ಭಾರತದ ನಿರುದ್ಯೋಗ ದರವು ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಮಾರ್ಚ್ ತಿಂಗಳಿನಲ್ಲಿ ಶೇಕಡ 7.8ರಷ್ಟಿದ್ದ ನಿರುದ್ಯೋಗ ದರವು ಏಪ್ರಿಲ್ ತಿಂಗಳಿನಲ್ಲಿ ಶೇಕಡ 8.11ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಉದ್ಯೋಗ ಸೃಷ್ಟಿ ಮಾಡಲಾಗಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯಾ ಎಕಾನಮಿ (ಸಿಎಂಐಇ) ಇತ್ತೀಚಿನ ಸಂಶೋಧನಾ ದತ್ತಾಂಶವು ಈ ಬಗ್ಗೆ ಮಾಹಿತಿ ನೀಡಿದೆ. ದತ್ತಾಂಶದ ಪ್ರಕಾರ ಏಷ್ಯಾದ ಮೂರನೇ ಅತಿದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಆರ್ಥಿಕತೆಯಲ್ಲಿ ಲಭ್ಯವಿರುವ ಉದ್ಯೋಗಗಳಿಗೆ ಹೋಲಿಕೆ ಮಾಡಿದಾಗ ಹೆಚ್ಚಿನ ಜನರು ಉದ್ಯೋಗದ ನಿರೀಕ್ಷೆಗಳಾಗಿದ್ದಾರೆ ಅಥವಾ ಉದ್ಯೋಗಿಗಳು ಆಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ರಾಷ್ಟ್ರದಾದ್ಯಂತ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ ಶೇಕಡ 8.11ರಷ್ಟು ಏರಿಕೆಯಾಗಿದೆ. ಡಿಸೆಂಬರ್ ಬಳಿಕ ಇದುವೇ ಅತೀ ಅಧಿಕ ನಿರುದ್ಯೋಗ ದರವಾಗಿದೆ. ಇನ್ನು ಸಿಎಂಐಇ ಡೇಟಾ ಪ್ರಕಾರ ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 8.51ರಿಂದ ಶೇಕಡ 9.81ಕ್ಕೆ ಏರಿಕೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 7.47ರಿಂದ ಶೇಕಡ 7.34ಕ್ಕೆ ಇಳಿಕೆಯಾಗಿದೆ.
ಗ್ರಾಮೀಣ ಕಾರ್ಮಿಕ ವರ್ಗಕ್ಕೆ ಸೇರಿದ ಸುಮಾರು ಶೇಕಡ 94.6ರಷ್ಟು ಜನರು ಉದ್ಯೋಗಿಗಳಾಗಿದ್ದಾರೆ, ಆದರೆ ನಗರ ಪ್ರದೇಶಗಳಲ್ಲಿ ಶೇಕಡ 54.8ರಷ್ಟು ಮಂದಿ ಮಾತ್ರ ಹೊಸ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ ಎಂದು ಸಿಎಂಐಇ ದತ್ತಾಂಶ ಹೇಳುತ್ತದೆ. ಸಿಎಂಐಇ ಸಂಶೋಧನೆಯು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಉದ್ಯೋಗ ಖಾತ್ರಿ ಕಾರ್ಯಕ್ರಮಕ್ಕೆ ಬೇಡಿಕೆ ಕುಸಿಯುತ್ತಿದೆ ಎಂಬ ಅಂಶವನ್ನು ದೃಢಪಡಿಸುತ್ತದೆ.
ಚಳಿಗಾಲದ ಬೆಳೆ ಬಿತ್ತನೆ ಮತ್ತು ಅನೌಪಚಾರಿಕ ವಲಯದ ಉದ್ಯೋಗದಲ್ಲಿ ಚೇತರಿಕೆಯ ಹಿನ್ನೆಲೆಯಲ್ಲಿ ಜನವರಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗಕ್ಕಾಗಿ ಬೇಡಿಕೆಯು ಮಧ್ಯಮವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಏಪ್ರಿಲ್ ಬುಲೆಟಿನ್‌ನಲ್ಲಿ ತಿಳಿಸಿದೆ.
ಉದ್ಯೋಗ ಸೃಷ್ಟಿಯೇ ಅತಿ ದೊಡ್ಡ ಸವಾಲು
ಭಾರತದ ಬೆಳೆಯುತ್ತಿರುವ ಜನಸಂಖ್ಯೆಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಇನ್ನೂ ಒಂದು ಪ್ರಮುಖ ಸವಾಲಾಗಿ ಉಳಿದಿದೆ. ಅದರಲ್ಲೂ ವಿಶೇಷವಾಗಿ ಮುಂದಿನ ಬೇಸಿಗೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರಬೇಕಾದರೆ ಉದ್ಯೋಗ ಸೃಷ್ಟಿಯೇ ಪ್ರಶ್ನೆಯಾಗಲಿದೆ.
ಪ್ರಸ್ತುತ ಒಟ್ಟು ಕಾರ್ಮಿಕ ಬಲದ ಸುಮಾರು ಶೇಕಡ 87ರಷ್ಟು ಉದ್ಯೋಗವನ್ನು ಪಡೆಯಲು ಸಾಧ್ಯವಾಯಿತು. ತಿಂಗಳಲ್ಲಿ ಹೆಚ್ಚುವರಿ 22.1 ಮಿಲಿಯನ್ ಉದ್ಯೋಗಗಳು ಸೃಷ್ಟಿಸಲಾಗಿದೆ. ಉದ್ಯೋಗ ದರವು ಏಪ್ರಿಲ್‌ನಲ್ಲಿ ಶೇಕಡ 38.57 ಏರಿದೆ. ಮಾರ್ಚ್ 2020ರಿಂದ ಅತ್ಯಧಿಕವಾಗಿದೆ.
"ಕಾರ್ಮಿಕರ ಪ್ರಮಾಣ ಏರಿಕೆಯಿಂದಾಗಿ ನಿರುದ್ಯೋಗ ದರ ಹೆಚ್ಚಾಗಿದೆ," ಎಂದು ಸಿಎಂಐಇ ಮುಖ್ಯಸ್ಥ ಮಹೇಶ್ ವ್ಯಾಸ್ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯ ಅಂಕಣದಲ್ಲಿ ಬರೆದಿದ್ದಾರೆ. ಭಾರತದ ಕಾರ್ಮಿಕ ಬಲವು ಏಪ್ರಿಲ್‌ನಲ್ಲಿ 25.5 ಮಿಲಿಯನ್‌ನಿಂದ 467.6 ಮಿಲಿಯನ್‌ಗೆ ಏರಿದೆ.
ನಿರುದ್ಯೋಗ ದರ ಲೆಕ್ಕಾಚಾರ ಹಾಕುವುದು ಹೇಗೆ?
ನಿರುದ್ಯೋಗ ದರವನ್ನು ಕೂಡಾ ಲೆಕ್ಕಾಚಾರ ಹಾಕಲಾಗುತ್ತದೆ. ನಿರುದ್ಯೋಗಿಗಳು/ ಒಟ್ಟು ಕಾರ್ಮಿಕರು × 100 ಎಂಬ ಲೆಕ್ಕಾಚಾರವನ್ನು ಮಾಡಿ ನಿರುದ್ಯೋಗ ದರವನ್ನು ಪತ್ತೆಹಚ್ಚಲಾಗುತ್ತದೆ. (Unemployed Individuals/Total Labour Force × 100)


Click it and Unblock the Notifications