ಹಬ್ಬದ ಸೀಸನ್‌ನಲ್ಲಿ ಈ ಹಣದುಬ್ಬರದ ಜಗತ್ತಿನಲ್ಲಿ ಬದುಕುಳಿಯುವುದು ಪ್ರತಿ ಭಾರತೀಯ ಮನೆಯ ಅಂತಿಮ ಗುರಿಯಾಗಿದೆ. ನಿಮ್ಮ ಹಣಕಾಸಿನ ನಿರ್ವಹಣೆಯನ್ನು ಹೇಗೆ ನಿರ್ವಹಿಸುವುದು ಎಂದು ನಿಮಗೆ ತಿಳಿದಿದ್ದರೆ ನೀವು ಹಣವನ್ನು ಉಳಿಸಬಹುದು ಮತ್ತು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಬಹುದು.
ವಿವಿಧ ಅಗತ್ಯತೆಗಳು ಮತ್ತು ಆರ್ಥಿಕ ಸವಾಲುಗಳನ್ನು ಹೊಂದಿರುವ ದೇಶದ ಪ್ರತಿಯೊಂದು ಕುಟುಂಬಕ್ಕೂ ಸಾಲದ ಸುಳಿಯಿಂದ ಹೊರಬರಲು ಸರಿಯಾದ ವಿಧಾನಗಳ ಅಗತ್ಯವಿದೆ. ಭಾರತೀಯ ಕುಟುಂಬಗಳು ತಮ್ಮ ಹಣಕಾಸು ಹೇಗೆ ನಿರ್ವಹಿಸಬಹುದು ಮತ್ತು ಸ್ವಾವಲಂಬನೆ ಜೀವನ ಹೇಗೆ ನಡೆಸುವುದು ಎಂಬ ವಿವರ ಇಲ್ಲಿದೆ ವಿವರ ಮುಂದೆ ಓದಿ....

ಸಮಗ್ರವಾದ ಬಜೆಟ್ ಅನ್ನು ರೂಪಿಸಿ
ಕಲ್ಯಾಣಂ ಫರ್ನಿಚರ್‌ನ ಸಂಸ್ಥಾಪಕ ಹಾಗೂ ಸಿಇಒ ತೇಜ್‌ಪಾಲ್ ಸಿಂಗ್ ಶೇಖಾವತ್, ಎಲ್ಲ ಉತ್ತಮ ಹಣಕಾಸು ಯೋಜನೆಗಳು ಒಂದು ವ್ಯವಸ್ಥಿತವಾಗಿ ರೂಪಿಸಿರುವ ಬಜೆಟ್ ಅನ್ನು ಅವಲಂಬಿಸಿಕೊಂಡಿರುತ್ತದೆ. ಪ್ರತಿಯೊಂದು ಮನೆಯವರು ಕೂಡ ಪ್ರತಿ ತಿಂಗಳು ಮನೆ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದಂತೆ ಬಜೆಟ್ ಸಿದ್ಧಪಡಿಸುವುದು ಮುಖ್ಯವಾಗಿದ್ದು, ಒಂದು ರೂಪಾಯಿ ಖರ್ಚು ಮಾಡಿಲ್ಲ ಅಥವಾ ಗಳಿಸಿಲ್ಲ ಎಂಬುದನ್ನು ತೋರಿಸಬೇಕು ಎನ್ನುತ್ತಾರೆ.
ಖರ್ಚು ಮಾದರಿಗಳನ್ನು ಅರ್ಥಮಾಡಿಕೊಳ್ಳಿ
ವೆಚ್ಚಗಳನ್ನು ಅಗತ್ಯ ಹಾಗೂ ಅನಿವಾರ್ಯ ಎಂಬುದಾಗಿ ವರ್ಗೀಕರಿಸುವುದರಿಂದ ಕುಟುಂಬಗಳು ತಮ್ಮ ಖರ್ಚು ಮಾದರಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಅವರ ಬಜೆಟ್ ಅನ್ನು ಹೇಗೆ ಕಡಿಮೆಗೊಳಿಸಬಹುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುಕೂಲ ಮಾಡುತ್ತದೆ.
ಸಾಲವನ್ನು ನಿಭಾಯಿಸುವುದಕ್ಕೆ ತಂತ್ರಗಳನ್ನು ರೂಪಿಸಿ
ಶೇರ್ ಇಂಡಿಯಾ ಫಿನ್‌ಕ್ಯಾಪ್ ಸಿಇಒ ಆಸ್ತಾ ಗುಪ್ತಾ ಅವರು ಹೇಳುವ ಪ್ರಕಾರ, ಸಾಲದ ನಿರ್ವಹಣೆ ಹಾಗೂ ಅದರ ದುಷ್ಪರಿಣಾಮಗಳು ಹೆಚ್ಚಿನ ಭಾರತೀಯ ಕಟುಂಬಸ್ಥರಿಗೆ ಹಲವು ರೀತಿಯ ಸವಾಲುಗಳನ್ನು ಉಂಟುಮಾಡಿವೆ. ಹೆಚ್ಚಿನ ಆದ್ಯತೆಯ ಸಾಲದ ಮೇಲೆ ಗಮನಹರಿಸುವುದು ಹಾಗೂ ತಾರ್ಕಿಕ ಮರುಪಾವತಿ ವಿಧಾನವನ್ನು ರೂಪಿಸುವುದು ದೊಡ್ಡ ಮಟ್ಟದ ವ್ಯತ್ಯಾಸವನ್ನು ಉಂಟು ಮಾಡಬಹುದು ಎನ್ನುತ್ತಾರೆ.
ಇದರ ಜತೆಗೆ ಕಡಿಮೆ ಬಡ್ಡಿ ದರಗಳಿಗೆ ಸಾಲಗಾರರೊಂದಿಗೆ ಮಾತುಕತೆ ನಡೆಸುವುದು ಹಾಗೂ ಸಾಲದ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹಣಕಾಸಿನ ಒತ್ತಡವನ್ನು ಕಡಿಮೆಗೊಳಿಸಬಹುದು ಹಾಗೂ ಸಾಲದಿಂದ ಮುಕ್ತರಾಗುವುದಕ್ಕೆ ಇರುವ ಹಾದಿಯನ್ನು ಕೂಡ ಇದು ಸುಲಭಗೊಳಿಸುತ್ತದೆ ಎನ್ನುತ್ತಾರೆ ಆಸ್ತಾ ಗುಪ್ತಾ.
ಸ್ಮಾರ್ಟ್ ಶಾಪಿಂಗ್ ಅಭ್ಯಾಸ ಮಾಡಿ
ಪ್ರತಿ ಭಾರತೀಯ ಕುಟುಂಬವು ಸ್ಮಾರ್ಟ್ ಗ್ರಾಹಕರಾಗುವ ಮೂಲಕ ಅರ್ಥಪೂರ್ಣ ಉಳಿತಾಯವನ್ನು ಹೊಂದಬಹುದು. ವೆಚ್ಚವನ್ನು ಕಡಿತಗೊಳಿಸುವ ಕೆಲವು ಪರಿಣಾಮಕಾರಿ ಮಾರ್ಗಗಳು ರಿಯಾಯಿತಿಗಳ ಲಭ್ಯತೆ, ಕ್ಯಾಶ್‌ಬ್ಯಾಕ್ ಮತ್ತು ಬಹುಮಾನ ಯೋಜನೆಗಳ ಬಳಕೆ ಮತ್ತು ಬೃಹತ್ ಖರೀದಿಯನ್ನು ಒಳಗೊಂಡಿವೆ. ಹೀಗಿರುವಾಗ, ಬೇಡಿಕೆಗಳಿಂದ ಅಗತ್ಯತೆಗಳನ್ನು ಬೇರ್ಪಡಿಸಿದಾಗ ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದಕ್ಕೆ ಅನುಕೂಲವಾಗುತ್ತದೆ.


Click it and Unblock the Notifications