ಸಾಮಾನ್ಯವಾಗಿ ಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ತಾವಾಗಿಯೇ ಫೈಲ್ ಮಾಡಲು ಬಯಸುತ್ತಾರೆ. ಆದರೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಕೊಂಚ ಕಷ್ಟದ ಕೆಲಸವೇ ಹೌದು. ಐಟಿಆರ್ ಅನ್ನು ಫೈಲ್ ಮಾಡುವಲ್ಲಿ ಎಲ್ಲರೂ ಕೂಡಾ ಸ್ಪೆಷಾಲಿಟಿಯನ್ನು ಹೊಂದಿರುವುದಿಲ್ಲ. ಹಾಗಿರಯವಾಗ ಕೆಲವು ತಪ್ಪುಗಳು ಆಗುವುದು ಸಹಜವಾಗಿದೆ. ಈಗ ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಬಹುದಾಗಿದೆ. ಆನ್‌ಲೈನ್ ವಿಧಾನ ಸರಳವಾದರೂ ಕೂಡಾ ಹಲವಾರು ತಪ್ಪುಗಳು ಆಗುತ್ತದೆ.
ಪ್ರಸ್ತುತ ಜನರು ಅಧಿಕವಾಗಿ ಆನ್‌ಲೈನ್‌ನಲ್ಲಿ ಐಟಿಆರ್ ಅನ್ನು ಸಬ್‌ಮಿಟ್ ಮಾಡುತ್ತಾರೆ. ಆದರೆ ಈ ವೇಳೆ ಹಲವಾರು ತಪ್ಪುಗಳು ಆಗಬಹುದು, ಈ ತಪ್ಪುಗಳಿಂದಾಗಿ ನಿಮ್ಮ ಐಟಿಆರ್ ಫೈಲಿಂಗ್ ಫೇಲ್ ಆಗಬಹುದು. ಕೆಲವು ಸಂದರ್ಭಗಳಲ್ಲಿ ದಂಡವು ಕೂಡಾ ಬೀಳಲಿದೆ. ನೀವು ಹಲವಾರು ಬಾರಿ ಮಾಡಿರುವ ತಪ್ಪನ್ನು ಸರಿಪಡಿಸುವ ಮೂಲಕ ಅಥವಾ ಯಾವುದೇ ತಪ್ಪು ಆಗದಂತೆ ಗಮನಹರಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದು. ನೀವು ಐಟಿಆರ್ ಫೈಲ್ ಮಾಡುವಾಗ ಈ 7 ತಪ್ಪುಗಳನ್ನು ಮಾಡಲೇಬಾರದು. ಇಲ್ಲಿದೆ ವಿವರ ಮುಂದೆ ಓದಿ..

1. ತಪ್ಪಾದ ಐಟಿಆರ್ ಫಾರ್ಮ್ ಬಳಕೆ: ನೀವು ತಪ್ಪಾದ ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡುವುದು ನಿಮ್ಮ ಐಟಿಆರ್ ಫೈಲಿಂಗ್ ಅನ್ನೇ ತಪ್ಪು ಆಗಲಿದೆ. ಆದಾಯ ತೆರಿಗೆ ಇಲಾಖೆ ನಿಮ್ಮ ಐಟಿಆರ್ ಅನ್ನು ತಿರಸ್ಕರಿಸಲಿದೆ. ಆದ್ದರಿಂದಾಗಿ ಸರಿಯಾಗಿ ಫಾರ್ಮ್ ನೋಡಿಕೊಂಡು ಐಟಿಆರ್ ಫೈಲ್ ಮಾಡಿಕೊಳ್ಳಿ. ಐಟಿಆರ್ ಫಾರ್ಮ್ 1 ವೇತನ ಪಡೆಯುವ ವರ್ಗಕ್ಕೆ ಆಗಿದೆ. ಐಟಿಆರ್ ಫಾರ್ಮ್ 2 ಹೂಡಿಕೆಯಿಂದ ಲಾಭವನ್ನು ಪಡೆಯುವ ವೇತನ ಪಡೆಯುವ ವರ್ಗವು ಫೈಲ್ ಮಾಡಬೇಕಾಗಿದೆ. ಐಟಿಆರ್ ಫಾರ್ಮ್ 3 ಯಾರು ಸ್ವ ಉದ್ಯೋಗ ಮಾಡುತ್ತಾರೋ, ಬ್ಯುಜಿನೆಟ್ ಲಾಭದಿಂದ ಆದಾಯವನ್ನು ಪಡೆಯುತ್ತಾರೋ ಅವರು ಫೈಲ್ ಮಾಡಬೇಕಾಗುತ್ತದೆ.
ITR 2023: ಗಡುವಿಗೂ ಮುನ್ನ ಐಟಿಆರ್ ಫೈಲ್ ಮಾಡದಿದ್ರೆ 5,000 ರೂ. ದಂಡ, ಫೈಲಿಂಗ್ ವಿಧಾನ ನೋಡಿ
2. ಫಾರ್ಮ್ 26AS ಅನ್ನು ಚೆಕ್ ಮಾಡದೆ ಇರುವುದು: ಫಾರ್ಮ್ 26AS ನಿಮ್ಮ ಆದಾಯದ ಮಾಹಿತಿಯನ್ನು ಒಳಗೊಂಡಿರುತ್ತದೆ. ಮುಂಗಡ ತೆರಿಗೆ ಪಾವತಿ, ಟಿಡಿಎಸ್, ತೆರಿಗೆ ಪಾವತಿ, ತೆರಿಗೆ ಕ್ರೆಡಿಟ್ ಮೊದಲಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಾರ್ಮ್ 26AS ಮತ್ತು ಉದ್ಯೋಗದಾತರ ಫಾರ್ಮ್ 16 ರ ಮಾಹಿತಿಯು ಸಾಂದರ್ಭಿಕವಾಗಿ ಹೊಂದಿಕೆಯಾಗುವುದಿಲ್ಲ. ಆದ್ದರಿಂದ, ನಿಮ್ಮ ಐಟಿಆರ್ ಅನ್ನು ಸಲ್ಲಿಸುವ ಮೊದಲು ಫಾರ್ಮ್ 26AS ಹಾಗೂ ಫಾರ್ಮ್ 16 ಹೋಲಿಸುವುಉದ ಮುಖ್ಯ. ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
3. ಪ್ರತಿ ಉಳಿತಾಯ ಖಾತೆ ಸೇರಿಸಲದಿರುವುದು: ಕೆಲವು ಜನರಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ನೀವು ಯಾವುದೇ ಓವರ್‌ಸೀಸ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ನಿಮ್ಮ ಐಟಿಆರ್‌ನಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಯಾವುದೇ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿದ್ದರೆ, ಅದನ್ನು ಕೂಡಾ ಉಲ್ಲೇಖಿಸುವುದು ಮುಖ್ಯವಾಗುತ್ತದೆ. ಈ ಮಾಹಿತಿ ಬಹಿರಂಗಪಡಿಸಿದರೆ, ನೀವು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗದೆ ಇರಬಹುದು.
4. ಆದಾಯ ಮೂಲ ಬಹಿರಂಗಪಡಿಸದೆ ಇರುವುದು: ನಿಮ್ಮ ವೇತನ ಮತ್ತು ನಿಮ್ಮ ವ್ಯವಹಾರದ ಹೊರತಾಗಿ, ಬೇರೆ ಯಾವುದೇ ಮೂಲದಿಂದ ಆದಾಯವನ್ನು ಪಡೆಯುತ್ತಿರಬಹುದು. ವಸತಿ ಬಾಡಿ, ಎಫ್‌ಡಿ ಬಡ್ಡಿ, ಕ್ಯಾಪಿಟಲ್ ಗೇನ್ ಇತ್ಯಾದಿಗಳನ್ನು ಉಲ್ಲೇಖಿಸುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ತೆರಿಗೆದಾರರು ತಮ್ಮ ವೇತನ ಅಥವಾ ವ್ಯಾಪಾರದ ಆದಾಯವನ್ನು ಉಲ್ಲೇಖ ಮಾಡುತ್ತಾರೆ. ಹಾಗೆಯೇ ಹಣಕಾಸು ವರ್ಷದಲ್ಲಿ ಉದ್ಯೋಗ ಬದಲಾವಣೆ ಮಾಡಿದ್ದರೂ ಅದರ ಗಳಿಕೆಯನ್ನು ಬಹಿರಂಗಪಡಿಸಬೇಕಾಗುತ್ತದೆ.
5. ಐಟಿಆರ್-ವಿ ಮತ್ತು ಸಿಪಿಸಿ: ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆನ್‌ಲೈನ್ ಮೂಲಕ ಸಲ್ಲಿಸಿದ 120 ದಿನಗಳ ನಂತರ, ನೀವು ಆಧಾರ್-ಆಧಾರಿತ ಪರಿಶೀಲನೆ ಮತ್ತು ಡಿಜಿಟಲ್ ಸಹಿಯನ್ನು ಬಳಸದಿದ್ದರೆ ನೀವು ಐಟಿಆರ್-ವಿ ಯ ಸಹಿ ಮಾಡಿದ ಪ್ರತಿಯನ್ನು ಬೆಂಗಳೂರಿನ ಐಟಿ ಇಲಾಖೆಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ (ಸಿಪಿಸಿ) ತಲುಪಿಸಬೇಕು. ಐಟಿಆರ್-ವಿ ಅನ್ನು ನೀವು ಸಿಪಿಸಿಗೆ ಕಳುಹಿಸದಿದ್ದರೆ ನಿಮ್ಮ ಫೈಲ್ ಅನ್ನು ಗುರುತಿಸಲಾಗುವುದಿಲ್ಲ.
6. ಅಡ್ವಾನ್ಸ್ ಟ್ಯಾಕ್ಸ್ ಪಾವತಿಸದಿರುವುದು: ನೀವು ವೇತನ ಪಡೆಯುವ ವರ್ಗವಾಗಿದ್ದರೆ, ನಿಮಗೆ ಉದ್ಯೋಗ ನೀಡಿರುವ ಸಂಸ್ಥೆಯು ಟಿಡಿಎಸ್ ರೂಪದಲ್ಲಿ ನಿಮ್ಮ ವೇತನದಿಂದ ಸೂಕ್ತವಾದ ತೆರಿಗೆಯನ್ನು ಕಡಿತ ಮಾಡುತ್ತಾರೆ. ಆದ್ದರಿಂದ ನೀವು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ನೀವು ಸ್ವಯಂ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಸಂಬಳದ ಹೊರತಾಗಿ ಇತರ ಮೂಲಗಳಿಂದ ಆದಾಯವನ್ನು ಹೊಂದಿದ್ದರೆ, ನೀವು ಅಡ್ವಾನ್ಸ್ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಮುಂಗಡ ತೆರಿಗೆಯನ್ನು ಸಕಾಲದಲ್ಲಿ ಪಾವತಿಸದಿದ್ದರೆ ಬಡ್ಡಿ ಸೇರ್ಪಡೆಯಾಗುತ್ತದೆ.
7. ಪರಿಷ್ಕೃತ ಐಟಿಆರ್ ಸಲ್ಲಿಸದಿರುವುದು: ಐಟಿಆರ್ ಫೈಲಿಂಗ್‌ನಲ್ಲಿ ದೋಷಗಳು ಅಥವಾ ತಪ್ಪುಗಳನ್ನು ಸರಿಪಡಿಸಲು ನೀವು ಪರಿಷ್ಕೃತ ಐಟಿಆರ್ ಅನ್ನು ಐಟಿ ಇಲಾಖೆಗೆ ಸಲ್ಲಿಸುವ ಅವಕಾಶವಿದೆ. ನಿಮ್ಮ ಐಟಿಆರ್ ಅನ್ನು ಪರಿಶೀಲಿಸುವಾಗ, ನೀವು ತಿದ್ದುಪಡಿ ಮಾಡಿದ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಬೇಕು.


Click it and Unblock the Notifications