ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾಫೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ನಿಮಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿದೆ. ಹುದ್ದೆಗೆ ಆಕಾಂಕ್ಷಿಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದೆ. ಆದರೆ ಐಆರ್‌ಸಿಟಿಸಿ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಕೇವಲ ಒಂದು ಪೋಸ್ಟ್ ಮಾತ್ರ ಖಾಲಿಯಿದೆ.
ಅಧಿಕೃತ ಐಆರ್‌ಸಿಟಿಸಿ ನೇಮಕಾತಿ 2023 ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ನವದೆಹಲಿ ಐಆರ್‌ಸಿಟಿಸಿ ಉತ್ತರ ವಲಯ ಕಚೇರಿಯಲ್ಲಿ ನೇಮಕಾತಿ ಮಾಡಲಾಗುತ್ತದೆ. ಈ ಉದ್ಯೋಗದ ವಯೋಮಿತಿ, ಮಾಸಿಕ ಆದಾಯ, ಅರ್ಹತೆ ಇತರೆ ಮಾಹಿತಿ ಇಲ್ಲಿದೆ, ಮುಂದೆ ಓದಿ....

ಐಆರ್‌ಸಿಟಿಸಿ ನೇಮಕಾತಿ 2023: ಹುದ್ದೆ ಹೆಸರು
ಐಆರ್‌ಸಿಟಿಸಿ ಉತ್ತರ ವಲಯದಲ್ಲಿ ಜಿಜಿಎಂ (ಇ8) ಸ್ಥಾನಕ್ಕಾಗಿ, ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾಫೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಡೆಪ್ಯುಟೇಶನ್ ಆಧಾರದ ಮೇಲೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅಧಿಕೃತ ಐಆರ್‌ಸಿಟಿಸಿ ನೇಮಕಾತಿ 2023 ಅಧಿಸೂಚನೆಯ ಪ್ರಕಾರ, ಕೇವಲ ಒಂದು ಸ್ಥಾನ ಮಾತ್ರ ಇದೆ.
ಐಆರ್‌ಸಿಟಿಸಿ ನೇಮಕಾತಿ ಅವಧಿ
ಐಆರ್‌ಸಿಟಿಸಿ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯನ್ನು 03 ವರ್ಷಗಳವರೆಗೆ ಅಥವಾ ಐಆರ್‌ಸಿಟಿಸಿಯು ಈ ಅಭ್ಯರ್ಥಿಯನ್ನು ಉಳಿಸಿಕೊಳ್ಳುವವರೆಗೆ ಉದ್ಯೋಗದ ಅವಧಿ ಇರಲಿದೆ.
ಐಆರ್‌ಸಿಟಿಸಿ ನೇಮಕಾತಿ ಅರ್ಹತೆ ಮತ್ತು ಅನುಭವ
ಐಆರ್‌ಸಿಟಿಸಿ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ, ಮೇಲೆ ತಿಳಿಸಲಾದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಆರ್‌ಪಿಎಫ್‌ಎಸ್/ ಐಆರ್‌ಎಚ್‌ಎಸ್ ಹೊರತುಪಡಿಸಿ ಭಾರತೀಯ ರೈಲ್ವೆಯ ಗ್ರೂಪ್ 'A' ಸೇವೆಗಳಾಗಿರಬೇಕು.
* ಐಟಿ ಮಾನ್ಯತೆ ಹೊಂದಿರುವ ಅಧಿಕಾರಿಗಳಿಗೆ ಆದ್ಯತೆ ನೀಡಲಾಗುವುದು.
* ಭಾರತೀಯ ರೈಲ್ವೆಯ ವಾಣಿಜ್ಯ ವಿಭಾಗದ ಅನುಭವ ಹೊಂದಿರುವ ಅಧಿಕಾರಿ.
* ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಅಧಿಕಾರಿಯ ಅನುಭವದ ವರ್ಷಗಳ ಸಂಖ್ಯೆ ಮತ್ತು ಅನುಭವದ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ವೇತನ, ವಯೋಮಿತಿ
ಐಆರ್‌ಸಿಟಿಸಿ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಿ ಆಯ್ಕೆಯಾದರೆ ಆಕಾಂಕ್ಷಿಗಳು ತಿಂಗಳಿಗೆ 67000 ರೂಪಾಯಿವರೆಗೆ ಮಾಸಿಕ ವೇತನವನ್ನು ಪಡೆಯಬಹುದಾಗಿದೆ. ಇನ್ನು ಈ ಹುದ್ದೆಗೆ ವಯೋಮಿತಿ 55 ರೂಪಾಯಿ ಆಗಿದೆ.
ಐಆರ್‌ಸಿಟಿಸಿ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಐಆರ್‌ಸಿಟಿಸಿ ನೇಮಕಾತಿ 2023 ಅಧಿಸೂಚನೆಗೆ ಅನುಸಾರವಾಗಿ, ಸಿದ್ಧರಿರುವ ಮತ್ತು ಅರ್ಹವಾದ ಅರ್ಜಿದಾರರು ತಮ್ಮ ಅರ್ಜಿ ನಮೂನೆಯನ್ನು ನಿಗದಿತ ಪ್ರೊಫಾರ್ಮಾದಲ್ಲಿ ಅಗತ್ಯವಿರುವ ದಾಖಲೆಗಳೊಂದಿಗೆ ಸಲ್ಲಿಸಬೇಕು. 15.12.2023 ಕ್ಕೂ ಮುನ್ನ ಐಆರ್‌ಸಿಟಿಸಿ ಕಾರ್ಪೊರೇಟ್ ಕಚೇರಿ, ನವದೆಹಲಿಗೆ ತಲುಪಿಸಬೇಕು.


Click it and Unblock the Notifications