ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದುತ್ತಿದೆ. ಯಾವುದೇ ಆಹಾರವನ್ನು ತಿನ್ನಬೇಕು ಅನಿಸಿದಾಗಲೂ ಜನರು ಹೋಟೆಲ್, ರೆಸ್ಟೋರೆಂಟ್‌ಗೆ ಹೋಗುವ ಬದಲಾಗಿ ಮನೆಗೆಯೇ ತಮಗಿಷ್ಟದ ಆಹಾರವನ್ನು ಆನ್‌ಲೈನ್ ಆಪ್ ಮೂಲಕ ಆರ್ಡರ್ ಮಾಡುತ್ತಾರೆ. ದೇಶದಲ್ಲಿ ಬಹುತೇಕ ಜನರು ಆನ್‌ಲೈನ್ ಫುಡ್ ಡೆಲಿವರಿ ಆಪ್ ವಿಚಾರಕ್ಕೆ ಬಂದಾಗ ಜೊಮ್ಯಾಟೊ, ಸ್ವಿಗ್ಗಿಯನ್ನು ಬಳಕೆ ಮಾಡುತ್ತಾರೆ.
ಆದರೆ ಇತ್ತೀಚೆಗೆ ತೆರಿಗೆ ಮೊದಲಾದವುಗಳು ಸೇರ್ಪಡೆಯಾಗಿ ನಮ್ಮ ಆನ್‌ಲೈನ್ ಆರ್ಡರ್‌ಗಳು ದುಬಾರಿಯಾಗುತ್ತಿದೆ. ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಸಮಸ್ಯೆಗಳು ಕೂಡಾ ಇರಲಿದೆ. ಇದು ಇತ್ತೀಚೆಗೆ ಗ್ರಾಹಕರಿಗೆ ತೊಂದರೆ ನೀಡಲು ಪ್ರಾರಂಭಿಸಿದೆ. ಇದನ್ನು ಹೋಗಲಾಡಿಸಲು ಭಾರತ ಸರ್ಕಾರವು ಒಎನ್‌ಡಿಸಿ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಅನ್ನು ಆರಂಭ ಮಾಡಿದೆ.

ಈ ಕೇಂದ್ರ ಸರ್ಕಾರದ ಆಪ್ ಸೆಪ್ಟೆಂಬರ್ 2022ರಲ್ಲಿ ಆರಂಭ ಮಾಡಲಾಗಿದೆ. ಆದರೆ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ವರದಿ ಪ್ರಕಾರ ಒಎನ್‌ಡಿಸಿಯಲ್ಲಿ ಇತ್ತೀಚೆಗೆ 10,000ಕ್ಕೂ ಅಧಿಕ ಆನ್‌ಲೈನ್ ಆರ್ಡರ್‌ಗಳನ್ನು ಮಾಡಲಾಗಿದೆ. ಜನರು ಹೆಚ್ಚು ವ್ಯಾಪಕವಾಗಿ ಈ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ.
ಒಎನ್‌ಡಿಸಿ ಮತ್ತು ಇತರ ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳು ವಿತರಿಸುವ ಡೆಲಿವರಿ ಮಾಡುವ ಬೆಲೆಗಳ ಹೋಲಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಅನೇಕರು ಪೋಸ್ಟ್ ಮಾಡುತ್ತಿದ್ದಾರೆ. ಹಾಗೆಯೇ ಒಎನ್‌ಡಿಸಿಯ ಆಹಾರದ ವೆಚ್ಚವನ್ನು ಕೂಡಾ ಹೋಲಿಕೆ ಮಾಡಲಾಗುತ್ತಿದೆ. ಇದನ್ನು ನೋಡಿದಾಗ ಒಎನ್‌ಡಿಸಿಯಲ್ಲಿ ಆಹಾರದ ವೆಚ್ಚವು ಅಗ್ಗವಾಗಿದೆ.
ಒಎನ್‌ಡಿಸಿ ಎಂದರೇನು?
ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಅನ್ನು ಭಾರತ ಸರ್ಕಾರವು ಅಭಿವೃದ್ಧಿಪಡಿಸಿದೆ. ಇದು ರೆಸ್ಟೋರೆಂಟ್‌ಗಳು ತಮ್ಮ ಆಹಾರವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ನೀಡುವ ಪ್ಲಾಟ್‌ಫಾರ್ಮ್ ಆಗಿದೆ. ಇದಲ್ಲದೆ, ಇದು ದಿನಸಿ ಸಾಮಾನುಗಳು, ಮನೆಯ ಅಲಂಕಾರಿಕ ವಸ್ತುಗಳು, ಸ್ವಚ್ಛಗೊಳಿಸುವ ಅಗತ್ಯ ವಸ್ತುಗಳು ಇತ್ಯಾದಿಗಳನ್ನು ಸಹ ನೀಡುತ್ತದೆ. ಸ್ವಿಗ್ಗಿಯ ಇನ್‌ಸ್ಟಾ ಮಾರ್ಟ್, ಜೆಪ್ಟೊ, ಬ್ಲಿಂಕಿಂಟ್‌ನಂತಹ ಆಪ್‌ಗಳು ಇದಾಗಿದೆ.
ಸ್ವಿಗ್ಗಿ, ಜೊಮ್ಯಾಟೊದಿಂದ ಗ್ರಾಹಕರಿಂದ ಶೇ. 5 ಜಿಎಸ್‌ಟಿ ಸಂಗ್ರಹ
ದೇಶದ ಪ್ರಮುಖ ಆಹಾರ ಪೂರೈಕೆ ಅಪ್ಲಿಕೇಷನ್ (food delivery application) ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಕಂಪನಿಗಳು ಹೊಸ ವರ್ಷದಿಂದ ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ. 5 ರಷ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನ್ನು ಸಂಗ್ರಹ ಮಾಡುತ್ತಿದೆ.
ಕೇಂದ್ರ ಸರ್ಕಾರದ 45ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಸೆಪ್ಟೆಂಬರ್‌ನಲ್ಲಿ ನಡೆದಿದೆ. ಈ ಸಭೆಯಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಕಂಪನಿಗಳು ಗ್ರಾಹಕರಿಂದಲೇ ನೇರವಾಗಿ ಶೇ. 5 ರಷ್ಟು ಜಿಎಸ್‌ಟಿ ಸಂಗ್ರಹ ಮಾಡುವ ಪ್ರಸ್ತಾಪವನ್ನು ಅನುಮೋದನೆ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಭಾರತದಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊ ರೀತಿಯ ಕಂಪನಿಗಳು ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹಿಸಬೇಕು," ಎಂದು ಹೇಳಿದ್ದಾರೆ.
ಈಗ ಗ್ರಾಹಕರು ಜೊಮ್ಯಾಟೊ ಹಾಗೂ ಸ್ವಿಗ್ಗಿ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಆಹಾರದ ಮೇಲೆ ಶೇಕಡ 5 ರಷ್ಟು ತೆರಿಗೆಯನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್‌ಗಳಿಗೆ ನೀಡುತ್ತಿದ್ದವು. ಆದರೆ ಕೆಲವು ರೆಸ್ಟೋರೆಂಟ್‌ಗಳು ಈ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಲ್ಲ. ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ.
ಆದರೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿಲ್ಲ. ಕೆಲವು ರೆಸ್ಟೋರೆಂಟ್ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಫುಡ್ ಡೆಲಿವರಿ ಆಪ್ಲಿಕೇಷನ್‌ಗಳು ಜನವರಿ 1 ರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯವನ್ನು ಮಾಡಲಿದೆ. ಇದರಿಂದಾಗಿ ರೆಸ್ಟೋರೆಂಟ್‌ಗಳು ಮ್ಮ ಆನ್ ಲೈನ್ ವ್ಯವಹಾರದ ಮಾಹಿತಿಗಳನ್ನು ಮುಚ್ಚಿಡಲು ಸಾಧ್ಯವಾಗಲಾರದು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications