ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷವು ಸೋಮವಾರ ಹೂಡಿಕೆದಾರ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ಭಾರತೀಯ ಷೇರುಗಳು ಈ ವಾರದಲ್ಲಿ ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಇಂದಿನ ಮುಂಜಾನೆಯ ವಹಿವಾಟಿನಲ್ಲಿ ಎರಡು ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು ಶೇಕಡ 1 ರಷ್ಟು ಕುಸಿತವಾಗಿದೆ.
ಭಾರತೀಯ ಷೇರುಗಳ ನಷ್ಟದೊಂದಿಗೆ ವಹಿವಾಟು ಆರಂಭಿಸಿದ್ದು ಹೂಡಿಕೆದಾರರು ಬೆಳಗಿನ ಅವಧಿಯಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಕಂಡಿದ್ದಾರೆ. ಇಂದಿನ ಆರಂಭಿಕ ವ್ಯವಹಾರಗಳಲ್ಲಿ, ನಿಫ್ಟಿ 50 ಮುಕ್ತಾಯದ ಅವಧಿ 19,653.50 ರಿಂದ 19,539.45 ಕ್ಕೆ ವಹಿವಾಟು ಪ್ರಾರಂಭಿಸಿದೆ. ಶೇಕಡ 0.90ರಷ್ಟು ಇಳಿದು ದಿನದ ಕನಿಷ್ಠ ಮಟ್ಟ 19,480.50 ಕ್ಕೆ ತಲುಪಿದೆ.

ಈ ನಡುವೆ ನ್ಸೆಕ್ಸ್ 65,560.07 ರಲ್ಲಿ ವಹಿವಾಟು ಆರಂಭಿಸಿದೆ. ಶೇಕಡ 0.85 ರಷ್ಟು ಕುಸಿದು ದಿನದ ಕನಿಷ್ಠ 65,434.61 ಕ್ಕೆ ಇಳಿಕೆಯಾಗಿದೆ. ಶುಕ್ರವಾರದಂದು ಸೆನ್ಸೆಕ್ಸ್ 65,995.63ಕ್ಕೆ ವಹಿವಾಟು ಕೊನೆ ಮಾಡಿದೆ. ಆದರೆ, ನಂತರದಲ್ಲಿ ಮಾರುಕಟ್ಟೆ ಕೊಂಚ ಚೇತರಿಸಿಕೊಂಡಿದೆ. ಇಂದು ಬೆಳಿಗ್ಗೆ 9.51ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇಕಡ 0.39 ರಷ್ಟು ಕುಸಿದು 65,739.40ಕ್ಕೆ ತಲುಪಿದೆ. ನಿಫ್ಟಿ 50 ಸುಮಾರು ಶೇಕಡ 0.37 ರಷ್ಟು ಕುಸಿದು 19,579.80 ಅಂಕಗಳಿಗೆ ತಲುಪಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡ 1.5 ಮತ್ತು ಶೇಕಡ 2 ರಷ್ಟು ಕುಸಿದಿದೆ. ಬಿಎಸ್‌ಇಯಲ್ಲಿ ಲೀಸ್ಟ್ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಸುಮಾರು 320 ಲಕ್ಷ ಕೋಟಿ ರೂಪಾಯಿಗಳಿಂದ ಸುಮಾರು 316 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ನಂತರ ಮಾರುಕಟ್ಟೆ ಮೌಲ್ಯ 317 ಲಕ್ಷ ಕೋಟಿ ರೂಪಾಯಿಗೆ ಏರಿದೆ.
ಎನ್‌ಎಸ್‌ಇಯಲ್ಲಿ ಟಾಪ್ ಲೂಸರ್‌ಗಳು
ಅದಾನಿ ಪೋರ್ಟ್ಸ್ (2.76% ಇಳಿಕೆ), ಬಿಪಿಸಿಎಲ್ (2.36% ಇಳಿಕೆ), ಅದಾನಿ ಎಂಟರ್‌ಪ್ರೈಸಸ್ (1.71% ಇಳಿಕೆ), ಮತ್ತು ಟೈಟಾನ್ (1.56% ಇಳಿಕೆ) ಕಂಡಿದೆ. ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷದ ನಡುವೆ ಆಸ್ತಿಯ ಬೇಡಿಕೆ ಹೆಚ್ಚಾಗುತ್ತದೆ. ವಾರಾಂತ್ಯದಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆಯಿಂದಾಗಿ ಸೋಮವಾರ ಚಿನ್ನದ ಬೆಲೆಗಳು ಶೇಕಡ 1 ಕ್ಕಿಂತ ಅಧಿಕ ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ಶೇಕಡ 1 ರಷ್ಟು ಏರಿಕೆಯಾಗಿ, 1,850.87 ಡಾಲರ್‌ಗೆ ತಲುಪಿದರೆ, ಯುಎಸ್ ಗೋಲ್ಡ್ ಫ್ಯೂಚರ್ಸ್ ಶೇಕಡ 1.1 ರಷ್ಟು ಹೆಚ್ಚಾಗಿ 1,865.20 ಡಾಲರ್‌ಗೆ ತಲುಪಿದೆ. ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ದರವು 58,200 ರೂಪಾಯಿ ಆಗಿದ್ದರೆ, ಅದೇ ಪ್ರಮಾಣದ 22 ಕ್ಯಾರೆಟ್ ಚಿನ್ನದ ದರವು 53,350 ರೂಪಾಯಿ ಆಗಿದೆ.


Click it and Unblock the Notifications