ಪ್ರಸ್ತುತ ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಸಹ ನಾವು ಖರೀದಿ ಮಾಡುವ ಬಹುತೇಕ ಎಲ್ಲ ವಸ್ತು, ಆಹಾರ ಪದಾರ್ಥಗಳ ಬೆಲೆಯು ಗಗನಕ್ಕೇರಿದೆ. ಈ ನಡುವೆ ಜನರ ಮುಂದೆ ಇರುವ ಮಾರ್ಗ ಬರೀ ಆದಷ್ಟು ಖರ್ಚನ್ನು ಕಡಿಮೆ ಮಾಡುವುದು ಮಾತ್ರವಾಗಿದೆ. ನಾವೆಷ್ಟು ಜಿಪುಣರಾಗುತ್ತೇವೆಯೂ ಅಷ್ಟು ಲಾಭವನ್ನು ಕಾಣಲು ಸಾಧ್ಯವಾಗುತ್ತದೆ.
ಫೆಡರಲ್ ರಿಸರ್ವ್ ಎರಡು-ದಶಕಗಳಲ್ಲೇ ಬಡ್ಡಿದರಗಳನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೂಡಾ ರೆಪೋ ದರವನ್ನು ಏರಿಕೆ ಮಾಡಿದೆ. ಕೆಲವು ಕ್ರೆಡಿಟ್ ಕಾರ್ಡ್‌ಗಳ ಮೇಲಿನ ವಾರ್ಷಿಕ ಬಡ್ಡಿ ದರವು ಶೇಕಡ 30ಕ್ಕೆ ಏರಿಕೆಯಾಗಿದೆ. ಈ ನಡುವೆ ಹಣವನ್ನು ಖರ್ಚು ಮಾಡುವುದು ಅತೀ ದುಬಾರಿಯಾಗಿದೆ.

ಖರ್ಚು ನಿಭಾಯಿಸಿ ಎನ್ನುತ್ತಾರೆ ತಜ್ಞರು
ರಜಾದಿನಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಹೆಚ್ಚು ಖರ್ಚು ಮಾಡದೆ ಬೇರೆ ದಾರಿ ಇರುವುದಿಲ್ಲ. ಆದರೆ ನಾವು ಈ ಸಂದರ್ಭದಲ್ಲೂ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ಸಲಹೆಗಾರರು ಮತ್ತು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಅದರಲ್ಲಿ ಮುಖ್ಯವಾದುದ್ದು, ಹಣಕಾಸಿನ ನಿರ್ಣಯಗಳನ್ನು ಈಗಲೇ ಮಾಡುವುದು ಆಗಿದೆ. ಆರ್ಥಿಕ ಹಾನಿಯಾದ ಬಳಿಕ ತಲೆಕೆಡಿಸಿಕೊಂಡು ಏನು ಪ್ರಯೋಜನ?
ಹೊಸ ಸೀಸನ್, ಹೊಸ ದಿನವು ಹೊಸ ಆರ್ಥಿಕ ಅಭ್ಯಾಸಕ್ಕೆ ನಾಂದಿಯಾಗಬಹುದು ಎಂದು ಹೇಳಿಕೊಂಡು, ಹೊಸ ವರ್ಷ ಆರಂಭದಲ್ಲೇ ತಮ್ಮ ಆರ್ಥಿಕ ಯೋಜನೆ ಬದಲಾಯಿಸಲು ಮುಂದಾಗುವವರು ಇದ್ದಾರೆ. ಆದರೆ ಜನವರಿ 1 ರಂದು ಮಾಂತ್ರಿಕ ಏನೂ ಇಲ್ಲ ಎನ್ನುತ್ತಾರೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್‌ನ ಪ್ರಾಧ್ಯಾಪಕರಾದ ಕೇಟಿ ಮಿಲ್ಕ್‌ಮ್ಯಾನ್.
"ನಾವು ಯಾವುದೇ ನಿರ್ಧಾರವನ್ನು ಮಾಡಲು ಹೊಸ ವರ್ಷಕ್ಕಾಗಿ ಕಾಯಬೇಕಾಗಿಲ್ಲ. ನಾವು ಕೂಡಲೇ ನಿರ್ಧಾರವನ್ನು ಜಾರಿ ಮಾಡುವುದು ಅತೀ ಮುಖ್ಯವಾಗುತ್ತದೆ. ನಾವು ಆರ್ಥಿಕ ನಿರ್ಧಾರವನ್ನು ಕೈಗೊಳ್ಳುವಾಗಲೂ ಕೂಡಾ ಹೊಸ ವರ್ಷಕ್ಕಾಗಿ ಕಾಯದೆ, ಈಗಿನಿಂದಲೇ ಕೈಗೊಳ್ಳಬೇಕು," ಎನ್ನುತ್ತಾರೆ.
ಖರ್ಚಿನ ಲೆಕ್ಕಾಚಾರ ಮಾಡಿಕೊಳ್ಳಿ
ಕಳೆದ ಮೂರು ವರ್ಷಗಳಲ್ಲಿ ರಜೆಯ ಸಂದರ್ಭದಲ್ಲಿ ಎಷ್ಟು ಖರ್ಚು ಮಾಡಿದ್ದೀರಿ ಎಂದು ಲೆಕ್ಕಾಚಾರ ಮಾಡಿಕೊಳ್ಳಿ. ಈ ವರ್ಷವೂ ಖರ್ಚನ್ನು ನೀವು ಮಾಡಬೇಕಾಗುತ್ತದೆ. ನಿಮ್ಮ ಪ್ರತಿ ಖರ್ಚನ್ನು ಕೂಡಾ ಬರೆದುಕೊಳ್ಳಿ, ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ ಎಂದು ಗಮನಿಸಿ ಎನ್ನುತ್ತಾರೆ ವಿಸ್ಕಾನ್ಸಿನ್‌ನ ಹಣಕಾಸು ಸಲಹಾ ಸಂಸ್ಥೆಯಾದ ಹಾರ್ಮನಿ ವೆಲ್ತ್‌ನ ಮಾಲೀಕ ಮ್ಯಾಟ್ ಫಿಜೆಲ್.
"ಅಧಿಕ ಖರ್ಚನ್ನು ಮಾಡಬೇಡಿ. ಉದಾಹರಣೆಗೆ ನೀವು ಲಂಡನ್‌ಗೆ ಹೋಗಲು 2,000 ಡಾಲರ್ ಖರ್ಚು ಮಾಡಿರಬಹುದು. ಇದು ನಿಜವಾಗಿಯೂ ಉತ್ತಮ ವೆಚ್ಚ ಎಂದು ಹೇಳಬಹುದು. ಆದರೆ ಈ ಖರ್ಚಿನಲ್ಲಿಯೂ ನೀವು ಕಡಿತ ಮಾಡುವುದು ಹೇಗೆ ಎಂಬ ಬಗ್ಗೆ ತಿಳಿಯಿರಿ," ಎಂದು ಮ್ಯಾಟ್ ಫಿಜೆಲ್ ಹೇಳುತ್ತಾರೆ.
ಖರ್ಚು ಒಮ್ಮೆಲೆ ಮಾಡಿ
ಜನರು ಎಷ್ಟು ಖರ್ಚು ಮಾಡುತ್ತಾರೆ ಎಂಬ ಬಗ್ಗೆ ತಾವಾಗಿಯೇ ಅಂದಾಜು ಕೂಡಾ ಮಾಡುವುದಿಲ್ಲ ಎನ್ನುತ್ತಾರೆ ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್‌ನ ಪ್ರಾಧ್ಯಾಪಕ ಅಬಿಗೈಲ್ ಸುಸ್ಮಾನ್. ನೀವು ಒಂದು ಪ್ರವಾಸವನ್ನು ಪ್ಲ್ಯಾನ್ ಮಾಡುವಾಗ ಒಬ್ಬರು, ಇಬ್ಬರು ಪ್ಲ್ಯಾನ್ ಮಾಡುವುದಕ್ಕಿಂತ ಹೆಚ್ಚಿನ ಜನರು ಒಟ್ಟಾಗಿ ಹಂಚಿ ಖರ್ಚಿ ಮಾಡಿದರೆ, ಹೊರೆಯು ಕಡಿಮೆಯಾಗುತ್ತದೆ.
ಇನ್ನು ನೀವು ಒಬ್ಬರೇ ಖರ್ಚನ್ನು ಮಾಡಬೇಕಾದ ಸ್ಥಿತಿಯಿದ್ದರೆ, ಉಡುಗೊರೆ, ಊಟ, ಪಾರ್ಟಿ, ಪ್ರವಾಸ ಎಲ್ಲವನ್ನು ಮೊದಲೇ ಲೆಕ್ಕಾಚಾರ ಮಾಡಿಕೊಳ್ಳಿ. ಎಷ್ಟು ಉಡುಗೊರೆ ಖರೀದಿ ಮಾಡಬೇಕಾಗಿದೆ ಎಂದು ಒಂದೇ ಬಾರಿಗೆ ಲೆಕ್ಕಾಚಾರ ಮಾಡಿಕೊಳ್ಳಿ. ಒಮ್ಮೆಲೆ ಅಧಿಕ ಖರೀದಿ ಮಾಡಿದರೆ, ಆಫರ್ ಲಭ್ಯವಾಗುತ್ತದೆ. ಪ್ಯತ್ಯೇಕ, ಪ್ರತ್ಯೇಕವಾಗಿ ಖರೀದಿಸಿದರೆ, ಖರ್ಚು ಅಧಿಕವಾಗುತ್ತದೆ.
ಕುಟುಂಬ ಮತ್ತು ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ
ಹಬ್ಬ ಅಥವಾ ರಜಾದಿನಗಳ ಖರ್ಚುಗಳ ಬಗ್ಗೆ, ಅದರ ಬಗ್ಗೆ ನಿಮ್ಮ ಭಾವನೆಯನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಬಗ್ಗೆ ಕೆಟ್ಟ ಭಾವನೆ ಹುಟ್ಟಬಹುದು. ಉಡುಗೊರೆಗಳ ವೆಚ್ಚದ ಮೇಲೆ ಮಿತಿ ಇರಲಿ, ಗಿಫ್ಟ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಅಥವಾ ಕಡಿಮೆ ಮೊತ್ತದ ಉಡುಗೊರೆ ನೀಡಿ.


Click it and Unblock the Notifications