ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ನಾವು ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಎಂದು ನೋಡುತ್ತೇವೆ. ಹಾಗಿರುವಾಗ ನಮಗೆ ಅಂಚೆ ಕಚೇರಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಅಂಚೆ ಕಚೇರಿ ಹೂಡಿಕೆಯು ಮಧ್ಯಮ ವರ್ಗದ ಕುಟುಂಬಕ್ಕೆ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಯೋಜನೆಯಲ್ಲಿ ಗ್ಯಾರಂಟಿ ರಿಟರ್ನ್ ಇದೆ. ಸುರಕ್ಷಿತ ಹೂಡಿಕೆ ಆಯ್ಕೆಯು ಕೂಡಾ ಇದೆ.
ಅಂಚೆ ಕಚೇರಿಯಲ್ಲಿ ಹಲವಾರು ಉತ್ತಮ ಹೂಡಿಕೆ ಆಯ್ಕೆಗಳು ಇದೆ. ಪ್ರತಿ ತಿಂಗಳು ನೀವು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿ, ವರ್ಷದಲ್ಲೇ ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಆ ಪೈಕಿ ಒಂದು ಉತ್ತಮ ಆಯ್ಕೆ ರೆಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಆಗಿದೆ. ನೀವು ಈ ಯೋಜನೆಯಲ್ಲಿ ಕನಿಷ್ಠವಾಗಿ ಬರೀ ನೂರು ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ರೆಕ್ಯೂರಿಂಗ್ ಡೆಪಾಸಿಟ್ ಬಡ್ಡಿದರ ಏರಿಸಿದ ಕೇಂದ್ರ
ಕೇಂದ್ರ ಸರ್ಕಾರವು ಇತ್ತೀಚೆಗೆ ರೆಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಅನ್ನು ಶೇಕಡ 6.2 ರಿಂದ ಶೇಕಡ 6.5ಕ್ಕೆ ಏರಿಕೆಯಾಗಿದೆ. ಹೂಡಿಕೆಯ ಪ್ರಾರಂಭದಲ್ಲಿ ರೆಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಗೆ ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟೇ ಮೊತ್ತವನ್ನು ನೀವು ಮೆಚ್ಯೂರಿಟಿವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನೀವು ಆರ್‌ಡಿಎಯಲ್ಲಿ ಹೂಡಿಕೆ ಮಾಡುವುದರಿಂದ ಎಷ್ಟು ಆದಾಯವನ್ನು ಗಳಿಸಲು ಸಾಧ್ಯವಿದೆ ಎಂಬ ಬಗ್ಗೆ ಈ ಕೆಳಗೆ ವಿವರಣೆ ನೀಡಿದ್ದೇವೆ.
ಹೂಡಿಕೆ ಆಯ್ಕೆಗಳು, ಲಭಿಸುವ ರಿಟರ್ನ್ ವಿವರ
ನೀವು ಆರ್‌ಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 1,41,983 ರೂಪಾಯಿ ಪಡೆಯಬಹುದಾಗಿದೆ. ನೀವು 2000 ರೂಪಾಯಿಯಂತೆ ಮಾಸಿಕ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 24 ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಅಂದರೆ ದಿನಕ್ಕೆ 66 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಐದು ವರ್ಷದ ಅವಧಿಗೆ 1,20,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ 21,983 ರೂಪಾಯಿ ಬಡ್ಡಿದರವನ್ನು ನೀಡಬೇಕಾಗುತ್ತದೆ. ಮೆಚ್ಯೂರಿಟಿ ವೇಳೆ ಒಟ್ಟಾಗಿ ನಿಮಗೆ 1,41,983 ರೂಪಾಯಿ ಲಭ್ಯವಾಗುತ್ತದೆ.
ಇನ್ನೊಂದೆಡೆ ಮಾಸಿಕವಾಗಿ ನೀವು 4 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ನೀವು ಮೆಚ್ಯೂರಿಟಿ ವೇಳೆ 2,83,968 ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ನೀವು ಮಾಸಿಕವಾಗಿ ನಾಲ್ಕು ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 48 ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಅಂದರೆ ದಿನಕ್ಕೆ 133 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಐದು ವರ್ಷಗಳ ಅವಧಿಯಲ್ಲಿ 1,20,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ 43,968 ರೂಪಾಯಿ ಬಡ್ಡಿದರ ಲಭ್ಯವಾಗುತ್ತದೆ. ಅಂದರೆ ಮೆಚ್ಯೂರಿಟಿ ವೇಳೆ 2,83,968 ರೂಪಾಯಿ ಲಭ್ಯವಾಗುತ್ತದೆ.
ಇಂಡಿಯಾ ಪೋಸ್ಟ್ ಭಾರತದಲ್ಲಿ ಸರ್ಕಾರ- ಬೆಂಬಲಿತ, ನಿರ್ವಹಣೆ ಮಾಡುವ ಅಂಚೆ ವ್ಯವಸ್ಥೆಯಾಗಿದೆ. ಸಂವಹನ ಸಚಿವಾಲಯದ ಅಡಿಯಲ್ಲಿ ಅಂಚೆ ಇಲಾಖೆ ಬರುತ್ತದೆ. ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಅಥವಾ ಅಂಚೆ ಕಚೇರಿ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ವ್ಯಾಪಕವಾದ ಅಂಚೆ ವ್ಯವಸ್ಥೆಯಾಗಿದೆ. ವಾರೆನ್ ಹೇಸ್ಟಿಂಗ್ಸ್ ಈಸ್ಟ್ ಇಂಡಿಯಾ ಕಂಪನಿಯ ಅಡಿಯಲ್ಲಿ 1766 ರಲ್ಲಿ ದೇಶದಲ್ಲಿ ಅಂಚೆ ಸೇವೆಯನ್ನು ಪ್ರಾರಂಭಿಸಿದರು.
1854 ರಲ್ಲಿ ಲಾರ್ಡ್ ಡಾಲ್ಹೌಸಿ ಇದನ್ನು ಸೇವೆಯಾಗಿ ಬದಲಾವಣೆ ಮಾಡಿದರು. 2013 ರಲ್ಲಿ, ಹೊಸ ಬ್ಯಾಂಕಿಂಗ್ ಪರವಾನಗಿಗಳಿಗಾಗಿ ಆರ್‌ಬಿಐ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ನಂತರ ಭಾರತೀಯ ಅಂಚೆ ಸೇವೆಯು ಬ್ಯಾಂಕಿಂಗ್ ಉದ್ಯಮಕ್ಕೆ ಪ್ರವೇಶಿಸಿದೆ. ಪೋಸ್ಟ್ ಬ್ಯಾಂಕ್ ಆಫ್ ಇಂಡಿಯಾ ಅದಾದ ಬಳಿಕ ಆರಂಭ ಮಾಡಲಾಗಿದೆ.


Click it and Unblock the Notifications