For Quick Alerts
ALLOW NOTIFICATIONS  
For Daily Alerts

ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ

|

ದೇಶದಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಳವಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಗೆ ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಒಂದು ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ನಿರ್ಧಾರ ಮಾಡಲಾಗಿದೆ.

 

ಹೌದು, ಛತ್ತೀಸ್‌ಗಢ ಸರ್ಕಾರವು ಮುಂದಿನ ಹಣಕಾಸು ವರ್ಷದಿಂದ ಉದ್ಯೋಗವಿಲ್ಲದ ಯುವಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದು ಗುರುವಾರ ಹೇಳಿದೆ. ಈ ವರ್ಷದಲ್ಲಿ ಛತ್ತೀಸ್‌ಗಢ ವಿಧಾನಭೆ ಚುನಾವಣೆಗ ಅಂತ್ಯವಾಗಲಿದೆ, ಇದಕ್ಕೂ ಮುನ್ನ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಣೆಯನ್ನು ಮಾಡಿದ್ದಾರೆ.

 

ನಿರುದ್ಯೋಗ ದರ ಎಂದರೇನು, ಲೆಕ್ಕಾಚಾರ ಹೇಗೆ?ನಿರುದ್ಯೋಗ ದರ ಎಂದರೇನು, ಲೆಕ್ಕಾಚಾರ ಹೇಗೆ?

2018ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವೂ ಪ್ರಮುಖವಾಗಿ ನಿರುದ್ಯೋಗ ಭತ್ಯೆ ನೀಡುವ ಘೋಷಣೆಯನ್ನು ಮಾಡಿತ್ತು. ಹಾಗೆಯೇ ಸುಮಾರು 15 ವರ್ಷದ ಬಳಿಕ ಮತ್ತೆ ಅಧಿಕಾರವನ್ನು ತನ್ನ ಕೈಗೆ ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಮುಂದಿನ ಹಣಕಾಸು ವರ್ಷ ಅಂದರೆ 2023-2024ರಲ್ಲಿ ಉದ್ಯೋಗವನ್ನು ಹೊಂದಿರದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಭತ್ಯೆಯನ್ನು ನೀಡಲಾಗುವುದು," ಎಂದು ತಿಳಿಸಿದ್ದಾರೆ.

 ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಸ್ತಾರ್ ಜಿಲ್ಲೆಯ ಜಗ್ದಲ್‌ಪುರದ ಲಾಲ್‌ಬಾಗ್ ಪರೇಡ್ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಈ ಘೋಷಣೆಯನ್ನು ಮಾಡಿದ್ದಾರೆ. ಭೂಪೇಶ್ ಬಘೇಲ್ ಬೇರೆ ಬೇರೆ ಘೋಷಣೆಯನ್ನು ಕೂಡಾ ಮಾಡಿದ್ದಾರೆ.

ರಾಯಪುರ ಏರ್‌ಪೋರ್ಟ್ ಸಮೀಪ ಏರೋಸಿಟಿ, ಕಾರ್ಮಿಕರಿಗೆ ನಿವೇಶನ ಯೋಜನೆ ಮತ್ತು ಮಹಿಳಾ ಉದ್ಯಮಿಗಳಿಗಾಗಿ ಯೋಜನೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ಈ ಘೋಷನೆಯನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ರಾಯಪುರದ ಸ್ವಾಮಿ ವಿವೇಕಾನಂದ ಏರ್‌ಪೋರ್ಟ್‌ನಲ್ಲಿ ಏರೋಸಿಟಿಯ ಅಭಿವೃದ್ಧಿ ಮಾಡಲಾಗುವುದು. ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಏರ್‌ಪೋರ್ಟ್‌ ಪ್ರದೇಶದಲ್ಲಿ ವಾಣಿಜ್ಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

English summary

Jobless Youth Of Chhattisgarh State to Receive Unemployment Allowance From Next Financial Year

Unemployment Allowance: Jobless Youth Of Chhattisgarh State to Receive Unemployment Allowance From Next Financial Year.
Story first published: Thursday, January 26, 2023, 17:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X