ಆದಾಯ ತೆರಿಗೆ ಇಲಾಖೆ ನಿಗದಿ ಪಡಿಸಿರುವ ಮೊತ್ತಕ್ಕಿಂತ ಅಧಿಕ ವಾರ್ಷಿಕ ಆದಾಯವನ್ನು ಹೊಂದಿದ್ದರೆ ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಅದಕ್ಕೂ ಕೂಡಾ ಗಡುವು ಇದೆ. ಪ್ರಸ್ತುತ 2021-2022 ಹಣಕಾಸು ವರ್ಷದ ಐಟಿಆರ್ ಸಲ್ಲಿಕೆಯ ಗಡುವು ಸಮೀಪವಾಗಿದೆ.
ಹೌದು 2021-2022 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಈ ಹಿಂದೆ ಜುಲೈ 31, 2022 ಕೊನೆಯ ದಿನಾಂಕವಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಗಡುವು ವಿಸ್ತರಣೆಯ ಬೇಡಿಕೆ ಇಟ್ಟಿದ್ದರು. ಪೋರ್ಟಲ್‌ನಲ್ಲಿ ಹಲವಾರು ಸಮಸ್ಯೆಯಿದೆ. ಐಟಿಆರ್ ಫೈಲಿಂಗ್‌ಗೆ ಹೆಚ್ಚು ಸಮಯ ಬೇಕಾಗುತ್ತಿದೆ. ಆದ್ದರಿಂದಾಗಿ ಗಡುವು ವಿಸ್ತರಣೆ ಮಾಡಬೇಕು ಎಂಬುವುದು ಆದಾಯ ತೆರಿಗೆ ಪಾವತಿದಾರರ ಬೇಡಿಕೆಯಾಗಿತ್ತು.
ಆದರೂ ಗಡುವನ್ನು ವಿಸ್ತರಣೆ ಮಾಡಿಲ್ಲ. ಹಾಗೆಯೇ ಡಿಸೆಂಬರ್ 31, 2022ರವರೆಗೆ ತಡವಾದ ಐಟಿಆರ್ ಅನ್ನು ಸಲ್ಲಿಸುವ ಅವಕಾಶವಿದೆ. ಅದಕ್ಕಾಗಿ ದಂಡವನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ. ನೀವು ಎಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ, ಹಾಗೂ ಈ ಬಿಲೇಟೆಡ್ ಅಥವಾ ತಡವಾದ ರಿಟರ್ನ್ ಎಂದರೇನು, ಮೊದಲಾದ ಮಾಹಿತಿ ಇಲ್ಲಿದೆ ಮುಂದೆ ಓದಿ....
ಎಷ್ಟು ದಂಡವನ್ನು ಪಾವತಿಮಾಡಬೇಕು?
ಆದಾಯ ತೆರಿಗೆ ನಿಯಮದ ಸೆಕ್ಷನ್ 139(1) ರ ಪ್ರಕಾರ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದರೆ ಸೆಕ್ಷನ್ 234Aರ ಅಡಿಯಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ. ಡಿಸೆಂಬರ್ 31, 2022ರ ಒಳಗೆ ತಡವಾದ ಐಟಿಆರ್ ಅನ್ನು ಸಲ್ಲಿಸಬಹುದು. ಹಾಗೆಯೇ ಈ ಸಂದರ್ಭದಲ್ಲಿ 5 ಸಾವಿರ ರೂಪಾಯಿ ದಂಡವನ್ನು ಕೂಡಾ ಪಾವತಿಸಬೇಕಾಗುತ್ತದೆ. ಇನ್ನು ಆದಾಯ ತೆರಿಗೆ ಪಾವತಿದಾರರ ಒಟ್ಟು ಆದಾಯ 5 ಲಕ್ಷ ರೂಪಾಯಿಗಿಂತ ಕಡಿಮೆಯಾಗಿದ್ದರೆ ಅವರಿಗೆ 1 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಆದರೆ 2.50 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರಿಗೆ ಯಾವುದೇ ದಂಡವಿಲ್ಲ. ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗಿದ್ದರೆ ನಿಮಗೆ ಇಲಾಖೆಯು ಈ ಬಗ್ಗೆ ವಾರ್ನಿಂಗ್ ನೀಡಲಿದೆ. ಹೀಗಾದಲ್ಲಿ ನೀವು ಡಿಸೆಂಬರ್ 31ರ ಒಳಗೆ ಐಟಿಆರ್ ಪಾವತಿಸಬೇಕಾಗುತ್ತದೆ.
ಪರಿಷ್ಕೃತ ಐಟಿಆರ್ ಡಿಸೆಂಬರ್ 31ರ ಒಳಗೆ ಫೈಲ್ ಮಾಡಿ
ಇನ್ನು ಯಾರದರೂ ಐಟಿಆರ್ ಅನ್ನು ತಪ್ಪಾಗಿ ಫೈಲ್ ಮಾಡಿದರೆ, ಪರಿಷ್ಕೃತ ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಈ ಎರಡೂ ಫಾರ್ಮ್ ಅನ್ನು ಡಿಸೆಂಬರ್ 31, 2022ರ ಒಳಗೆ ಸಲ್ಲಿಸಬೇಕಾಗುತ್ತದೆ. ಇದು ಹಣಕಾಸು ವರ್ಷ 2021-2022ರ ಐಟಿಆರ್ ಆಗಿದೆ.
ಪರಿಷ್ಕೃತ, ತಡವಾದ ರಿಟರ್ನ್ ಎಂದರೇನು?
ತಡವಾದ ರಿಟರ್ನ್ ಎಂದರೆ ಗಡುವಿನ ಬಳಿಕ ಸಲ್ಲಿಸಲಾಗುವ ಐಟಿಆರ್ ಆಗಿದೆ. ಇದಕ್ಕೆ ತೆರಿಗೆದಾರರು ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಮೊದಲ ಬಾರಿಗೆ ರಿಟರ್ನ್ ಸಲ್ಲಿಸಿದಾಗ ಯಾವುದಾದರೂ ತಪ್ಪಾದರೆ ಅದನ್ನು ಸರಿಪಡಿಸುವುದಕ್ಕೆ ಪರಿಷ್ಕೃತ ಐಟಿಆರ್ ಎಂದು ಕರೆಯಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139(4)ರ ಅಡಿಯಲ್ಲಿ ತಡವಾದ ಐಟಿಆರ್ ಅನ್ನು ಸಲ್ಲಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139. (5)ರ ಅಡಿಯಲ್ಲಿ ಪರಿಷ್ಕೃತ ಐಟಿಆರ್ ಫೈಲ್ ಮಾಡಲಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications