿಂದ 79 ವರ್ಷದವರು ಹಾಗೂ 79 ವರ್ಷ ಮೇಲ್ಪಟ್ಟವರು. ಈ ಮೂರು ವಿಭಾಗದವರು ಎಲ್ಲ ಮೂಲದಿಂದ ತಮಗೆ ಬರುವ ಆದಾಯದ ಅಂದಾಜು ಮೊತ್ತವನ್ನು ನಮೂದಿಸಬೇಕು. ಹಳೇ ತೆರಿಗೆ ನಿಯಮದಡಿ ಮುಂದುವರಿಯುವುದಾದರೆ ಅರ್ಹ ವಿನಾಯ್ತಿ ಮತ್ತು ಕಡಿತ ಎಷ್ಟು ಎಂಬುದನ್ನು ಪರಿಶೀಲಿಸಬೇಕು ಅಥವಾ ಹೊಸ ಪದ್ಧತಿಯನ್ನು ಆರಿಸಿಕೊಳ್ಳಬೇಕು.

ಹೊಸ ಪ್ರಸ್ತಾವಿತ ತೆರಿಗೆ ನಿಯಮದ ಅಡಿಯಲ್ಲಿ ಅರ್ಹ ವಿನಾಯ್ತಿ ಮತ್ತು ಕಡಿತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಪ್ರಸ್ತಾಪಿಸಿದ ತೆರಿಗೆ ದರ ಮತ್ತು ಹಳೇ ನಿಯಮದ ವಿವರ ಹೀಗಿದೆ.
| ಆದಾಯ | ಈಗಿನ ತೆರಿಗೆ ದರ | ಹೊಸ ತೆರಿಗೆ ದರ | ಇಳಿಕೆ |
| 2.5 - 5 ಲಕ್ಷದವರೆಗೆ | 5 % | 0 % | 5 % |
| 5 ರಿಂದ 7.5 ಲಕ್ಷದವರೆಗೆ | 20 % | 10 % | 10 % |
| 7.5 ರಿಂದ 10 ಲಕ್ಷದವರೆಗೆ | 20 % | 15 % | 5 % |
| 10 ರಿಂದ 12.5 ಲಕ್ಷದವರೆಗೆ | 30 % | 20 % | 10 % |
| 12.5 ರಿಂದ 15 ಲಕ್ಷದವರೆಗೆ | 30 % | 25 % | 5 % |
| 15 ಲಕ್ಷ ಮೇಲ್ಪಟ್ಟು | 30 % | 30 % | 0 % |
ಒಂದು ವೇಳೆ ಹೊಸ ತೆರಿಗೆ ನಿಯಮವನ್ನು ಆಯ್ಕೆ ಮಾಡಿಕೊಂಡಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ 50,000 ರುಪಾಯಿ ಮತ್ತು ಸೆಕ್ಷನ್ 80C ಅಡಿಯಲ್ಲಿ ಯಾವ ವಿನಾಯಿತಿಯೂ ಸಿಗುವುದಿಲ್ಲ.


Click it and Unblock the Notifications