ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ಮೌಲ್ಯವು 2020ರಲ್ಲಿ ಸುಮಾರು 6.2 ಬಿಲಿಯನ್ ಡಾಲರ್ ಆಗಿತ್ತು. ಆದರೆ 15 ವರ್ಷದಲ್ಲೇ ಐಪಿಎಲ್ ಡೆಕಾಕಾರ್ನ್ ಆಗಿ ಪರಿವರ್ತನೆ ಹೊಂದಿದೆ. ಐಪಿಎಲ್ ಮೌಲ್ಯ 10.0 ಬಿಲಿಯನ್ ಡಾಲರ್ ದಾಟಿದೆ. ಐಪಿಎಲ್ ವಹಿವಾಟಿನಿಂದ ಆದ ಸಂಪಾದನೆಯನ್ನು ಐಪಿಎಲ್ ಮೌಲ್ಯ ಎಂದು ಪರಿಗಣಿಸಲಾಗುತ್ತದೆ.
Beyond 22 Yards ಎಂಬ ಇದರ ವರದಿಯಲ್ಲಿ, ಡಿ ಆಂಡ್ ಪಿ ಅಡ್ವೈಸರಿ ಈ ಬಾರಿ ಐಪಿಎಲ್ ಮಿಡೀಯಾ ಹಕ್ಕನ್ನು 2023ರಿಂದ 2027ರ ಅವಧಿಗೆ ಆಕ್ಷನ್ ಮಾಡಲಾಗುತ್ತದೆ ಎಂದು ತಿಳಿಸಿದೆ. ಒಂದೇ ಸಂಸ್ಥೆಗೆ ಮಾಧ್ಯಮದ ಹಕ್ಕನ್ನು ನೀಡುವ ರೀತಿಯನ್ನು ಈ ಬಾರಿ ಬದಲಾಯಿಸಲಾಗುತ್ತದೆ. ಬೇರೆ ಬೇರೆ ಸಂಸ್ಥೆಗಳಿಗೆ ಮಾಧ್ಯಮ ಹಕ್ಕನ್ನು ಮೊದಲ ಬಾರಿಗೆ ನೀಡಲಾಗುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಮ್ಮ ಮಾಧ್ಯಮ ಹಕ್ಕನ್ನು ಈ ಹಿಂದೆ 6.2 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿತ್ತು. ಇದು 2017ರಲ್ಲಿ ಮಾಧ್ಯಮ ಹಕ್ಕು ಮಾರಾಟದ ಮೊತ್ತಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ಇನ್ನು 2022ರಲ್ಲಿ ಟೂರ್ನಮೆಂಟ್ ರೆಕಾರ್ಡ್ ಬ್ರೇಕಿಂಗ್ ಆಗಿದೆ. ಟೆಲಿವಿಜನ್ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 426 ಮಿಲಿಯನ್ ವೀವರ್‌ಶಿಪ್ ಅನ್ನು ಪಡೆದಿದೆ.
ಎರಡು ತಂಡಗಳ ಸಾಥ್
ಕಳೆದ ಐಪಿಎಲ್‌ನಲ್ಲಿ ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಒಟ್ಟಾಗಿ 1.6 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿದೆ. ಈ ತಂಡಗಳ ಕನಿಷ್ಠ ದರವು 16 ಪಟ್ಟು ಅಧಿಕವಾಗಿದೆ. ಈ ಎರಡು ತಂಡಗಳ ಸೇರ್ಪಡೆಯು ಐಪಿಎಲ್‌ನ ಮೌಲ್ಯವನ್ನು ಹೆಚ್ಚಿಸಿದ್ದು ಐಪಿಎಲ್ ಈಗ ಡೆಕಾಕಾರ್ನ್ ಸಂಸ್ಥೆಯಾಗಿದೆ. ಹಾಗೆಯೇ ಜಾಗತಿಕವಾಗಿ ಎರಡನೇ ಅತೀ ದೊಡ್ಡ ಕ್ರೀಡಾ ಲೀಗ್ ಆಗಿದೆ.
ಜಾಹೀರಾತು ದರ ಇಂದಿಗೂ ಕಡಿಮೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಸುಮಾರು 400 ಕೋಟಿ ರೂಪಾಯಿಯಲ್ಲಿ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಬೆಲೆಯು ಜಾಗತಿಕವಾಗಿ ಬೇರೆ ಎಲ್ಲ ಕ್ರಿಕೆಟ್ ಲೀಗ್‌ಗಳಿಗಿಂತ ಅಧಿಕವಾಗಿದೆ. ಇದು ಕೂಡಾ ಐಪಿಎಲ್‌ಗೆ ಅಧಿಕ ಮೌಲ್ಯವನ್ನು ಸೇರ್ಪಡೆ ಮಾಡಿದೆ. ಇನ್ನು ಜಾಗತಿಕವಾಗಿ ಬೇರೆ ಲೀಗ್‌ಗಳಿಗೆ ಹೋಲಿಸಿದರೆ ಐಪಿಎಲ್ ಜಾಹೀರಾತಿನಲ್ಲಿ ಹಿಂದುಳಿದಿದೆ.
ಉದಾಹರಣೆಗೆ, IPL 2022 ರ ಸಮಯದಲ್ಲಿ ಜಾಹೀರಾತಿಗೆ 10-ಸೆಕೆಂಡ್ ಸ್ಲಾಟ್‌ಗೆ ಸುಮಾರು 20,000 ಡಾಲರ್ ಆಗಿತ್ತು. ಆದರೆ ನ್ಯಾಷನಲ್ ಫುಟ್‌ಬಾಲ್ ಲೀಗ್, ಇಂಗ್ಲಿಷ್ ಪ್ರೀಮಿಯರ್ ಲೀಗ್ ಮತ್ತು ಮೇಜರ್ ಲೀಗ್ ಬೇಸ್‌ಬಾಲ್‌ನಲ್ಲಿ 10-ಸೆಕೆಂಡ್ ಸ್ಲಾಟ್‌ಗೆ ಸುಮಾರು 1,00,000 ಡಾಲರ್ ಆಗಿತ್ತು.
ಆಟದಲ್ಲಿ ಮಲ್ಟಿ-ಕ್ಲಬ್ ಮಾಲೀಕತ್ವ
ಐಪಿಎಲ್ ತಂಡದ ಮಾಲೀಕರು ಮಲ್ಟಿ-ಕ್ಲಬ್ ಮಾಲೀಕತ್ವದ ಮಾದರಿಯನ್ನು ಮತ್ತೆ ಆರಂಭ ಮಾಡುವ ಚಿಂತನೆಯಲ್ಲಿದ್ದಾರೆ. ಉದಾಹರಣೆಗೆ, ನೈಟ್ ರೈಡರ್ಸ್ ಗ್ರೂಪ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಹಕ್ಕನ್ನು ಹೊಂದಿದೆ. ಯುಎಇ T20 ನ ಫ್ರಾಂಚೈಸಿಯನ್ನು ಹೊಂದಿದೆ. ಮೇಜರ್ ಲೀಗ್ ಕ್ರಿಕೆಟ್‌ನ ಸಹಭಾಗಿತ್ವದಲ್ಲಿ ಯುಎಸ್‌ಎ ಲಾಸ್ ಏಂಜಲೀಸ್‌ನಲ್ಲಿ ಕ್ರಿಕೆಟ್ ಸ್ಟೇಡಿಯಂಗಳನ್ನು ನಿರ್ಮಿಸುವ ಯೋಜನೆಯನ್ನು ಸಹ ಹೊಂದಿದೆ. ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗೆ ಯುಎಇಯ ಇಂಟರ್‌ನ್ಯಾಶನಲ್ ಲೀಗ್ ಟಿ20 ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಎರಡು ಹೊಸ ಫ್ರಾಂಚೈಸಿಗಳನ್ನು ಅನಾವರಣಗೊಳಿಸಿದೆ.


Click it and Unblock the Notifications