Indian Bank: 2 ಹೊಸ ಎಫ್‌ಡಿ ಯೋಜನೆ ಪ್ರಾರಂಭ..ಇತರೆ ಎರಡು ಎಫ್‌ಡಿಗಳು ಸ್ಥಗಿತ.. ಏನುಂಟು, ಏನಿಲ್ಲ? ನೀವೆ ನೋಡಿ

ಬದಲಾವಣೆ ಪ್ರಕೃತಿಯ ನಿಯಮ! ಹೊಸ ನೀರು ಬಂದು, ಹಳೆ ನೀರನ್ನು ಕೊಚ್ಚಿ ಕೊಂಡು ಹೋಯಿತು.. ಹೌದು, ನಿಮಗಾಗಿ ಎರಡು ಹೊಸ ಎಫ್‌ಡಿ ಯೋಜನೆಗಳು ಬಂದಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್, ಹೆಚ್ಚಿನ ಬಡ್ಡಿದರಗಳೊಂದಿಗೆ ಎರಡು ಹೊಸ ವಿಶೇಷ ಸ್ಥಿರ ಠೇವಣಿ (FD) ಯೋಜನೆಗಳನ್ನು ಪರಿಚಯಿಸಿದೆ. ಇವುಗಳನ್ನು ಇಂಡ್ ಸೆಕ್ಯೂರ್ ಮತ್ತು ಇಂಡ್ ಗ್ರೀನ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ಎಫ್‌ಡಿ ಯೋಜನೆಗಳಲ್ಲಿ ಬಡ್ಡಿದರ ಎಷ್ಟಿದೆ ಎಂಬ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹೌದು,ಇಂಡಿಯನ್ ಬ್ಯಾಂಕ್ ಇಂಡ್ ಸೆಕ್ಯೂರ್ ಮತ್ತು ಇಂಡ್ ಗ್ರೀನ್ ಎಂಬ ಹೆಸರಿನಲ್ಲಿ ಎರಡು ಹೊಸ ಎಫ್‌ಡಿ ಯೋಜನೆಗಳನ್ನು ಬಿಡುಗಡೆ ಮಾಡಿದೆ.ಇದರ ಜೊತೆಗೆ ಇಂಡ್ ಸೂಪರ್ 400 ಡೇಸ್' ಮತ್ತು 'ಇಂಡ್ ಸುಪ್ರೀಂ 300 ಡೇಸ್' ಎಂಬ ಜನಪ್ರಿಯ ಠೇವಣಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಯಾಕೆ ಎಂಬುವುದನ್ನು ತಿಳಿಯಲು ಮುಂದೆ ಓದಿ.

Indian Bank: 2 ಹೊಸ ಎಫ್‌ಡಿ ಯೋಜನೆ ಪ್ರಾರಂಭ

ನಿರ್ದಿಷ್ಟ ಲಾಭಕ್ಕಾಗಿ ಹೂಡಿಕೆ ಮಾಡಲು ಬಯಸುವವರಿಗೆ, ಫಿಕ್ಸೆಡ್ ಡೆಪಾಸಿಟ್ (Fixed Deposit) ಉತ್ತಮ ಆಯ್ಕೆಯಾಗಿದೆ.ಇತ್ತೀಚೆಗೆ, ಇಂಡಿಯನ್ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ, ಇದು ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ ಅವಕಾಶಗಳನ್ನು ನೀಡಲು ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ ಅವು ಯಾವುವೆಂದರೆ ಇಂಡ್ ಸೆಕ್ಯೂರ್ ಮತ್ತು ಇಂಡ್ ಗ್ರೀನ್ ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

ಹೊಸ ಎಫ್‌ಡಿಗಳ ಜೊತೆಗೆ ಇಂಡಿಯನ್ ಬ್ಯಾಂಕ್ ತನ್ನ ಜನಪ್ರಿಯ ಇಂಡ್ ಸೂಪರ್ 400 ಡೇಸ್' ಮತ್ತು 'ಇಂಡ್ ಸುಪ್ರೀಂ 300 ಡೇಸ್' ಅವಧಿ ಠೇವಣಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ.

ಇತ್ತೀಚಿನ ಇಂಡಿಯನ್ ಬ್ಯಾಂಕ್ FD ಬಡ್ಡಿದರಗಳು
ಪರಿಷ್ಕರಣೆಯ ನಂತರ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 3 ಕೋಟಿ ರೂ.ಗಿಂತ ಕಡಿಮೆ ಮೊತ್ತಕ್ಕೆ ವಿಶೇಷ ಠೇವಣಿ ಸೇರಿದಂತೆ ಶೇ. 2.80 ರಿಂದ ಶೇ.7.15ರವರೆಗೆ ಎಫ್‌ಡಿ ಬಡ್ಡಿದರವನ್ನು ನೀಡುತ್ತದೆ.₹3 ಕೋಟಿ ಗಿಂತ ಕಡಿಮೆ ಠೇವಣಿಗೆ ಅನ್ವಯವಾಗುತ್ತದೆ.

ಠೇವಣಿ ಅವಧಿ ಬಡ್ಡಿದರ (%)

7 ರಿಂದ 14 ದಿನಗಳ ಠೇವಣಿಗೆ ಶೇಕಡಾ 2.80 ರಷ್ಟು ಬಡ್ಡಿ
15ರಿಂದ 29 ದಿನಗಳ ಠೇವಣಿಗೆ ಶೇಕಡಾ 2.80 ರಷ್ಟು ಬಡ್ಡಿ
30ರಿಂದ 45 ದಿನಗಳ ಠೇವಣಿಗೆ ಶೇಕಡಾ 3 ರಷ್ಟು ಬಡ್ಡಿ
46 ರಿಂದ 90 ದಿನಗಳ ಠೇವಣಿಗೆ ಶೇಕಡಾ 3.25 ರಷ್ಟು ಬಡ್ಡಿ
91 ರಿಂದ 120 ದಿನಗಳ ಠೇವಣಿಗೆ ಶೇಕಡಾ 3.50 ರಷ್ಟು ಬಡ್ಡಿ
121 ರಿಂದ 180 ದಿನಗಳ ಠೇವಣಿಗೆ ಶೇಕಡಾ 3.85 ರಷ್ಟುಬಡ್ಡಿ
181ರಿಂದ 9 ತಿಂಗಳವರೆಗಿನ ಠೇವಣಿಗೆ ಶೇಕಡಾ 4.50 ರಷ್ಟು ಬಡ್ಡಿ
9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ (300 ದಿನಗಳನ್ನು ಹೊರತುಪಡಿಸಿ) ಠೇವಣಿಗಳ ಮೇಲೆ ಶೇಕಡಾ 4.75 ರಷ್ಟು ಬಡ್ಡಿದರವನ್ನು ನೀಡುತ್ತದೆ.
1 ವರ್ಷದ ಅವಧಿಯ ಠೇವಣಿಗಳಿಗೆ ಶೇಕಡಾ 6.10 ರಷ್ಟು ಬಡ್ಡಿದರ ಅನ್ವಯವಾಗುತ್ತದೆ.

ಈ ಬಡ್ಡಿದರಗಳು ಸಾಮಾನ್ಯ ಗ್ರಾಹಕರಿಗೆ ಅನ್ವಯವಾಗುತ್ತವೆ. ವೃದ್ಧಾಪ್ಯ (Senior Citizens) ಗ್ರಾಹಕರಿಗೆ ಹೆಚ್ಚುವರಿ ಬಡ್ಡಿದರ (ಹೆಚ್ಚಾಗಿ ಶೇ.0.50 ಹೆಚ್ಚು) ನೀಡಲಾಗುತ್ತದೆ.

ಇಂಡ್ ಸೆಕ್ಯೂರ್ ಫಿಕ್ಸೆಡ್ ಡೆಪಾಸಿಟ್
ಇಂಡಿಯನ್ ಬ್ಯಾಂಕ್ ಹೊಸದಾಗಿ ಪರಿಚಯಿಸಿರುವ 'ಇಂಡ್ ಸೆಕ್ಯೂರ್' ವಿಶೇಷ ನಿಶ್ಚಿತ ಠೇವಣಿ 444 ದಿನಗಳ ಅವಧಿಯವೆರೆಗೆ ನೀವು ಹಣವನ್ನು ಠೇವಣಿ ಮಾಡಬಹುದು. ಈ ಯೋಜನೆಯಲ್ಲಿ, ಸಾಮಾನ್ಯ ನಾಗರಿಕರು ವಾರ್ಷಿಕ ಶೇಕಡಾ 7.15 ರಷ್ಟು ಬಡ್ಡಿಯನ್ನು ಗಳಿಸಬಹುದು. ಇದಲ್ಲದೆ ಹಿರಿಯ ನಾಗರಿಕರಿಗೆ ಶೇಕಡಾ 7.65 ರಷ್ಟು ಬಡ್ಡಿ ಪಡೆಯಬಹುದು. ಹಾಗೂ ಸೂಪರ್ ಸೀನಿಯರ್ಸ್‌ (80 ವರ್ಷಕ್ಕಿಂತ ಮೇಲ್ಪಟ್ಟವರು) ಶೇಕಡಾ 7.90 ರಷ್ಟು ಬಡ್ಡಿದರವನ್ನು ಪಡೆಯಲು ಠೇವಣಿ ಪಡೆಯಬಹುದು.

ಈ ಯೋಜನೆಯಲ್ಲಿ ನೀವು ಐದು ಲಕ್ಷದವರೆಗೂ ಠೇವಣಿ ಇಟ್ಟರೆ, ಸಾರ್ವಜನಿಕರಿಗೆ ಮುಕ್ತಾಯದ ಸಮಯದಲ್ಲಿ 42630 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕಗೆ 46685 ಬಡ್ಡಿ ಸಿಗಲಿದೆ. ಈ ಯೋಜನೆಯಲ್ಲಿ ಕನಿಷ್ಠ 1,000 ದಿಂದ ಗರಿಷ್ಠ 3 ಕೋಟಿವರೆಗೆ ಹೂಡಿಕೆ ಮಾಡಬಹುದು. ಈ ವಿಶೇಷ ಠೇವಣಿಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ 2025ರ ಸೆಪ್ಟೆಂಬರ್ 30 ರವರೆಗೆ ಮಾತ್ರ ಆಗಿರುತ್ತದೆ.

ಇಂಡ್ ಗ್ರೀನ್ ಫಿಕ್ಸೆಡ್ ಡೆಪಾಸಿಟ್

ಇಂಡ್ ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಚಿಲ್ಲರೆ ಅವಧಿಯ ಠೇವಣಿ ಉತ್ಪನ್ನವು ಇಂಡಿಯನ್ ಬ್ಯಾಂಕಿನ ಇತ್ತೀಚಿನ ಕೊಡುಗೆಯಾಗಿದೆ. ಇದನ್ನು ಮೇ 8, 2025 ರಂದು ಪ್ರಾರಂಭಿಸಲಾಯಿತು, ಇದು 555 ದಿನಗಳ ಸ್ಥಿರ ಮುಕ್ತಾಯ ಅವಧಿಯನ್ನು ಹೊಂದಿದೆ. ಈ ಯೋಜನೆಯು ಕನಿಷ್ಠ 1,000 ರೂ.ಗಳಿಂದ ಗರಿಷ್ಠ 3 ಕೋಟಿ ರೂ.ಗಳಿಗಿಂತ ಕಡಿಮೆ ಹೂಡಿಕೆಗಳನ್ನು ಅನುಮತಿ ಇದೆ.

ಈ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ವರ್ಷಕ್ಕೆ ಶೇಕಡಾ 6.80ರಷ್ಟು ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರು ಶೇಕಡಾ.7.30 ರಷ್ಟು ಬಡ್ಡಿ ಸಿಗುತ್ತದೆ. ಸೂಪರ್ ಹಿರಿಯ ನಾಗರಿಕರು ಶೇ.7.55 ರಷ್ಟು ಬಡ್ಡಿ ಪಡೆಯಬಹುದು.

ಈ ಯೋಜನೆಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ, ಸಾಮಾನ್ಯ ನಾಗರಿಕರಿಗೆ ಮುಕ್ತಾಯದ ಸಮಯದಲ್ಲಿ 52,068 ಬಡ್ಡಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+