ಇತ್ತೀಚೆಗಷ್ಟೇ ಆರ್‌ಬಿಐ ರೆಪೋ ದರ ಕಡಿತಗೊಳಿಸಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಈ ಬೆನ್ನಲ್ಲೇ ದೇಶದ ಹಲವು ಬ್ಯಾಂಕ್‌ಗಳು ಈಗಾಗಲೇ ಸಾಲ, ಡೆಪಾಸಿಟ್‌ಗಳ ಮೇಲಿದ್ದ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಇದೀಗ ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ ತನ್ನ ₹3 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿದೆ ಎಂದು ವರದಿಯಾಗಿದೆ. ಈ ಪರಿಷ್ಕೃತ ದರಗಳು ಇಂದಿನಿಂದ ಅಂದರೆ ಡಿಸೆಂಬರ್ 17, 2025 ರಿಂದ ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರ ಕಡಿತಗೊಳಿಸಿದ ನಂತರ, ಹಲವು ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಇಳಿಸಿದ್ದು, ಇದೀಗ ಎಚ್‌ಡಿಎಫ್‌ಸಿ ಈ ನಿರ್ಧಾರಕ್ಕೆ ಮುಂದಾಗಿದೆ.

ಹೆಚ್‌ಡಿಎಫ್‌ಸಿ ಬಡ್ಡಿದರ ಕಡಿತ
ಹೊಸ ವೇಳಾಪಟ್ಟಿಯ ಪ್ರಕಾರ, ಠೇವಣಿಯ ಅವಧಿಗೆ ತಕ್ಕಂತೆ ಸ್ಥಿರ ಠೇವಣಿ ಬಡ್ಡಿದರ ನಿರ್ಧಾರವಾಗುತ್ತದೆ. ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ 2.75% ರಿಂದ 6.60% ರಷ್ಟು ಬಡ್ಡಿ ಲಭ್ಯವಿದೆ. ಹಿರಿಯ ನಾಗರಿಕರಿಗೆ ಆಯ್ದ ಅವಧಿಗಳಿಗೆ ತಕ್ಕಂತೆ ವಾರ್ಷಿಕ 7.10% ವರೆಗೆ ಹೆಚ್ಚಿನ ಆದಾಯವನ್ನು ನೀಡಲಿದೆ ಎಂದು ವರದಿಯಾಗಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿಷ್ಕೃತ ದರಗಳು ₹3 ಕೋಟಿಗಿಂತ ಕಡಿಮೆ ಮೊತ್ತದ ದೇಶೀಯ, ಎನ್‌ಆರ್‌ಇ, ಮತ್ತು ಎನ್‌ಆರ್‌ಒ ಎಫ್‌ಡಿಗಳಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗಳಿಗೆ ಅನ್ವಯವಾಗುತ್ತದೆ. ಸಣ್ಣ ಅವಧಿಯ (7-29 ದಿನಗಳು) ಠೇವಣಿಗಳು ಸುಮಾರು 2.75% ಬಡ್ಡಿ ಪಡೆದರೆ, 18-21 ತಿಂಗಳಂತಹ ಮಧ್ಯಮಾವಧಿಯ ಠೇವಣಿಗಳು ಸಾಮಾನ್ಯ ಗ್ರಾಹಕರಿಗೆ ಸುಮಾರು 6.60% ವರೆಗೆ ಬಡ್ಡಿದರವನ್ನು ನೀಡುತ್ತದೆ.
ಸ್ಥಿರ ಠೇವಣಿಯ ಬಡ್ಡಿ ದರಗಳು:
| ಅವಧಿ | ಸಾಮಾನ್ಯ ಜನರಿಗೆ | ಹಿರಿಯ ನಾಗರಿಕರಿಗೆ |
| 7-14 ದಿನಗಳು | 2.75% | 3.25% |
| 15-29 ದಿನಗಳು | 2.75% | 3.25% |
| 30-45 ದಿನಗಳು | 3.25% | 3.75% |
| 46-60 ದಿನಗಳು | 4.25% | 4.75% |
| 61-89 ದಿನಗಳು | 4.25% | 4.75% |
| 90 ದಿನಗಳಿಂದ 6 ತಿಂಗಳು | 4.25% | 4.75% |
| 6 ತಿಂಗಳು 1 ದಿನ- 1 ವರ್ಷ | 5.50% | 6.00% |
| 1 ವರ್ಷ-15 ತಿಂಗಳು | 5.75% | 6.25% |
| 15-18 ತಿಂಗಳು | 6.25% | 6.85% |
| 18-21 ತಿಂಗಳು | 6.35% | 6.95% |
| 21 ತಿಂಗಳು-2 ವರ್ಷ | 6.45% | 6.95% |
| 2 ವರ್ಷ 1 ದಿನ - 2 ವರ್ಷ 11 ತಿಂಗಳು | 6.45% | 6.95% |
| 2 ವರ್ಷ 11 ತಿಂಗಳು | 6.45% | 6.95% |
| 2 ವರ್ಷ 11 ತಿಂಗಳು 1 ದಿನ - 3 ವರ್ಷ | 6.45% | 6.95% |
| 3 ವರ್ಷ 1 ದಿನ - 4 ವರ್ಷ 7 ತಿಂಗಳು | 6.40% | 6.90% |
| 4 ವರ್ಷ 7 ತಿಂಗಳು | 6.40% | 6.90% |
| 4 ವರ್ಷ 7 ತಿಂಗಳು 1 ದಿನ- 5 ವರ್ಷ | 6.40% | 6.90% |
| 5 ವರ್ಷ 1 ದಿನ - 10 ವರ್ಷ | 6.15% | 6.65% |
ಕಾರಣವೇನು?
ಈಗಾಗಲೇ ಹಲವು ಬ್ಯಾಂಕ್‌ಗಳು ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಈ FD ದರಗಳ ಈ ಬದಲಾವಣೆಯು ಡಿಸೆಂಬರ್ ಆರಂಭದಲ್ಲಿ ಆರ್‌ಬಿಐ ಪ್ರಮುಖ ರೆಪೊ ದರವನ್ನು ಕಡಿತಗೊಳಿಸಿದ ನಿರ್ಧಾರದ ನಂತರ ಬಂದಿದೆ. ಇನ್ನು ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ದೇಶದ ಅನೇಕ ಬ್ಯಾಂಕುಗಳು ತಮ್ಮ ಸಾಲ ಮತ್ತು ಠೇವಣಿಯ ಬಡ್ಡಿ ದರಗಳನ್ನು ಹೊಸ ಹಣಕಾಸು ನೀತಿಗೆ ತಕ್ಕಂತೆ ಸರಿಹೊಂದಿಸಿವೆ.
SBIನಲ್ಲೂ ಬಡ್ಡಿ ಇಳಿಕೆ!
ಆರ್‌ಬಿಐನ ನೀತಿ ನಿರ್ಧಾರದ ಬೆನ್ನಲ್ಲೇ, ದೇಶದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ತನ್ನ FD ದರಗಳನ್ನು ಕಡಿತಗೊಳಿಸಿದೆ. ಡಿಸೆಂಬರ್ 15, 2025 ರಿಂದ ಜಾರಿಗೆ ಬಂದ ಈ ಬದಲಾವಣೆಗಳು, 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯಂತಹ ಫಿಕ್ಸೆಡ್ ಡೆಪಾಸಿಡ್‌ಗಳ ಬಡ್ಡಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications