ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಯಾವ ಹೂಡಿಕೆ ಅತೀ ಸುರಕ್ಷಿತ ಹೂಡಿಕೆ ಎಂದು ನೋಡುತ್ತೇವೆ. ಅಂತಹ ಸುರಕ್ಷಿತ ಹೂಡಿಕೆಗಳ ಆಯ್ಕೆಯ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಬರುವ ಆಯ್ಕೆಗಳು ಭಾರತೀಯ ಜೀವ ವಿಮಾ ನಿಗಮ ಯೋಜನೆ ಹೂಡಿಕೆ ಮತ್ತು ಅಂಚೆ ಕಚೇರಿ ಯೋಜನೆಯಲ್ಲಿನ ಹೂಡಿಕೆಯಾಗಿದೆ. ಅಂಚೆ ಕಚೇರಯಲ್ಲಿ ಮಾಡಿದ ಹೂಡಿಕೆ ಎಂದಿಗೂ ಸುರಕ್ಷಿತವಾಗಿದೆ.
ನಾವು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವು ಸುರಕ್ಷಿತವಾಗಿರುವುದು ಮಾತ್ರವಲ್ಲದೆ, ನಾವು ಉತ್ತಮ ರಿಟರ್ನ್ ಅನ್ನು ಪಡೆಯಲು ಕೂಡಾ ಸಾಧ್ಯವಾಗುತ್ತದೆ. ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಈ ಪೈಕಿ ರೆಕ್ಯೂರಿಂಗ್ ಡೆಪಾಸಿಟ್ ಕೂಡಾ ಒಂದಾಗಿದೆ. ಬ್ಯಾಂಕ್‌ನ ಎಫ್‌ಡಿ, ಆರ್‌ಡಿಗಳಿಗಿಂತ ಭಿನ್ನವಾದ, ಅಧಿಕ ರಿಟರ್ನ್ ನೀಡುವ ಯೋಜನೆ ಇದಾಗಿದೆ.

ಅಂಚೆ ಕಚೇರಿಯ ಈ ಯೋಜನೆ ಬಗ್ಗೆ ತಿಳಿಯಿರಿ
10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯಾದರೂ ಕೂಡಾ ಅಂಚೆ ಕಚೇರಿ ಆರ್‌ಡಿ ಖಾತೆಯನ್ನು ತೆರೆಯಬಹುದಾಗಿದೆ. ಹಾಗೆಯೇ ಇದು ಅತೀ ಸರಳವಾಗಿದೆ. ಹತ್ತು ತಿಂಗಳುಗಳ ಅವಧಿಗೆ ಮಾಸಿಕವಾಗಿ ಹೂಡಿಕೆಯನ್ನು ಡೆಪಾಸಿಟ್‌ದಾರರು ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಮಾಸಿಕ ಡೆಪಾಸಿಟ್ 100 ರೂಪಾಯಿ ಆಗಿದೆ. ಈ ಅಂಚೆ ಕಚೇರಿ ಆರ್‌ಡಿ ಯೋಜನೆಗೆ ಶೇಕಡ 5.8ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದಲ್ಲಿ ಈ ಬಡ್ಡಿದರವನ್ನು ಪರಿಷ್ಕರಿಸುತ್ತದೆ.
ಯಾವುದೆ ವ್ಯಕ್ತಿಯು ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಬೇಕು ಎಂದು ಬಯಸುವುದಾದರೆ ಅವರಿಗೆ ಈ ಅಂಚೆ ಕಚೇರಿ ಆರ್‌ಡಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನಾವು ಮಾಡಿದ ಹೂಡಿಕೆಯು ಸುರಕ್ಷಿತ ಹಾಗೆಯೇ ಉತ್ತಮ ಬಡ್ಡಿದರವು ಕೂಡಾ ಲಭ್ಯವಾಗುತ್ತದೆ. ಇತರೆ ಹೂಡಿಕೆಗಳಿಗೆ ಹೋಲಿಕೆ ಮಾಡಿದಾಗ ಈ ಹೂಡಿಕೆ ಕಡಿಮೆ ಅಪಾಯಕಾರಿಯಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಿದ ಐದು ವರ್ಷದಲ್ಲಿ ಅಥವಾ 60 ತಿಂಗಳ ಅವಧಿಯಲ್ಲಿ ಹೂಡಿಕೆಯು ಮೆಚ್ಯೂರಿಟಿ ಹೊಂದುತ್ತದೆ. ಈ ಖಾತೆಯನ್ನು ತೆರೆದ ಬಳಿಕ ಹೂಡಿಕೆದಾರರು ತಮ್ಮ ಈ ಅಂಚೆ ಕಚೇರಿ ಆರ್‌ಡಿ ಖಾತೆಯಿಂದ ಶೇಕಡ 50ರಷ್ಟು ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಆದರೆ ಹೂಡಿಕೆಯನ್ನು ಆರಂಭ ಮಾಡಿದ ಒಂದು ವರ್ಷದ ಬಳಿಕ ಮಾತ್ರವೇ ಶೇಕಡ 50ರಷ್ಟು ಹೂಡಿಕೆಯನ್ನು ವಿತ್‌ಡ್ರಾ ಮಾಡುವ ಅವಕಾಶವಿರುವುದು.
16 ಲಕ್ಷ ರೂಪಾಯಿ ರಿಟರ್ನ್ ಪಡೆಯುವುದು ಹೇಗೆ?
ಪ್ರಸ್ತುತ ಬಡ್ಡಿದರವು ಶೇಕಡ 5.8 ಆಗಿದ್ದು, ಬಡ್ಡಿದರದೊಂದಿಗೆ ಸೇರ್ಪಡೆಯಾಗಿ ನೀವು ಗರಿಷ್ಠ 16 ಲಕ್ಷ ರೂಪಾಯಿಯನ್ನು ರಿಟರ್ನ್ ಪಡೆಯಬಹುದಾಗಿದೆ. ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಅಂದರೆ ಪ್ರತಿ ದಿನ 333 ರೂಪಾಯಿ ಹೂಡಿಕೆ ಮಾಡಿ ಅಂತಿಮವಾಗಿ ಮೆಚ್ಯೂರಿಟಿ ವೇಳೆ 16 ಲಕ್ಷ ರೂಪಾಯಿಗೂ ಅಧಿಕ ರಿಟರ್ನ್ ಪಡೆಯಬಹುದು.
ಈ 16 ಲಕ್ಷ ರೂಪಾಯಿಯಲ್ಲಿ ನೀವು ಮಾಡಿರುವ ಹೂಡಿಕೆ 12 ಲಕ್ಷ ರೂಪಾಯಿ ಆಗಿರುತ್ತದೆ. ಉಳಿದಂತೆ ಬಡ್ಡಿದರವಾಗಿ ನಿಮಗೆ 4. 26 ಲಕ್ಷ ರೂಪಾಯಿ ಲಭ್ಯವಾಗಲಿದೆ. ಅಂದರೆ ಒಟ್ಟಾಗಿ 16. 26 ಲಕ್ಷ ರೂಪಾಯಿ ಮೆಚ್ಯೂರಿಟಿ ವೇಳೆ ಲಭ್ಯವಾಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಜಮೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವನ್ನು ನೀವು ಉಳಿತಾಯ ಮಾಡಲು ಅಂತಿಮವಾಗಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications