ನಿಮ್ಮ ಹೂಡಿಕೆಯ ಮೇಲೆ ನೀವು ಭಾರಿ ಬಡ್ಡಿಯನ್ನು ಪಡೆಯಲು ಬಯಸಿದರೆ ಈ ಸುದ್ದಿ ನಿಮಗಾಗಿ ಆಗಿದೆ. ಅದರಲ್ಲೂ ಇನ್ನೊಂದು ಸಿಹಿಸುದ್ದಿ ಏನೆಂದರೆ ನೀವು ಹೂಡಿಕೆ ಮಾಡಿದ ಹಣದ ತಲೆ ಬಿಸಿ ಮಾಡುವ ಅಗತ್ಯವೂ ಇಲ್ಲ. ಯಾಕೆಂದರೆ ಇದು ಸುರಕ್ಷಿತ ಹೂಡಿಕೆಯಾಗಿದೆ. ನೀವು ಹೂಡಿಕೆ ಮಾಡಿದ ಮೇಲೆ ಹಣ ಏನಾಗುತ್ತೆ ಎಂಬ ಆತಂಕ ಪಡಬೇಕಾಗಿಲ್ಲ.
ಹೌದು, ಇದು ಅಂಚೆ ಕಚೇರಿಯ ಅತೀ ಅದ್ಭುತವಾದ ಹೂಡಿಕೆ ಯೋಜನೆಯಾಗಿದೆ. ಇದರಲ್ಲಿ 1 ಲಕ್ಷ ರೂಪಾಯಿ ಹೂಡಿಕೆಯನ್ನು ಮಾಡಿ ಅಥವಾ ಅದಕ್ಕಿಂತ ಅಧಿಕ ಹೂಡಿಕೆಯನ್ನು ಮಾಡಿ ನೀವು 44,995 ರೂಪಾಯಿಯನ್ನು ಬಡ್ಡಿಯಾಗಿಯೇ ಪಡೆಯಬಹುದು. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಈ ಯೋಜನೆ ಬಗ್ಗೆ ತಿಳಿಯಿರಿ
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಸಮಯ ಠೇವಣಿ ಯೋಜನೆಯನ್ನು ಹೊಂದಿದೆ. ಅದನ್ನು ನೀವು ಎಫ್‌ಡಿ ಯೋಜನೆ ಎಂದೂ ಕರೆಯಬಹುದು. ಇದು ಅಂಚೆ ಕಛೇರಿ ಗ್ರಾಹಕರಿಗೆ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳ ಕಾಲ ಠೇವಣಿ ಮಾಡಲು ಅವಕಾಶ ನೀಡುತ್ತದೆ.
ಸ್ತುತ, ಇಂಡಿಯಾ ಪೋಸ್ಟ್ ಟರ್ಮ್ ಡೆಪಾಸಿಟ್‌ಗಳ ಮೇಲೆ ಒಂದು ವರ್ಷಕ್ಕೆ ಶೇಕಡ 6.9 ಆಗಿದೆ. ಎರಡು ವರ್ಷಕ್ಕೆ ಶೇಕಡ 7, ಮೂರು ವರ್ಷಗಳಿಗೆ ಶೇಕಡ 7.1 ಮತ್ತು ಐದು ವರ್ಷಕ್ಕೆ ಶೇಕಡ 7.5 ಬಡ್ಡಿದರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ವಿಭಿನ್ನ ಅವಧಿಗಳಲ್ಲಿ 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಲು ಬಯಸಿದರೆ, ನಂತರ ಆದಾಯವನ್ನು ಸುಲಭವಾಗಿ ಯಾವುದೇ ಅಪಾಯವಿಲ್ಲದೆ ಪಡೆಯಬಹುದಾಗಿದೆ.
1 ವರ್ಷಕ್ಕೆ ಟೈಮ್ ಡೆಪಾಸಿಟ್ ರಿಟರ್ನ್
ನೀವು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್‌ನಲ್ಲಿ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಂತರ ಗ್ರೋ ಕ್ಯಾಲ್ಕುಲೇಟರ್ ಪ್ರಕಾರ ಶೇಕಡ 6.9 ಬಡ್ಡಿ ದರದಲ್ಲಿ, ನೀವು ಮೆಚ್ಯೂರಿಟಿಯಲ್ಲಿ ಒಟ್ಟು 1,07,081 ರೂಪಾಯಿಗಳನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ ಬಡ್ಡಿ ಮೊತ್ತವಾಗಿ 7,081 ರೂಪಾಯಿ ಲಭ್ಯವಾಗುತ್ತದೆ.
2 ವರ್ಷಗಳ ಕಾಲ ಠೇವಣಿಯ ಮೇಲೆ ರಿಟರ್ನ್
ಎರಡು ವರ್ಷಗಳ ಅವಧಿಯ ಠೇವಣಿ ಯೋಜನೆಯಲ್ಲಿ ನೀವು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದಾಗ, ಕ್ಯಾಲ್ಕುಲೇಟರ್ ಪ್ರಕಾರ, ನೀವು ಮೆಚ್ಯೂರಿಟಿಯಲ್ಲಿ ಶೇಕಡ 7 ಬಡ್ಡಿ ದರದಲ್ಲಿ ಒಟ್ಟು 1,14,888 ರೂಪಾಯಿಯನ್ನು ಪಡೆಯುತ್ತೀರಿ. ಈ ಒಟ್ಟು ಮೊತ್ತದಲ್ಲಿ, ನೀವು 14,888 ರೂಪಾಯಿ ಬಡ್ಡಿ ಮೊತ್ತವಾಗಿ ಪಡೆಯುತ್ತೀರಿ.
3 ವರ್ಷಗಳ ಕಾಲ ಠೇವಣಿಯ ಮೇಲೆ ರಿಟರ್ನ್
3 ವರ್ಷಗಳ ಪೋಸ್ಟ್ ಆಫೀಸ್ ಟೈಮ್ ಠೇವಣಿ ಅಥವಾ ಎಫ್‌ಡಿ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ, ನೀವು ಮೆಚ್ಯೂರಿಟಿಯಲ್ಲಿ ಶೇಕಡ 7.1 ಬಡ್ಡಿದರದಲ್ಲಿ ಒಟ್ಟು 1,23,508 ರೂಪಾಯಿ ಪಡೆಯುತ್ತೀರಿ. ಇದರಲ್ಲಿ ನೀವು 23,508 ರೂಪಾಯಿಗಳನ್ನು ರಿಟರ್ನ್ ಅಥವಾ ಬಡ್ಡಿಯಾಗಿ ಪಡೆಯುತ್ತೀರಿ.
5 ವರ್ಷಗಳ ಕಾಲ ಠೇವಣಿಯ ಮೇಲೆ ರಿಟರ್ನ್
5 ವರ್ಷಗಳ ಕಾಲ ಈ ದೀರ್ಘಾವಧಿಯ ಅವಧಿಯ ಠೇವಣಿ ಯೋಜನೆಯಲ್ಲಿ ನೀವು ಇಂದು 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ನಂತರ ಶೇಡಕ 7.5 ಬಡ್ಡಿ ದರ ಪಡೆಯುತ್ತೀರಿ. ಗ್ರೋ ಕಲೆಕ್ಟರ್ ಪ್ರಕಾರ, ನೀವು ಮೆಚ್ಯೂರಿಟಿ ಸಂದರ್ಭದಲ್ಲಿ 1,44,995 ರೂಪಾಯಿ ಪಡೆಯುತ್ತೀರಿ. ಅಂದರೆ ನಿಮಗೆ ಬಡ್ಡಿಯಾಗಿಯೇ 44,995 ರೂಪಾಯಿ ಲಭ್ಯವಾಗುತ್ತದೆ.


Click it and Unblock the Notifications