ಹೂಡಿಕೆ ಆಯ್ಕೆಯನ್ನು ನಾವು ಮಾಡುವಾಗ ಎಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಸಿಗುತ್ತದೆ ಮತ್ತು ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಎಂದು ನೋಡುತ್ತೇವೆ. ಅಂತಹ ಸಂದರ್ಭದಲ್ಲಿ ನಮ್ಮ ಮುಂದೆ ಇರುವ ಉತ್ತಮ ಆಯ್ಕೆ ಅಂಚೆ ಕಚೇರಿ ಯೋಜನೆಯಾಗಿದೆ. ಎಲ್ಲಾ ವಯಸ್ಸಿನವರಿಗೂ ಕೂಡಾ ಅಂಚೆ ಕಚೇರಿ ಯೋಜನೆಗಳು ಇದೆ.
ಈ ಯೋಜನೆಗಳು ಸರ್ಕಾರದ ಬೆಂಬಲದೊಂದಿಗೆ ಇರುವುದರಿಂದಾಗಿ ನಾವು ಹೂಡಿಕೆ ಮಾಡಿದಾಗ ಬಳಿಕ ಚಿಂತೆ ಮಾಡಬೇಕಾಗಿಲ್ಲ. ಈ ಅಂಚೆ ಕಚೇರಿ ಯೋಜನೆಯಲ್ಲಿ ಖಾತರಿಯ ಆದಾಯ ಲಭ್ಯವಾಗುತ್ತದೆ. ನಿಮಗೆ ನಷ್ಟವಾಗುವ ಅಪಾಯವಿಲ್ಲದೆಯೇ ಸ್ಥಿರವಾಗಿ ಆದಾಯವು ಬೆಳವಣಿಗೆಯಾಗುತ್ತದೆ.

ಜುಲೈ 1 ರಿಂದ, ಸರ್ಕಾರವು ಅಂಚೆ ಕಚೇರಿ ಆರ್‌ಡಿಗೆ ಬಡ್ಡಿದರವನ್ನು ಶೇಕಡ 6.2 ರಿಂದ ಶೇಕಡ 6.5 ಕ್ಕೆ ಏರಿಕೆಯಾಗಿದೆ. 5 ವರ್ಷಗಳ ಅವಧಿಯ ಈ ಆರ್‌ಡಿ ಯೋಜನೆಯನ್ನು ಕೇವಲ 100 ರೂಪಾಯಿಗಳಲ್ಲಿ ಪ್ರಾರಂಭಿಸಬಹುದಾಗಿದೆ. ಹೊಸ ಬಡ್ಡಿ ದರದ ಪ್ರಕಾರ 2000 ರೂಪಾಯಿ, 3000 ರೂಪಾಯಿ, 4000 ರೂಪಾಯಿ ಮತ್ತು 5000 ರೂಪಾಯಿ ಆರ್‌ಡಿ ಮೇಲೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ....
1. 2000 ರೂಪಾಯಿಗಳ ಆರ್‌ಡಿ
2000 ರೂಪಾಯಿ ಡೆಪಾಸಿಟ್‌ನೊಂದಿಗೆ ಮಾಸಿಕ ಆರ್‌ಡಿಯನ್ನು ಪ್ರಾರಂಭಿಸುವುದರಿಂದ ನೀವು ವಾರ್ಷಿಕವಾಗಿ 24,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. 5 ವರ್ಷಗಳಲ್ಲಿ ಒಟ್ಟು 1,20,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಶೇಕಡ 6.5 ರಷ್ಟು ಬಡ್ಡಿದರದ ಮೂಲಕ ಈ ಅವಧಿಯಲ್ಲಿ 21,983 ರೂಪಾಯಿ ಬಡ್ಡಿದರವನ್ನು ಪಡೆಯಬಹುದು. ಮೆಚ್ಯೂರಿಟಿ ವೇಳೆ ಒಟ್ಟಾಗಿ 1,41,983 ರೂಪಾಯಿ ಮೊತ್ತವನ್ನು ಪಡೆಯಬಹುದು.
2. 3000 ರೂಪಾಯಿಗಳ ಆರ್‌ಡಿ
ಅಂಚೆ ಕಚೇರಿ ಆರ್‌ಡಿಗಾಗಿ ನೀವು ಮಾಸಿಕವಾಗಿ 3000 ರೂಪಾಯಿ ಡೆಪಾಸಿಟ್ ಮಾಡಿದರೆ, ವಾರ್ಷಿಕವಾಗಿ 36,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. 5 ವರ್ಷಗಳ ಅವಧಿಯಲ್ಲಿ ನೀವು ಒಟ್ಟಾಗಿ 1,80,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಈ ಅವಧಿಯಲ್ಲಿ ಒಟ್ಟಾಗಿ 32,972 ರೂಪಾಯಿ ಬಡ್ಡಿದರವನ್ನು ಪಡೆಯಬಹುದಾಗಿದೆ. ಒಟ್ಟು ಮೆಚ್ಯೂರಿಟಿ ಮೊತ್ತವು 2,12,972 ರೂಪಾಯಿ ಆಗಿರುತ್ತದೆ.
3. 4000 ರೂಪಾಯಿಗಳ ಆರ್‌ಡಿ
ಅಂಚೆ ಕಚೇರಿ ಆರ್‌ಡಿಯಲ್ಲಿ ಮಾಸಿಕವಾಗಿ 4000 ರೂಪಾಯಿ ಡೆಪಾಸಿಟ್ ಮಾಡಿದರೆ, ವಾರ್ಷಿಕವಾಗಿ ಒಟ್ಟಾಗಿ 48,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ನೀವು 2,40,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಈ ಮೊತ್ತದ ಮೇಲೆ ಒಟ್ಟಾಗಿ 43,968 ರೂಪಾಯಿ ಬಡ್ಡಿದರ ಲಭ್ಯವಾಗುತ್ತದೆ. ಒಟ್ಟಾರೆಯಾಗಿ, ಮೆಚ್ಯೂರಿಟಿ ಸಮಯದಲ್ಲಿ ಆರಂಭಿಕ ಡೆಪಾಸಿಟ್, ಬಡ್ಡಿದರ ಸೇರಿ 2,83,968 ರೂಪಾಯಿ ಆಗಿದೆ.
4. 5000 ರೂಪಾಯಿಗಳ ಆರ್‌ಡಿ
ಅಂಚೆ ಕಚೇರಿಯ ಈ ಯೋಜನೆಯಲ್ಲಿ 5000 ರೂಪಾಯಿಗಳ ಮಾಸಿಕ ಡೆಪಾಸಿಟ್‌ನೊಂದಿಗೆ ವಾರ್ಷಿಕವಾಗಿ ನೀವು 60,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಒಟ್ಟು 5 ವರ್ಷಗಳಲ್ಲಿ ನೀವು 3,00,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಈ ಅವಧಿಯ ಕೊನೆಯಲ್ಲಿ, ನೀವು 54,954 ರೂಪಾಯಿ ಬಡ್ಡಿದರವನ್ನು ಸಂಗ್ರಹಿಸಿದಂತೆ ಆಗುತ್ತದೆ. ನೀವು 5 ವರ್ಷಗಳ ನಂತರ ಒಟ್ಟಾಗಿ 3,54,954 ರೂಪಾಯಿ ಪಡೆಯಬಹುದು.


Click it and Unblock the Notifications