ಎಂಸಿಎಲ್‌ಆರ್ ಏರಿಸಿದ ಬಿಒಬಿ, ಓವರ್‌ಸೀಸ್ ಬ್ಯಾಂಕ್: ಸಾಲ ದುಬಾರಿ
ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತಮ್ಮ ಎಂಸಿಎಲ್‌ಆರ್ ದರಗಳನ್ನು ಶೇಕಡಾ 0.10 ರಷ್ಟು ಹೆಚ್ಚಿಸಿವೆ. ಇದು ಗ್ರಾಹಕರಿಗೆ ಸಾಲಗಳನ್ನು ದುಬಾರಿಯಾಗಿಸುತ್ತದೆ. ಈಗಾಗಲೇ ಹಲವಾರು ಬ್ಯಾಂಕ್‌ಗಳು ಎಂಸಿಎಲ್‌ಆರ್ ಅನ್ನು ಹೆಚ್ಚಳ ಮಾಡಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎಂಸಿಎಲ್‌ಆರ್ ದರಗಳನ್ನು ಎಲ್ಲ ಅವಧಿಗಳಿಗೆ ಶೇಕಡ 0.10 ರಷ್ಟು ಹೆಚ್ಚಿಸಿದೆ. ಶನಿವಾರದಿಂದ ಗ್ರಾಹಕರ ಸಾಲಗಳನ್ನು ದುಬಾರಿಯನ್ನಾಗಿ ಮಾಡಿದೆ.
ಬೆಂಚ್‌ಮಾರ್ಕ್ 1-ವರ್ಷದ ಅವಧಿಯ ಮಾರ್ಜಿನಲ್ ವೆಚ್ಚದ ನಿಧಿ ಆಧಾರಿತ ಸಾಲ ದರವನ್ನು (ಎಂಸಿಎಲ್‌ಆರ್) ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಶೇಕಡ 7.65ರಷ್ಟು ಇದ್ದ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 7.75ಕ್ಕೆ ಏರಿದೆ.

ಕಾರು, ವೈಯಕ್ತಿಕ, ಗೃಹ ಸಾಲ ದುಬಾರಿ
ಕಾರು, ವೈಯಕ್ತಿಕ ಮತ್ತು ಗೃಹ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ. ಎರಡು ಮತ್ತು ಮೂರು ವರ್ಷಗಳ ಎಂಸಿಎಲ್‌ಆರ್‌ಗಳನ್ನು ಇದೇ ಮಾರ್ಜಿನ್‌ನಿಂದ ಶೇ.7.80ಕ್ಕೆ ಹೆಚ್ಚಿಸಲಾಗಿದೆ. ಒಂದು ರಾತ್ರಿ ಅವಧಿಯ ಎಂಸಿಎಲ್‌ಆರ್ ಶೇಕಡಾ 7.05 ರಷ್ಟು ಬಡ್ಡಿದರವಿದೆ. ಒಂದು ತಿಂಗಳಿಗೆ 7.15 ಶೇಕಡಾ ಬಡ್ಡಿದರವಾಗಲಿದೆ. ಮೂರು ಮತ್ತು ಆರು ತಿಂಗಳ ಎಂಸಿಎಲ್‌ಆರ್‌ಗಳು ತಲಾ 7.70 ಪ್ರತಿಶತದಷ್ಟು ಹೆಚ್ಚಿವೆ.
ಪರಿಷ್ಕೃತ ಎಂಸಿಎಲ್‌ಆರ್‌ಗಳು ಸೆಪ್ಟೆಂಬರ್ 10, 2022 ರಿಂದ ಜಾರಿಗೆ ಬರಲಿವೆ ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಫೈಲಿಂಗ್‌ನಲ್ಲಿ ತಿಳಿಸಿದೆ. ಇನ್ನು ಬ್ಯಾಂಕ್ ಆಫ್ ಬರೋಡಾದ ಒಂದು ವರ್ಷದ ಎಂಸಿಎಲ್‌ಆರ್ ದರವು 7.70 ಪ್ರತಿಶತ ಆಗಿತ್ತು. ಆದರೆ ಪರಿಷ್ಕರಣೆ ಬಳಿಕ 7.80 ಪ್ರತಿಶತದಷ್ಟು ಆಗಿದೆ ಎಂದು ಬ್ಯಾಂಕ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಆರು ತಿಂಗಳ ಎಂಸಿಎಲ್‌ಆರ್ ಶೇ.7.55ರಿಂದ ಶೇ.7.65ಕ್ಕೆ ಏರಿಕೆಯಾಗಲಿದೆ. ಮೂರು ತಿಂಗಳ ಎಂಸಿಎಲ್ಆರ್ ಶೇಕಡಾ 7.45 ಕ್ಕೆ ಹೋಲಿಕೆ ಮಾಡಿದಾಗ ಶೇಕಡಾ 7.50 ರಷ್ಟಿರುತ್ತದೆ. ಹೊಸ ದರಗಳು ಸೆಪ್ಟೆಂಬರ್ 12, 2022 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.