ನೀವು ಸುರಕ್ಷಿತ ಹಾಗೂ ಉತ್ತಮ ರಿಟರ್ನ್ ನೀಡುವ ಹೂಡಿಕೆಯನ್ನು ಮಾಡಲು ಯೋಚನೆಯನ್ನು ಹೊಂದಿದ್ದರೆ, ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿ ಯೋಜನೆಯಾಗಿದೆ. ನೀವು ಅಂಚೆ ಕಚೇರಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಕಡಿಮೆ ಸಮಯದಲ್ಲಿ ಉತ್ತಮ ಪ್ರಯೋಜನವನ್ನು ಪಡೆಯುವ ಅವಕಾಶವಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಈ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ.6.6ರಿಂದ ಶೇ.6.7ಕ್ಕೆ ಹೆಚ್ಚಿಸಿದೆ. ಇದರಿಂದಾಗಿ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಯೋಜನೆಯ ಬಗ್ಗೆ ನಾವಿಲ್ಲಿ ವಿವರವನ್ನು ನೀಡಿದ್ದೇವೆ ಮುಂದೆ ಓದಿ....

ಈ ಯೋಜನೆಯಲ್ಲಿ ಮಾಸಿಕ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಆದಾಯವನ್ನು ಗಳಿಸಬಹುದು. ಇಲ್ಲಿ ಹೂಡಿದ ಹಣವೆಲ್ಲ ಸುರಕ್ಷಿತವಾಗಿ ಉಳಿಯುತ್ತದೆ. ಈ ಯೋಜನೆಯಲ್ಲಿ, 5 ವರ್ಷಗಳ ನಂತರ ಪೂರ್ಣ ಹಣವನ್ನು ನೀವು ಪಡೆಯಲು ಸಾಧ್ಯವಾಗುತ್ತದೆ. ಜಂಟಿ ಮತ್ತು ಏಕ ಖಾತೆಗಳನ್ನು ತೆರೆಯುವ ಸೌಲಭ್ಯವನ್ನು ಅಂಚೆ ಇಲಾಖೆ ನೀಡಿದೆ. ನಿವೃತ್ತಿಯ ನಂತರ ಈ ಯೋಜನೆಯಿಂದ ಪಿಂಚಣಿ ಪಡೆಯುವ ಹಲವಾರು ಜನರು ಇದ್ದಾರೆ.
ಪ್ರತಿ ತಿಂಗಳು ಇಷ್ಟು ಆದಾಯ ಬರಲಿದೆ ನೋಡಿ
ಅಂಚೆ ಕಛೇರಿಯ ಈ ಯೋಜನೆಯಲ್ಲಿ ಬಡ್ಡಿದರವನ್ನು ಶೇಕಡ 6.7 ಕ್ಕೆ ಏರಿಕೆ ಮಾಡಲಾಗಿದೆ. ನೀವು ಈ ಯೋಜನೆಯಲ್ಲಿ ಒಂದು ಖಾತೆಯಲ್ಲಿ ಗರಿಷ್ಠವಾಗಿ 4.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಅದೇ ಸಮಯದಲ್ಲಿ, ನೀವು ಜಂಟಿ ಖಾತೆಯಲ್ಲಿ ನೀವು 9 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡುವ ಅವಕಾಶವಿದೆ.
ಈ ಯೋಜನೆಯಲ್ಲಿ ನೀವು 9 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ಶೇಕಡ 6.7 ರಷ್ಟು ಬಡ್ಡಿದರದ ಪ್ರಕಾರವಾಗಿ, 1 ವರ್ಷದ ಒಟ್ಟು ಬಡ್ಡಿದರವು 60300 ರೂಪಾಯಿ ಆಗಿರುತ್ತದೆ. ಈ ರೀತಿಯಲ್ಲಿ ನೀವು ಪ್ರತಿ ತಿಂಗಳು 5025 ರೂಪಾಯಿ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, 4.5 ಲಕ್ಷ ರೂಪಾಯಿಯನ್ನು ನೀವು ಡೆಪಾಸಿಟ್ ಮಾಡಿದರೆ, ಪ್ರತಿ ತಿಂಗಳು 2513 ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.
ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದೆ?
ಈಗ ಬರುವ ಪ್ರಶ್ನೆ ನೀವು ಮಗುವಿನ ಹೆಸರಿನಲ್ಲಿಯೂ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆಯೇ ಎಂಬುವುದು ಆಗಿದೆ. ಅದಕ್ಕೆ ಉತ್ತರ ಹೌದು. ಈ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿಯೂ ತೆರೆಯಬಹುದು. ನಿಮ್ಮ ಮಗುವಿನ ಹೆಸರಿನಲ್ಲಿ ನೀವು ಈ ಖಾತೆಯನ್ನು ತೆರೆದರೆ, ನಂತರ ನೀವು ಪ್ರತಿ ತಿಂಗಳು ಪಡೆಯುವ ಬಡ್ಡಿಯನ್ನು, ನೀವು ಮಗುವಿನ ಶಾಲಾ ಶುಲ್ಕವನ್ನು ಜಮೆ ಮಾಡಲು ಬಳಕೆ ಮಾಡಬಹುದು.
ಅಂಚೆ ಕಚೇರಿ ಖಾತೆಯನ್ನು ಹೇಗೆ ತೆರೆಯುವುದು?
ನೀವು ಅಂಚೆ ಕಚೇರಿಯ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಅದಕ್ಕಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಇರಬೇಕು. ಅಂಚೆ ಕಚೇರಿ ಖಾತೆಯನ್ನು ಹೊಂದಬೇಕಾದರೆ, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್, ಮತದಾರರ ಕಾರ್ಡ್, ಡೈವಿಂಗ್ ಲೈಸೆನ್ಸ್ ಮುಂತಾದ ವಿಳಾಸ ಪುರಾವೆಗಳನ್ನು ಹೊಂದಿರಬೇಕು. ಈ ದಾಖಲೆಗಳೊಂದಿಗೆ ನೀವು ಪಿಒಎಂಐಎಸ್ ಫಾರ್ಮ್ ಅನ್ನು ಭರ್ತಿ ಮಾಡಿ, ಅಂಚೆ ಕಚೇರಿಗೆ ನೀಡಬೇಕು.
ನೀವು ಈ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿಯೂ ಡೌನ್‌ಲೋಡ್ ಮಾಡಬಹುದು. ಫಾರ್ಮ್ ಅನ್ನು ಭರ್ತಿ ಮಾಡುವ ಜೊತೆಗೆ, ನಾಮಿನಿಯ ಹೆಸರನ್ನು ಸಹ ನೀಡಬೇಕು. ಖಾತೆಯನ್ನು ತೆರೆಯುವಾಗ, ಚೆಕ್ ಮೂಲಕ 1000 ರೂಪಾಯಿ ನಗದನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.


Click it and Unblock the Notifications